ಅದಕ್ಕಾಗಿ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಆ ಬಯಕೆಯನ್ನೇ ಬಿಟ್ಟು ಬಿಡುವವರು ಹಲವರಿದ್ದಾರೆ. ಆದರೆ ಚಿಂತಿಸದಿರಿ ದಿಢೀರ್ ಆಗಿ ರವಾ ದೋಸೆ ಹೇಗೆ ಮಾಡಿಕೊಳ್ಳಬಹುದೆಂದು ಇಲ್ಲಿ ತಿಳಿಯಿರಿ.
ರವಾ ದೋಸೆ ಎಲ್ಲಾ ಸಂದರ್ಭಗಳಿಗೂ ಒಂದು ಪರಿಪೂರ್ಣ ಖಾದ್ಯದಂತಿದೆ. ಕೇವಲ 30 ನಿಮಿಷಗಳು ಮತ್ತು ಸರಳ ಪದಾರ್ಥಗಳನ್ನು ಬಳಸಿಕೊಂಡು, ನಿಮ್ಮ ಮಧ್ಯಾಹ್ನದ ಅಥವಾ ರಾತ್ರಿಯ ಊಟಕ್ಕಾಗಲಿ ಇಲ್ಲವೆ ಉಪಹಾರಕ್ಕಾಗಿ ನೀವು ಈ ಅದ್ಭುತ ದೋಸೆಯನ್ನು ಮಾಡಿಕೊಂಡು ಸವಿಯಬಹುದು.
ಈ ರೀತಿಯಾಗಿ ಮಾಡಿಕೊಳ್ಳುವ ರವಾ ದೋಸೆಗೆ ಇನ್ಸ್ಟಂಟ್ ಅಥವಾ ದಿಢೀರ್ ದೋಸೆ ಎಂದು ಕರೆಯುತ್ತಾರೆ. ಈ ದೋಸೆ ಸಾಂಪ್ರದಾಯಿಕ ರವಾ ದೋಸೆಯಂತೆಯೇ ರುಚಿಯಾಗಿರುತ್ತದೆ. ಬನ್ನಿ ಅದನ್ನು ಮಾಡುವ ಬಗೆ ಹೇಗೆ ಹಾಗೂ ಬೇಕಾಗುವ ಪದಾರ್ಥಗಳೇನು ಎಂಬುದನ್ನು ತಿಳಿಯೋಣ.
ರವಾ ದೋಸೆ
ಇನ್ಸ್ಟಂಟ್ ರವಾ ದೋಸೆ ಮಾಡಲು ಬೇಕಾಗುವ ಪದಾರ್ಥಗಳು
1 ಕಪ್ ರವಾ/ಸೂಜಿ/ರವೆ
3/4 ಕಪ್ ಅಕ್ಕಿ ಹಿಟ್ಟು
1/4 ಕಪ್ ಮಲ್ಟಿ ಪರ್ಪಸ್ ಹಿಟ್ಟು
3/4 ಕಪ್ ನೀರು
1 tbsp ಎಣ್ಣೆ
1 tbsp ತುಪ್ಪ / ಸ್ಪಷ್ಟೀಕರಿಸಿದ ಬೆಣ್ಣೆ
1. ಬೆಕಾಗುವ ತರಕಾರಿಗಳನ್ನು ಮೊದಲೆ ಒಂದು ಬಟ್ಟಲಿನಲ್ಲಿ ಸಿದ್ಧಪಡಿಸಿಕೊಂಡು ಬದಿಯಲ್ಲಿ ಇರಿಸಿಕೊಂಡಿರಿ.
2. ಈಗ ಒಂದು ದೊಡ್ಡ ಪಾತ್ರೆಯಲ್ಲಿ ರವೆ, ಅಕ್ಕಿ ಹಿಟ್ಟು, ಮಲ್ಟಿ ಪರ್ಪಸ್ ಹಿಟ್ಟು ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅದನ್ನು ನೆನೆಯಲು ಅರ್ಧ ಘಂಟೆಯವರೆಗೆ ಹಾಗೆ ಇರಿಸಿ.
3. ಅರ್ಧ ಘಂಟೆಯ ನಂತರ ಆ ಮಿಶ್ರಣಕ್ಕೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ತೆಂಗಿನ ತುಂಡುಗಳು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
4. ಮಧ್ಯಮ ಜ್ವಾಲೆಯ ಮೇಲೆ ದೊಡ್ಡ ನಾನ್-ಸ್ಟಿಕ್ ಪ್ಯಾನ್ ಅನ್ನು ತೆಗೆದುಕೊಂಡು ಅದರ ಮೇಲ್ಮೈ ಮೇಲೆ ಸ್ವಲ್ಪ ಸ್ಪಷ್ಟೀಕರಿಸಿದ ಬೆಣ್ಣೆಯನ್ನು ಅನ್ವಯಿಸಿ ಅದು ಬಿಸಿಯಾಗುವವರೆಗೆ ಕಾಯಿರಿ.
5.ಒಂದೊಮ್ಮೆ ತವಾ/ಪ್ಯಾನ್ ಬಿಸಿಯಾದ ಮೇಲೆ ಸಿದ್ಧವಾದ ಹಿಟ್ಟನ್ನು ಅದರ ಮೇಲೆ ಹುಯ್ಯಿರಿ ಹಾಗೂ ಅಂಚಿನಾದ್ಯಂತ ದೋಸೆಯ ಹೊರಭಾಗದಲ್ಲಿ ಸ್ವಲ್ಪ ಎಣ್ಣೆಯನ್ನು ಸುರಿಯಿರಿ.
6. ದೋಸೆಯ ಅಂಚುಗಳು ಕಂದು ಬಣ್ಣಕ್ಕೆ ಬರುವುದನ್ನು ಗಮನಿಸಿದಾಗ ಮೊನಚಾದ ಅಂಚಿರುವ ಸೌಟನ್ನು ಬಳಸಿ ದೋಸೆ ಪ್ಯಾನ್ಗೆ ಅಂಟಿಕೊಳ್ಳದಂತೆ ಎಚ್ಚರಿಕೆಯಿಂದ ತೆಗೆಯಿರಿ.
7. ಈಗ ದೋಸೆಯನ್ನು ಹಿಮ್ಮುಖವಾಗಿ ಹಂಚಿನ ಮೇಲೆ ಹಾಕಿ ಇನ್ನೊಂದು ಬದಿಯನ್ನು ಬೇಯಿಸಿ (½ -1 ನಿಮಿಷ ಸಾಕು).
8. ಈಗ ನಿಮ್ಮ ದೋಸೆ ರೆಡಿಯಾಗಿದೆ. ಹಂಚಿನಿಂದ ಅದನ್ನು ತೆಗೆದು ಪ್ಲೇಟಿನಲ್ಲಿ ಹಾಕಿಕೊಳ್ಳಿ.
9. ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ ಮತ್ತು ಸಾಂಬಾರ್ ಜೊತೆಗೆ ಅದನ್ನು ಬಿಸಿ ಬಿಸಿಯಾಗಿ ಬಡಿಸಿ.
ಈ ರೀತಿಯಾಗಿ ದೋಸೆ ಮಾಡಿಕೊಳ್ಳಲು ಪೂರ್ವ ಸಿದ್ಧತಾ ತಯಾರಿಗೆ ಐದು ನಿಮಿಷ ತಗುಲಿದರೆ ಒಟ್ಟಾರೆ ಕುಕ್ಕಿಂಗ್ ಅವಧಿ ೩೫ ನಿಮಿಷಗಳಷ್ಟಾಗುತ್ತದೆ. ಒಟ್ಟಿನಲ್ಲಿ ಒಂದು ಗಂಟೆಯಲ್ಲೇ ನೀವು ನಿಮಗಿಷ್ಟವಾದ ರವಾ ದೋಸೆಯನ್ನು ಹೀಗೆ ಮನೆಯಲ್ಲೇ ಮಾಡಿಕೊಂಡು ಸವಿಯಬಹುದು












