Last Updated:
ತೆಲಂಗಾಣದ ಯುವ ಕ್ರಿಕೆಟಿಗ ವೈಷ್ಣವ್ ವಿಶ್ವನಾಥ್ ನಿಧನರಾದ ಕ್ರಿಕೆಟರ್. 21 ವರ್ಷದ ವೈಷ್ಣವ್ ಇನ್ನೂ ದೇಶೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರಲಿಲ್ಲ. ಆದರೆ ತೆಲಂಗಾಣ ಟಿ20 ಲೀಗ್ 2026 ರಲ್ಲಿ ವಾರಂಗಲ್ ವಾರಿಯರ್ಸ್ನ ಭಾಗವಾಗಿದ್ದರು.
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ (Test Series) ಆಗಸ್ಟ್ 15 ರಂದು ಗಾಲೆಯಲ್ಲಿ ಪ್ರಾರಂಭವಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ, ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ಬ್ಯಾಟಿಂಗ್ ನಡೆಸುತ್ತಿದೆ. ಭಾರತ-ಶ್ರೀಲಂಕಾ ಸರಣಿ ಆರಂಭವಾಗುತ್ತಿದ್ದಂತೆ ಕ್ರಿಕೆಟ್ ಲೋಕದಿಂದ ದುಃಖದ ಸುದ್ದಿ ಹೊರಬಿದ್ದಿದೆ. ಭಾರತದ ಯುವ ಕ್ರಿಕೆಟಿಗನ ಸಾವಿಗೆ ಕ್ರಿಕೆಟ್ ಸಮೂಹ ಸಂತಾಪ ಸೂಚಿಸಿದೆ.














