Last Updated:
ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಆದ್ಮೇಲೆ ಕೆಜಿಎಫ್-3 ಯಾಕೆ ಮಾಡಲಿಲ್ಲ. ಟಾಕ್ಸಿಕ್ ಶುರು ಮಾಡುವುದಕ್ಕೆ ಇರೋ ಕಾರಣ ಏನು? ಈ ಪ್ರಶ್ನೆಗೆ ಸ್ವತಃ ಯಶ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.
ಚಿತ್ರ ಜೀವನದಲ್ಲಿ ಯಶ್ (Yash) ಅತಿ ದೊಡ್ಡ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ಹಲವು ಹಿಟ್ ಕೊಟ್ಟಿದ್ದಾರೆ. ಕಿರಾತಕ ಚಿತ್ರದಿಂದಲೇ ಇದು ಶುರು ಆಗಿದೆ. ಕೆಜಿಎಫ್ (KGF) ಬಂದ್ಮೇಲೆ ಸಂಭಾವನೆ ಹೆಚ್ಚು ಮಾಡಿಕೊಂಡಿದ್ದಾರೆ. ಆದರೆ, ಈ ಚಿತ್ರದ ಗೆಲುವು ಒಂದಕ್ಕೆ ಸೀಮಿತವಾಗಲಿಲ್ಲ. ಕೆಜಿಎಫ್-2ಗೂ ಸಾಗಿ ಬಂತು. ಆದರೆ, ಇದೇ ಕ್ರೇಜ್ ಅಲ್ಲಿಯೇ ಕೆಜಿಎಫ್-3 (KGF-3) ಮಾಡಿಕೊಂಡು ಆರಾಮಾಗಿರಬಹುದಿತ್ತಲ್ಲ.? ಈ ಪ್ರಶ್ನೆನೂ ಬರುತ್ತದೆ. ಆದರೆ, ಯಶ್ ಮುಂದೆ ಸಾಗಿದರು. ವಿಶ್ವ ಸಿನಿಮಾ ಅಂತ ಹೊಸ ಕನಸು ಕಂಡರು. ಟಾಕ್ಸಿಕ್ (Toxic) ಜನ್ಮ ತಾಳಿತು. ಆದರೆ, ಯಶ್ ಈ ರಿಸ್ಕ್ ಯಾಕೆ ತೆಗೆದುಕೊಂಡ್ರು ಅನ್ನೋದು ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಮುಂದೆ ಇದೆ.














