Last Updated:
ಕರ್ನಾಟಕದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, IMD 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಭಾರೀ ಮಳೆಯ ಸಾಧ್ಯತೆ ಇರುವ ಹಿನ್ನೆಲೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ರಾಜ್ಯದ ಜನತೆ ಅಕ್ಷರಶಃ ಹೈರಾಣಾಗಿದ್ದಾರೆ. “ಯಾವಾಗಪ್ಪಾ ಈ ಮಳೆ ನಿಲ್ಲುತ್ತೆ?” ಅಂತ ಆಕಾಶ (Sky) ನೋಡುತ್ತಿರುವಾಗಲೇ, ಹವಾಮಾನ ಇಲಾಖೆ (IMD) ಈಗ ಮತ್ತೊಂದು ಆತಂಕಕಾರಿ ಸುದ್ದಿಯನ್ನು ನೀಡಿದೆ.
ಇಲಾಖೆ ನೀಡಿರುವ ಮಾಹಿತಿಯನ್ನು ನೋಡಿದರೆ, ಪರಿಸ್ಥಿತಿ ಇನ್ನೂ ತಣ್ಣಗಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹೌದು, ವಾತಾವರಣ ನೋಡಿದರೆ ಸದ್ಯಕ್ಕಂತೂ ಮಳೆರಾಯ ಸುಮ್ಮನಾಗುವ ಲಕ್ಷಣವೇ ಕಾಣುತ್ತಿಲ್ಲ. ಹವಾಮಾನ ಇಲಾಖೆ ಈಗ ರಾಜ್ಯದ 8 ಪ್ರಮುಖ ಜಿಲ್ಲೆಗಳಿಗೆ ಗಂಭೀರ ಎಚ್ಚರಿಕೆಯೊಂದನ್ನು (Yellow Alert) ರವಾನಿಸಿದೆ. ಅಷ್ಟಕ್ಕೂ ಆ ಜಿಲ್ಲೆಗಳು ಯಾವುವು? ಮಳೆಯ ಆರ್ಭಟ ಎಲ್ಲೆಲ್ಲಿ ಜೋರಾಗಿರಲಿದೆ? ನಿಮ್ಮ ಊರು ಈ ಪಟ್ಟಿಯಲ್ಲಿದೆಯಾ? ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇಂದು (ಜುಲೈ 8) ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆದರೆ ಇಲ್ಲಿಯೇ ಕಥೆ ಮುಗಿಯುವುದಿಲ್ಲ. ನಾಳೆ (ಜುಲೈ 9 ರಂದು) ಮಲೆನಾಡು ಹಾಗೂ ಕರಾವಳಿಯ ಈ ಕೆಳಗಿನ ಜಿಲ್ಲೆಗಳಲ್ಲಿ ವರುಣನ ಅಬ್ಬರ ಇನ್ನಷ್ಟು ಜೋರಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ,
ಕೊಡಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರಿಗೆ ಇಲಾಖೆಯ ಖಡಕ್ ಸೂಚನೆ!
Bangalore [Bangalore],Bangalore,Karnataka













