Yogaraj Bhat: ಪ್ರಣಯಭಾರದಲ್ಲಿ ಪ್ರಾಯ ಹಗುರ, ಟಾಕ್ಸಿಕ್ ‘ತಬಾಹಿ’ ಹಾಡು ಬರೆದ ಯೋಗರಾಜ್ ಭಟ್ ಏನಂದ್ರು? | | ACTPnews

yogaraj bhat share yash toxic movie tabaahi song lyrics


ಟಾಕ್ಸಿಕ್ ‘ತಬಾಹಿ’ ಹಾಡು

ತಬಾಹಿ ಚಿತ್ರದ ಹಾಡು ಶೃಂಗಾರಮಯವೇ ಆಗಿದೆ. ಪ್ರತಿ ಪದದಲ್ಲೂ ಸೆಳೆತ ಇದೆ. ಪ್ರೇಮದ ಉತ್ತುಂಗ ಇದೆ. ಸರಸ ಸಲ್ಲಾಪದ ಸಾಲುಗಳೂ ಇವೆ. ತಬಾಹಿ ಹಾಡಿನಲ್ಲಿ ಪ್ರೀತಿಯ ಸರ್ವನಾಶದ ಚಿತ್ರಣವೂ ಇದೆ.

ಪ್ರಣಯಭಾರದಲ್ಲಿ ಪ್ರಾಯವು ಹಗುರ (ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)
ಇದನ್ನ ಯೋಗರಾಜ್ ಭಟ್ರು ಅಚ್ಚ ಕನ್ನಡದ ಪದಗಳಲ್ಲಿಯೆ ಸುಲಭವಾದ ಮತ್ತು ಸರಳವಾದ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಸಾಲುಗಳು ಹೀಗೆ ಇವೆ..

ಎಲ್ಲಾ, ಮಿತಿಮೀರಿ ಹೋಗೋಣ ಬಾ..

ಎಲ್ಲಾ, ಗಡಿದಾಟಿ ನೋಡೋಣ ಬಾ…

ಶೃಂಗಾರದಂಗಾರ ಸಿಡಿದೇಳಲು

-ತಬಾಹಿ… ತಬಾಹಿ

ಸಾಗರಾ, ಸರಸರಾ, ದಡವನೂ ದಾಟಲು,

ಭಾವದಾ, ರಭಸವೂ, ಎದೆಯನು ಮೀಟಲು,

ವೈಯಾರ ಮೈಮೋಹ ಜೊತೆಸೇರಲು

ತಬಾಹಿ ..! ತಬಾಹಿ

ಸರಸ, ಸದರ, ಬೆರೆತು, ಸಮರ,

ಪ್ರಣಯಭಾರದಲ್ಲಿ ಪ್ರಾಯವು ಹಗುರ..

ಕೊರೆದಾ ಉಗರಾ ಕವಿತೇ ಮಧುರಾ

ತಬಾಹಿ …..! ತಬಾಹಿ

ಈ ಒಂದು ಹಾಡಿನ ಸಾಲುಗಳಲ್ಲಿ ಸರಸವೂ ಇದೆ. ಸಮರಸವೂ ಇದೆ. ಆದರೆ, ಈ ಒಂದು ಹಾಡಿನಲ್ಲಿ ಬರುವ ಒಂದು ಸಾಲು ತುಂಬಾನೆ ಚೆನ್ನಾಗಿದೆ. ‘ಪ್ರಣಯದಭಾರದಲ್ಲಿ ಪ್ರಾಯವು ಹಗುರ’ ಅನ್ನುವ ಈ ಲೈನ್ ವಿಶೇಷ ಅನಿತ್ತದೆ.

ಭಾವದಾ ರಭಸವೂ…

ಇದೇ ಹಾಡಿನಲ್ಲಿ ಇನ್ನೂ ಒಂದು ಲೈನ್ ಬರುತ್ತದೆ. ‘ಭಾವದಾ, ರಭಸವೂ, ಎದೆಯನು ಮೀಟಲು ವೈಯಾರ ವ್ಯಾಮೋಹ ಜೊತೆಸೇರಲು’ ಅನ್ನೋದೇ ಈ ಲೈನ್ ಆಗಿದೆ. ಇದು ಕೂಡ ಅಷ್ಟೆ ವಿಶೇಷ ಅನಿಸುತ್ತಿದೆ.

yogaraj bhat share yash toxic movie tabaahi song lyrics

ಮ್ಯೂಸಿಕ್ ಯಾರದು ಗೊತ್ತೆ?

(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)

ಈ ರೀತಿಯ ಸಾಲುಗಳನ್ನ ಬಾಲಿವುಡ್‌ ಗಾಯಕ ವಿಶಾಲ್ ಮಿಶ್ರಾ ಅಷ್ಟೆ ಆಕರ್ಷಕವಾಗಿಯೇ ಹಾಡಿದ್ದಾರೆ. ವಿಶೇಷ ಸೆಳತ ಇರೋ ತಮ್ಮ ಧ್ವನಿ ಮೂಲಕವೇ ಎಲ್ಲರ ಗಮನ ಕೂಡ ಸೆಳೆದಿದ್ದಾರೆ.

ಮ್ಯೂಸಿಕ್ ಯಾರದು ಗೊತ್ತೆ?

ಇಲ್ಲಿ ಇನ್ನೂ ಒಂದು ವಿಶೇಷ ಇದೆ. ಈ ಹಾಡಿಗೆ ಮಾತ್ರ ಗಾಯಕ ವಿಶಾಲ್ ಮಿಶ್ರಾ ಅವರೇ ಮ್ಯೂಸಿಕ್ ಮಾಡಿದ್ದಾರೆ. ಈ ಮ್ಯೂಸಿಕ್‌ ನೊಂದಿಗೆ ಈ ಹಾಡು ‘ತಬಾಹಿ’ ಮಾಡುತ್ತಿದೆ.

ಯಶ್ ಹಾಗೂ ಕಿಯಾರಾ ಅಡ್ವಾಣಿ ಈ ಹಾಡಿನಲ್ಲಿ ಪ್ರಣಯದ ಎಲ್ಲ ಎಲ್ಲೆಗಳನ್ನು ದಾಟಿದ್ದಾರೆ. ಚುಂಬನ ಮತ್ತು ಆಲಿಂಗನದ ದೃಶ್ಯಗಳು ಇಲ್ಲಿ ಹೇರಳವಾಗಿಯೇ ಇವೆ. ಇದನ್ನ ನೋಡಿದ ಪಡ್ಡೆಗಳ ದಿಲ್ ಝಲ್ ಅನ್ನುತ್ತದೆ ಬಿಡಿ. ಆ ರೀತಿನೇ ಇಡೀ ಹಾಡು ಇದೆ.

yogaraj bhat share yash toxic movie tabaahi song lyrics

ಭಾವದಾ ರಭಸವೂ…

(ಚಿತ್ರ ಕೃಪೆ: ಯೋಗರಾಜ್ ಭಟ್ ಇನ್‌ಸ್ಟಾಗ್ರಾಮ್)

ಆಗಸ್ಟ್-26 ರಂದು ರಿಲೀಸ್

ಟಾಕ್ಸಿಕ್ ಚಿತ್ರ ಆಗಸ್ಟ್-26 ರಂದು ರಿಲೀಸ್ ಆಗುತ್ತಿದೆ. ಎಲ್ಲೆಡೆ ಈ ಚಿತ್ರ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ತೆರೆ ಕಾಣುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಇದು ತಯಾರಾಗಿದೆ.

ಆದರೆ, ಇದು ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಆಯಾ ಭಾಷೆಯಲ್ಲಿಯೇ ಡಬ್ ಕೂಡ ಆಗುತ್ತಿದೆ. ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿರೋ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಗೀತು ಮೋಹನ್‌ದಾಸ್ ಪತಿ ರಾಜೀವ್ ರವಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed