ಜಪಾನ್​​ನಲ್ಲಿ ಭಾರತ ಫುಟ್ಬಾಲ್ ತಂಡಗಳ ಸೆಣೆಸಾಟ; BFC ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews

BFC ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್


Last Updated:

ರಿಲಯನ್ಸ್ ಫೌಂಡೇಷನ್ ಆರ್ಎಫ್ ಡಿಎಲ್ (ರಿಲಯನ್ಸ್ ಫೌಂಡೇಶಷನ್ ಡೆವಲಪ್‌ಮೆಂಟ್ ಲೀಗ್)ನ ಅಗ್ರ ಮೂರು ತಂಡಗಳಿಗೆ ಜಪಾನ್ ಅಂತಾರಾಷ್ಟ್ರೀಯ ಪ್ರವಾಸ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಬಿಎಫ್​ಸಿ ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

BFC ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್
BFC ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್

ರಿಲಯನ್ಸ್ ಫೌಂಡೇಷನ್ ತನ್ನ ಮಾತಿನಂತೆಯೇ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಭಾರತೀಯ ರಾಷ್ಟ್ರೀಯ ಫುಟ್ ಬಾಲ್ ತಂಡದ ಪ್ರತಿಭೆಗಳ ಗಣಿಯನ್ನು ಬಲಪಡಿಸುವ ದಿಕ್ಕಿನಲ್ಲಿ ಇದೀಗ ರಿಲಯನ್ಸ್ ಫೌಂಡೇಷನ್ ಆರ್ಎಫ್ ಡಿಎಲ್ (ರಿಲಯನ್ಸ್ ಫೌಂಡೇಶಷನ್ ಡೆವಲಪ್‌ಮೆಂಟ್ ಲೀಗ್)ನ ಅಗ್ರ ಮೂರು ತಂಡಗಳಿಗೆ ಜಪಾನ್ ಅಂತರರಾಷ್ಟ್ರೀಯ ಪ್ರವಾಸ ಘೋಷಣೆ ಮಾಡಿದೆ. ಅಂದ ಹಾಗೆ ಈ ಆರ್ಎಫ್ ಡಿಎಲ್ ಎಂಬುದು ಭಾರತದ ಪ್ರಮುಖ ಯು-21 (U-21) ಯುವ ಫುಟ್‌ಬಾಲ್ ಸ್ಪರ್ಧೆ. 2025–26ರ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆಂಗಳೂರು ಎಫ್‌ಸಿ (Bengaluru FC), ಎಫ್‌ಸಿ ಗೋವಾ (FC Goa) ಮತ್ತು ಪಂಜಾಬ್ ಎಫ್‌ಸಿ (Punjab FC) ತಂಡಗಳು ಜಪಾನ್‌ನ ಪ್ರಮುಖ ತಂಡಗಳ ವಿರುದ್ಧ ಸ್ಪರ್ಧಿಸುವ ಅವಕಾಶವನ್ನು ಪಡೆದುಕೊಂಡಿವೆ.

ಯುವ ಪ್ರತಿಭೆಗಳ ಬೆಳವಣಿಗಾಗಿ ರಿಲಯನ್ಸ್ ಫೌಂಡೇಷನ್ ನಿರಂತರವಾಗಿ ಮಾಡುತ್ತಿರುವ ಹೂಡಿಕೆಯ ಭಾಗವೇ ಈ ಪ್ರವಾಸವಾಗಿದೆ. ಜುಲೈ 11 ರಿಂದ 23 ರವರೆಗೆ ಜಪಾನ್‌ನ ಫುಕುವೋಕಾದಲ್ಲಿ ಭಾರತದ ಮೂರು ಕ್ಲಬ್‌ಗಳು ಜಪಾನ್‌ನ ಪ್ರಮುಖ ಯುವ ತಂಡಗಳಾದ ಅವಿಸ್ಪಾ ಫುಕುವೋಕಾ ಯು18, ಸಾಗನ್ ತೋಸು ಯು18, ಗಿರಾವಾಂಜ್ ಕಿಟಾಕ್ಯುಶು ಯು18 ಮತ್ತು ಎಫ್‌ಸಿ ಬಲೈನ್ ಶಿಮೋನೊಸೆಕಿ ಯು21 ವಿರುದ್ಧ ಸೆಣಸಾಡಲಿವೆ.

ಭಾರತದ ಅತ್ಯಂತ ಭರವಸೆಯ ಯುವ ಫುಟ್‌ಬಾಲ್ ಆಟಗಾರರಿಗೆ ತೀವ್ರವಾದ ಸ್ಪರ್ಧೆ, ವಿಭಿನ್ನ ಆಟದ ಶೈಲಿಗಳು ಮತ್ತು ಏಷ್ಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಡೆವಲಪ್ ಮೆಂಟ್ ಎಕೋ ಸಿಸ್ಟಮ್ ಪರಿಚಯಿಸುವ ಉದ್ದೇಶದಿಂದ ಈ ಪಂದ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.

ಬಿಎಫ್ ಸಿ ಸಹಾಯಕ ಕೋಚ್ ಹೇಳಿದ್ದೇನು?

ಈ ಪ್ರವಾಸದ ಬಗ್ಗೆ ಬಿಎಫ್​ಸಿ ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್ ಅವರು ಮಾತನಾಡಿ, “ಈ ಆರ್‌ಎಫ್‌ಡಿಎಲ್ (RFDL) ಪ್ಲಾಟ್‌ಫಾರ್ಮ್ ಕೊಟ್ಟಿರೋದು ತುಂಬಾ ಒಳ್ಳೆಯ ಪ್ಲಾಟ್‌ಫಾರ್ಮ್ ನಮಗೆ. ಯಾಕೆಂದ್ರೆ, ನಾವು ಈ 23 ಮ್ಯಾಚ್ ಆಡಿ, ಗೆದ್ದು ಇಂಡಿಯಾಗೆ ಚಾಂಪಿಯನ್ ಆಗಿದ್ದೀವಿ. ಸೋ, ಇವಾಗ ನಮಗೆ ರಿಯಲ್ ಟೆಸ್ಟ್ ಜಪಾನ್ ಟೂರ್ ಕೊಟ್ಟಿರೋದು. ಆರ್‌ಎಫ್‌ಡಿಎಲ್ ಕೊಟ್ಟಿರೋದು ತುಂಬಾ ಒಳ್ಳೆಯ ಪ್ಲಾಟ್‌ಫಾರ್ಮ್. ನಾವು ಎಲ್ಲಿ ನಿಂತಿದ್ದೀವಿ? ಇವಾಗ ಜಪಾನ್ ಹೆಂಗೆ ಆಡ್ತಾ ಇದ್ದಾರೆ, ವರ್ಲ್ಡ್ ಕಪ್ ಅಲ್ಲಿ ಹೆಂಗೆ ಆಡ್ತಾ ಇದ್ದಾರೆ ನೋಡಿದ್ದೀವಿ. ಸೋ, ಅವರು ಯಾವ ಲೆವೆಲ್ ಅಲ್ಲಿ ಇದ್ದಾರೆ ನಮಗೆ ಗೊತ್ತಿದೆ.

“ಸೋ, ಅಲ್ಲಿ ಹೋಗಿ ರಿಯಲ್ ಟೆಸ್ಟ್ ಕೋಚಸ್‌ಗೆ, ಪ್ಲೇಯರ್ಸ್‌ಗೆ, ಎಲ್ಲರಿಗೂ ಒಂದು ಒಳ್ಳೆಯ ಟೆಸ್ಟ್ ಇರುತ್ತೆ. ನಾವೆಲ್ಲಿ ನಿಂತಿದ್ದೀವಿ, ಎಲ್ಲಿ ಇಂಪ್ರೂವ್ ಆಗ್ಬೇಕು, ಈ ಪ್ಲಾಟ್‌ಫಾರ್ಮ್ ಹೆಂಗೆ ಹೆಂಗೆ ಉಪಯೋಗಿಸಬೇಕು ಅಂತ ಒಳ್ಳೆಯ ಪ್ಲಾಟ್‌ಫಾರ್ಮ್ ಕೊಟ್ಟಿದ್ದಾರೆ ಆರ್‌ಎಫ್‌ಡಿಎಲ್‌. ಸೋ, ಆರ್‌ಎಫ್‌ಡಿಎಲ್‌ಗೆ ನಾನು ಥ್ಯಾಂಕ್ಯೂ ಹೇಳೋಕೆ ಇಷ್ಟ ಪಡ್ತೀನಿ. ಸೋ, ನಾವು ಅಲ್ಲಿ ಹೋಗ್ಬಿಟ್ಟು ಒಳ್ಳೆಯ ಫೈಟ್ ಕೊಡ್ಬೇಕು ಅಂತ ನಾವು… ವಿ ಆರ್ ಪ್ರಿಪೇರಿಂಗ್ ವೆಲ್ ಫಾರ್ ದಟ್. ಥ್ಯಾಂಕ್ಯೂ,” ಎಂದಿದ್ದಾರೆ.

ಕೋಚ್‌ಗಳಿಗೂ ತರಬೇತಿ

ಆಟಗಾರರ ಬೆಳವಣಿಗೆ ಜೊತೆಗೆ ಕೋಚ್‌ಗಳ ಬೆಳವಣಿಗೆಯೂ ಅಷ್ಟೇ ಮುಖ್ಯ ಎಂಬುದನ್ನು ಗುರುತಿಸಿರುವ ಈ ಕಾರ್ಯಕ್ರಮವು, ಪ್ರವಾಸದಲ್ಲಿ ಭಾಗವಹಿಸುವ ಕ್ಲಬ್‌ಗಳ ಆರು ಮಂದಿ ಕೋಚ್‌ಗಳಿಗಾಗಿ ‘ಅವಿಸ್ಪಾ ಫುಕುವೋಕಾ’ದಲ್ಲಿ ಮೂರು ದಿನಗಳ ವಿಶೇಷ ಕೋಚಿಂಗ್ ಮಾಡ್ಯೂಲ್ ಅನ್ನು ಸಹ ಒಳಗೊಂಡಿದೆ. ಇದರಲ್ಲಿ ವೈಯಕ್ತಿಕ ಅಭಿವೃದ್ಧಿ ಯೋಜನೆಗಳು, ಆಟಗಾರರ ಪ್ರಗತಿ ಮತ್ತು ಹೈ-ಪರ್ಫಾರ್ಮೆನ್ಸ್ ಪರಿಸರದ ಕುರಿತು ಸೆಷನ್‌ಗಳು ಇರಲಿವೆ. ಕೇವಲ ಮೂರೇ ವರ್ಷಗಳಲ್ಲಿ ಜೆ2 ಲೀಗ್‌ನಿಂದ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಎಲೈಟ್ ಫೈನಲ್‌ಗೆ ಲಗ್ಗೆ ಇಟ್ಟಿರುವ ‘ಎಫ್‌ಸಿ ಮಾಚಿಡಾ ಝೆಲ್ವಿಯಾ’ ಕ್ಲಬ್‌ನ ಫುಟ್‌ಬಾಲ್ ಡೈರೆಕ್ಟರ್ ಜೊತೆಗಿನ ಸಂವಾದವೂ ಇದರಲ್ಲಿ ಒಳಗೊಂಡಿದೆ.

ಫುಟ್‌ಬಾಲ್ ಮಾತ್ರವಲ್ಲದೆ, ಆಟಗಾರರು ಮತ್ತು ಕೋಚ್‌ಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುವ ರಿಲಯನ್ಸ್ ಫೌಂಡೇಷನ್‌ನ ತತ್ವದಂತೆ, ಈ ನಿಯೋಗ ನಾಗಾಸಾಕಿ ಪೀಸ್ ಸ್ಟೇಡಿಯಂ, ಅಟಾಮಿಕ್ ಬಾಂಬ್ ಮ್ಯೂಸಿಯಂ ಮತ್ತು ದಜೈಫು ಟೆನ್ಮಂಗು ಶ್ರೈನ್‌ನಂತಹ ಸಾಂಸ್ಕೃತಿಕ ಸ್ಥಳಗಳಿಗೂ ಭೇಟಿ ನೀಡಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports