Last Updated:
ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ಬಹಳ ಮುಖ್ಯವಾದ ವಿಚಾರವೆಂದರೆ ಕರ್ತವ್ಯ ಪ್ರಜ್ಞೆ. ಈ ಕರ್ತವ್ಯ ಪ್ರಜ್ಞೆಯು ಭವಿಷ್ಯದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ. ನಿಮ್ಮ ಮಗುವಿಗೆ ಅವರ ವಯಸ್ಸಿನ ಆಧಾರದ ಮೇಲೆ ಕೆಲವು ಕೆಲಸಗಳನ್ನು ನಿಯೋಜಿಸುವುದು ಅವರ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ವೇಗವಾಗಿ ಓಡುತ್ತಿರುವ ಆಧುನಿಕ ಯುಗದಲ್ಲಿ (Modern World)ಪೋಷಕರು (Parents) ಮತ್ತು ಮಕ್ಕಳ (Childrens) ನಡುವಿನ ಸಂಬಂಧವನ್ನು (Realtionship) ಗಟ್ಟಿಗೊಳಿಸುವುದು ದೊಡ್ಡ ಸವಾಲಾಗಿದೆ. ಇಂತಹ ಸಮಯದಲ್ಲಿ ನಿಮ್ಮ ಮಕ್ಕಳಿಗೆ ಜವಾಬ್ದಾರಿಗಳನ್ನು ಕಲಿಸುವ ಮೂಲಕ ಅವರ ಜೀವನ ಕೌಶಲ್ಯಗಳನ್ನು ನೀವು ಸುಧಾರಿಸಬಹುದು. ವಿಶೇಷವಾಗಿ ಮನೆಕೆಲಸಗಳು ಮತ್ತು ಮನೆಯ ವಿಚಾರಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು. ಇವುಗಳು ನಿಮಗೆ ಸರಳ ಅನಿಸಬಹುದು. ಆದರೆ ಇವು ಬಹಳ ಕಷ್ಟಕರವಾದ ವಿಚಾರವಾಗಿದೆ. ಹಾಗಾಗಿ ಮಕ್ಕಳಿಗೆ ಈ ಕೆಲಸಗಳನ್ನು ಕಲಿಸುವ ಮೂಲಕ ಸ್ವಂತ ಕೆಲಸಕಾರ್ಯಗಳನ್ನು ಮಾಡುವುದನ್ನು ಕಲಿಸಬಹುದು.
ಕರ್ತವ್ಯ ಪ್ರಜ್ಞೆ: ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ಬಹಳ ಮುಖ್ಯವಾದ ವಿಚಾರವೆಂದರೆ ಕರ್ತವ್ಯ ಪ್ರಜ್ಞೆ. ಈ ಕರ್ತವ್ಯ ಪ್ರಜ್ಞೆಯು ಭವಿಷ್ಯದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ. ನಿಮ್ಮ ಮಗುವಿಗೆ ಅವರ ವಯಸ್ಸಿನ ಆಧಾರದ ಮೇಲೆ ಕೆಲವು ಕೆಲಸಗಳನ್ನು ನಿಯೋಜಿಸುವುದು ಅವರ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬಟ್ಟೆ ಒಗೆಯುವುದು, ಗಿಡಗಳಿಗೆ ನೀರು ಹಾಕುವುದು, ಊಟಕ್ಕೆ ಟೇಬಲ್ ಸಿದ್ಧ ಪಡಿಸುವುದು ಹೇಗೆ ಎಂಬುದನ್ನು ಚಿಕ್ಕಂದಿನಿಂದಲೇ ಹೇಳಿಕೊಡಿ. ಇಂತಹ ಮನೆಕೆಲಸಗಳನ್ನು ಮಾಡುವ ಮಕ್ಕಳು ಕುಟುಂಬದೊಂದಿಗೆ ಸುಲಭವಾಗಿ ಬಾಂಧವ್ಯ ಹೊಂದುತ್ತಾರೆ. ಇಂತಹ ಕೆಲಸಗಳನ್ನು ಮಾಡುವುದರಿಂದ ತಮ್ಮ ಕುಟುಂಬಕ್ಕೆ ತಮ್ಮಿಂದ ಸಹಾಯವಾಗುತ್ತಿದೆ ಎಂದು ಮಕ್ಕಳು ಸಹ ಖುಷಿ ಪಡುತ್ತಾರೆ. ಅಲ್ಲದೇ ಈ ಕೆಲಸಗಳನ್ನು ಮನೆಯಲ್ಲಿ ಮಾತ್ರವಲ್ಲದೇ ಶಾಲೆಗಳಲ್ಲಿಯೂ ಮಾಡಲು ಪ್ರಾರಂಭಿಸುತ್ತಾರೆ. ಭವಿಷ್ಯದಲ್ಲಿ ಅವರು ಕೆಲಸದ ಸ್ಥಳದಲ್ಲಿಯೂ ಇದೇ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಾರೆ.

ಮಕ್ಕಳಿಗೆ ಮನೆಕೆಲಸಗಳನ್ನು ಕಲಿಸುವುದರಿಂದ ಆಗುವ ಪ್ರಯೋಜನಗಳು
- ಮನೆಕೆಲಸಗಳನ್ನು ಮಾಡುವ ಮೂಲಕ ಮಕ್ಕಳು ಸ್ವಾತಂತ್ರ್ಯವಾಗಿ ಬದುಕುವುದನ್ನು ಕಲಿಯುತ್ತಾರೆ. ಸ್ವಯಂ ಸುಧಾರಣೆಗೆ ಇದು ಪ್ರಮುಖ ಅರ್ಹತೆಯಾಗಿದೆ.
- ಮಕ್ಕಳು ತಮ್ಮ ಮನೆಕೆಲಸಗಳನ್ನು ಮುಗಿಸಿದಾಗ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಏನೋ ಸಾಧನೆ ಮಾಡಿದಂತೆ ಸಂತಸ ಪಡುತ್ತಾರೆ.
- ಮನೆಯ ಎಲ್ಲಾ ಕೆಲಸಗಳನ್ನು ಕುಟುಂಬಸ್ಥರೊಂದಿಗೆ ಸೇರಿಕೊಂಡು ಮಾಡುವುದು ಕೆಲಸಗಳನ್ನು ಕಲಿಯಲು ಉತ್ತಮ ಮಾರ್ಗವಾಗಿದೆ. ಇದು ಸಮಾಜ ಮತ್ತು ಕಚೇರಿ ಎರಡರಲ್ಲೂ ಅಗತ್ಯವಾಗಿ ಪಾಲಿಸುವ ಪ್ರಮುಖ ವಿಚಾರವಾಗಿದೆ.
- ನಿಮ್ಮ ಮಕ್ಕಳಿಗೆ ಕೆಲಸಗಳನ್ನು ಪೂರ್ಣಗೊಳಿಸಲು ಗಡುವನ್ನು ನಿಗದಿಪಡಿಸುವುದು. ಸಮಯವನ್ನು ಉತ್ತಮವಾಗಿ ನಿರ್ವಹಿಸಲು ಕಲಿಯಲು ಅವರಿಗೆ ಸಹಾಯ ಮಾಡುತ್ತದೆ.
ಜವಾಬ್ದಾರಿಯನ್ನು ಹೊತ್ತುಕೊಳ್ಳಲು ವಯಸ್ಸಿಗೆ ತಕ್ಕಂತಹ ಉದ್ಯೋಗಗಳು
- 3 ರಿಂದ 5 ವರ್ಷಗಳು: ಆಟಿಕೆಗಳನ್ನು ಎತ್ತಿಕೊಳ್ಳುವುದು, ಸಾಕುಪ್ರಾಣಿಗಳಿಗೆ ಆಹಾರ ನೀಡುವುದು, ಧೂಳು ತೆಗೆಯುವುದು.
- 6 ರಿಂದ 8 ವರ್ಷಗಳು: ಮೇಜು ಹಾಕುವುದು, ಬಟ್ಟೆ ಒಣಗಿ ಹಾಕುವುದು, ಗಿಡಗಳಿಗೆ ನೀರು ಹಾಕುವುದು.
- 9 ರಿಂದ 12 ವರ್ಷ: ಮನೆ ಗುಡಿಸುವುದು, ಪಾತ್ರೆ ತೊಳೆಯುವುದು, ಕಸವನ್ನು ಸ್ವಚ್ಛಗೊಳಿಸುವುದು.
- 13 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು: ಸರಳವಾದ ಅಡುಗೆಗಳನ್ನು ತಯಾರಿಸುವುದು, ಬಟ್ಟೆ ಒಗೆಯುವುದು, ಮನೆಯ ಅಂಗಳವನ್ನು ಸ್ವಚ್ಛಗೊಳಿಸುವುದು.
ನಿಮ್ಮ ಮಕ್ಕಳು ಈ ಕೆಲಸಗಳನ್ನು ಮಾಡುತ್ತಾ ಹೋದಂತೆ, ಅವರು ಹೊಸ ಕೌಶಲ್ಯಗಳನ್ನು ಕಲಿಯುತ್ತಾರೆ ಮತ್ತು ಅವರಲ್ಲಿ ಜವಾಬ್ದಾರಿಯ ಅರಿವು ಹೆಚ್ಚುವುದನ್ನು ನೀವು ಕಾಣಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)
Nov 19, 2024 11:26 AM IST













