Satish Sanpal: ಹೆಂಡತಿಗೆ 40 ಕೆಜಿ ಚಿನ್ನ ಗಿಫ್ಟ್! ದುಬೈನಲ್ಲಿ ₹8 ಸಾವಿರ ಕೋಟಿಯ ಉದ್ಯಮ ಕಟ್ಟಿದ ಬಡ ಯುವಕ! | | ACTPnews

ಸತೀಶ್ ಸನ್ಪಾಲ್-ಪತ್ನಿ ತಬಿಂದಾ ಸನ್ಪಾಲ್


Last Updated:

ಸತೀಶ್ ಸನ್ಪಾಲ್ ಜಬಲ್ಪುರ್‌ನಲ್ಲಿ ಜನಿಸಿದರು. 8ನೇ ತರಗತಿಯ ನಂತರ ಶಾಲೆ ಬಿಟ್ಟರು. 15 ವಯಸ್ಸಿನಲ್ಲಿ ತಾಯಿ ನೀಡಿದ ಸುಮಾರು 50,000 ರೂಪಾಯಿ ಹಣದೊಂದಿಗೆ ರೊಂದಿಗೆ ಸಣ್ಣ ಕಿರಾಣಿ ಅಂಗಡಿ ತೆರೆದರು. ಆದರೆ ದುರದೃಷ್ಟವಶಾತ್ ಅದು 2 ವರ್ಷಗಳಲ್ಲಿ ಮುಚ್ಚಿತು.

ಸತೀಶ್ ಸನ್ಪಾಲ್-ಪತ್ನಿ ತಬಿಂದಾ ಸನ್ಪಾಲ್
ಸತೀಶ್ ಸನ್ಪಾಲ್-ಪತ್ನಿ ತಬಿಂದಾ ಸನ್ಪಾಲ್

ನೆಟ್‌ಫ್ಲಿಕ್ಸ್‌ನ Desi Bling ಎಂಬ ರಿಯಾಲಿಟಿ ಶೋನಲ್ಲಿ ದಂಪತಿಯೊಬ್ಬರು ಸಖತ್ ಫೇಮಸ್ ಆಗಿದ್ದಾರೆ. ಅವರೇ ಸತೀಶ್ ಸನ್ಪಾಲ್ ಹಾಗೂ ತಬಿಂದಾ. ಸತೀಶ್ ಸನ್ಪಾಲ್ (Satish Sanpal) ದುಬೈ ಮೂಲದ ಭಾರತೀಯ ಉದ್ಯಮಿ ಮತ್ತು ANAX Holding ಎಂಬ ಕಂಪನಿಯ ಸ್ಥಾಪಕ ಮತ್ತು ಅಧ್ಯಕ್ಷರು. ಅವರು ಮಧ್ಯಪ್ರದೇಶದ ಜಬಲ್ಪುರ್‌ನಿಂದ ಬಂದು, ದುಬೈನಲ್ಲಿ 8 ಸಾವಿರ ಕೋಟಿ ರೂಪಾಯಿಗಳ ಉದ್ಯಮ ಕಟ್ಟಿದವರು. ಸದ್ಯ ನೆಟ್‌ಫ್ಲಿಕ್ಸ್‌ನ Desi Bling ರಿಯಾಲಿಟಿ ಶೋನಲ್ಲಿ ಅವರು ಮತ್ತು ಅವರ ಪತ್ನಿ ತಬಿಂದಾ ಸನ್ಪಾಲ್ (Tabinda Sanpal) ಅವರ ಐಷಾರಾಮಿ ಜೀವನಶೈಲಿ ವೈರಲ್ ಆಗಿದೆ. ಇನ್ನು ನಾನು ನನ್ನ ಪತ್ನಿಗೆ 40 ಕೆಜಿ ಗೋಲ್ಡ್ ಗಿಫ್ಟ್ ಕೊಟ್ಟಿದ್ದೇನೆ ಅಂತ ಸತೀಶ್ ಸನ್ಪಾಲ್ ಹೇಳಿದ್ದು, ಇದೀಗ ಸಖತ್ ವೈರಲ್ ಆಗಿದೆ.

50 ಸಾವಿರ ರೂಪಾಯಿಯಲ್ಲಿ ಕಿರಾಣಿ ಅಂಗಡಿ ಪ್ರಾರಂಭ

ಸತೀಶ್ ಸನ್ಪಾಲ್ ಜಬಲ್ಪುರ್‌ನಲ್ಲಿ ಜನಿಸಿದರು. 8ನೇ ತರಗತಿಯ ನಂತರ ಶಾಲೆ ಬಿಟ್ಟರು. 15 ವಯಸ್ಸಿನಲ್ಲಿ ತಾಯಿ ನೀಡಿದ ಸುಮಾರು 50,000 ರೂಪಾಯಿ ಹಣದೊಂದಿಗೆ ರೊಂದಿಗೆ ಸಣ್ಣ ಕಿರಾಣಿ ಅಂಗಡಿ ತೆರೆದರು. ಆದರೆ ದುರದೃಷ್ಟವಶಾತ್ ಅದು 2 ವರ್ಷಗಳಲ್ಲಿ ಮುಚ್ಚಿತು.

ದುಬೈನಲ್ಲಿ 25 ಸಾವಿರ ಕೋಟಿ ರೂಪಾಯಿ ವ್ಯವಹಾರ

ಸುಮಾರು 11-20 ವರ್ಷಗಳ ಹಿಂದೆ ಕೇವಲ 80,000 ರೂಪಾಯಿ ತೆಗೆದುಕೊಂಡು ದುಬೈಗೆ ಬಂದರು. ಯಾರ ಅಡಿಯಲ್ಲೂ ಕೆಲಸ ಮಾಡದೆ ಸ್ವಂತ ವ್ಯವಹಾರ ಆರಂಭಿಸಿದರು. ಮೊದಲು ಸ್ಟಾಕ್ ಮಾರ್ಕೆಟ್ ಬ್ರೋಕರ್ ಸಂಪರ್ಕ ಮತ್ತು ಇತರ ಸಣ್ಣ ವ್ಯವಹಾರಗಳ ಮೂಲಕ ಕೆಲಸ ಪ್ರಾರಂಭಿಸಿದ್ರು. 2018ರಲ್ಲಿ ANAX Holding ಎಂಬ ಕಂಪನಿ ಸ್ಥಾಪಿಸಿದರು. ಇದು real estate, hospitality, investments, ಮತ್ತು ಇತರ ಕ್ಷೇತ್ರಗಳಲ್ಲಿ ವೈವಿಧ್ಯಮಯ ಕೆಲಸ ಮಾಡುತ್ತಿದೆ. ಸದ್ಯ ಈ ಕಂಪನಿ ಮೌಲ್ಯ $3 ಬಿಲಿಯನ್ ಅಂದರೆ ಸುಮಾರು 25,000 ಕೋಟಿ ರೂಪಾಯಿ ಮೌಲ್ಯದ ಹೋಲ್ಡಿಂಗ್ ಕಂಪನಿಯಾಗಿ ಬೆಳೆದಿದೆ.

ವಿವಿಧ ರೀತಿಯಲ್ಲಿ ಕೆಲಸ, ಹಣ ಹೂಡಿಕೆ

ಇವರ ಮಾಲೀಕತ್ವದ ANAX Developments ಕಂಪನಿ ಸಸ್ಟೈನಬಲ್ ಲಕ್ಷರಿ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳು, ದುಬೈ ಹಿಲ್ಸ್‌ನ $120 ಮಿಲಿಯನ್ ಮ್ಯಾನ್ಷನ್ ಸೇರಿದಂತೆ ಅನೇಕ ಕಡೆ ಕೆಲಸ ಮಾಡಿದೆ. ಇನ್ನು ANAX Hospitality ಲಕ್ಷರಿ ಹೋಟೆಲ್ ಮತ್ತು ಅತಿಥಿ ಸತ್ಕಾರ ನೋಡಿಕೊಂಡರೆ, ANAX Capital ಹೂಡಿಕೆಗಳಲ್ಲಿ ತೊಡಗಿದೆ.

8 ಸಾವಿರ ಕೋಟಿ ವೈಯಕ್ತಿಕ ಆಸ್ತಿ

ಇನ್ನು ಸತೀಶ್ ಸನ್ಪಾಲ್ COVID ಸಮಯದಲ್ಲಿ ದುಬೈನ undervalued ಆಸ್ತಿಗಳಲ್ಲಿ ಹೂಡಿಕೆ ಮಾಡಿ ಲಾಭ ಪಡೆದರು. ಈಗ ಹಲವು ಪ್ರಾಜೆಕ್ಟ್‌ಗಳುಗಳಿದ್ದು, Dh3 ಬಿಲಿಯನ್ ಮೌಲ್ಯದ ವ್ಯವಹಾರ ಚಾಲ್ತಿಯಲ್ಲಿವೆ. ಸತೀಶ್ ಸನ್ಪಾಲ್ ವೈಯಕ್ತಿಕ ಆಸ್ತಿ ಸುಮಾರು ₹8,000 ಕೋಟಿ ಅಂದರೆ ಸುಮಾರು $1 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಇನ್ನು ಇವರ ಮಾಲೀಕತ್ವದ ಕಂಪನಿ ಮೌಲ್ಯ $3 ಬಿಲಿಯನ್ ಇದೆ.

ಐಷಾರಾಮಿ ಕಾರು, ಖಾಸಗಿ ನೌಕೆ!

ಐಷಾರಾಮಿ ಜೀವನಶೈಲಿಗೆ ಸತೀಶ್ ಸನ್ಪಾಲ್ ಹೆಸರಾಗಿದ್ದಾರೆ. ದುಬೈನ ಬುರ್ಜ್ ಖಲೀಫಾದಲ್ಲಿ ಮನೆ ಇದ್ದು, ಐಷಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್ (5+), ಬುಗಾಟಿ ಚಿರೋನ್, ಬೆಂಟ್ಲಿ, ಲಂಬೋರ್ಘಿನಿ ಇತ್ಯಾದಿ ಕಾರುಗಳಿವೆ. ಇನ್ನು ಖಾಸಗಿ ವಿಹಾರಕ್ಕಾಗಿ  ನೌಕೆಯನ್ನೂ ಸಹ ಹೊಂದಿದ್ದಾರೆ.

ಪತ್ನಿಗೆ 40 ಕೆಜಿ ಚಿನ್ನ ಕೊಟ್ಟ ಸತೀಶ್ ಸನ್ಪಾಲ್

ಇನ್ನು ತಮ್ಮ ಪತ್ನಿ ತಬಿಂದಾ ಸನ್ಪಾಲ್ ಜೊತೆ Desi Bling ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ರು. ಸತೀಶ್ ತಮ್ಮ ಪತ್ನಿಗೆ ಹಬ್ಬದ ಸಂದರ್ಭದಲ್ಲಿ ಸುಮಾರು 3 ಕೆಜಿ ಚಿನ್ನ ಕೊಡುತ್ತಾರಂತೆ. ಈ ರೀತಿ ಪತ್ನಿಗೆ ಒಟ್ಟು 40 ಕೆಜಿ ಚಿನ್ನ ಗಿಫ್ಟ್ ಮಾಡಿದ್ದಾರಂತೆ. ತಮ್ಮ ಮದುವೆಯ 10ನೇ ವಿವಾಹ ವಾರ್ಷಿಕೋತ್ಸವದಲ್ಲಿ ಅವರನ್ನು 40 ಕೆಜಿ ಚಿನ್ನದಿಂದ ತೂಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports