Last Updated:
Yash: ನಟ ಯಶ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಸ್ಯಾಂಡಲ್ವುಡ್ನ (Sandalwood) ಸ್ಟಾರ್ ನಟ ಯಶ್ ಅವರು ಸದ್ಯ ತುಂಬಾನೆ ಬ್ಯುಸಿ ಇದ್ದಾರೆ. ಅವರ ಟಾಕ್ಸಿಕ್ (Toxic) ಸಿನಿಮಾ ಹಾಗೂ ರಾಮಾಯಣ ಸಿನಿಮಾ ಎರಡೂ ಕೂಡಾ ದೊಡ್ಡ ಪ್ರಾಜೆಕ್ಟ್ಗಳು. ರಾಮಾಯಣ, ಟಾಕ್ಸಿಕ್ ಸಿನಿಮಾ ರಿಲೀಸ್ ಆಗಬೇಕಿದೆಯಷ್ಟೆ. ಈ ನಡುವೆ ನಟ ಸಿನಿಮಾಗಳ ಕೆಲಸ ಅಂತ ತುಂಬಾನೆ ಬ್ಯುಸಿಯಾಗಿದ್ದಾರೆ. ಆ ನಡುವೆಯೂ ಅವರು ಅಭಿಮಾನಿಗೆ ಕಾಳಜಿ ತೋರಿಸಿದ್ದು ಸುದ್ದಿಯಾಗಿದೆ.
ಶಿವಮೊಗ್ಗದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ನಟ ಆರೋಗ್ಯ ವಿಚಾರಿಸಿದ್ದಾರೆ. ವಿಡಿಯೋಕಾಲ್ ಮೂಲಕ ಅಭಿಮಾನಿಯ ಆರೋಗ್ಯ ವಿಚಾರಿಸಿದ ಯಶ್ ಅವರು ಸಾಂತ್ವನ ಹೇಳಿ ಸಮಾಧಾನಿಸಿದ್ದಾರೆ.
ರೆಕ್ಟಲ್ ಕ್ಯಾನ್ಸರ್ ಕಾಯಿಲೆಯಿ೦ದ ಬಳಲುತ್ತಿರುವ ಶಿವಮೊಗ್ಗದ ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಕುಮಾರ್ ಎನ್ ಗೆ ವಿಡಿಯೋ ಕಾಲ್ ಮಾಡಿ ಯಶ್ ಅವರು ಆರೋಗ್ಯ ವಿಚಾರಿಸಿದ್ದಾರೆ. ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ರಾಕಿಂಗ್ ಸ್ಟಾರ್ ಯಶ್
ವಿಡಿಯೋ ಕಾಲ್ ಮಾಡಿದ ವಿಡಿಯೋ ವೈರಲ್ ಆಗಿದ್ದು ಸದ್ಯ ಸುನೀಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಸಿನಿಮಾ (Toxic Movie) ಮುಂದೂಡಿಕೆಯಾಗಿದೆ. ಭಾರೀ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಜೂನ್ 4ಕ್ಕೆ ಚಿತ್ರಮಂದಿರಕ್ಕೆ ಬರಲಿದೆ ಎಂದು ಹೇಳಲಾಗಿತ್ತು. ಇದೀಗ ಯಶ್ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದು ಸಿನಿಮಾ ರಿಲೀಸ್ ಮುಂದೂಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ನಾವು ಮಾಡುವ ಸಿನಿಮಾಗಳು ಒಂದು ಕಡೆ, ಮತ್ತು ನಮಗೆ ಸಿನಿಮಾ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿದ ಸಿನಿಮಾಗಳು ಇನ್ನೊಂದಡೆ. ಯಾಕೆ ನಾವು ಸಿನಿಮಾದ ಎಂಬ ಪ್ರೀತಿಗೆ ಬಿದ್ದೆವು ಎಂಬುದನ್ನು ನೆನಪಿಸುವ ಸಿನಿಮಾಗಳಿವೆ. ಟಾಕ್ಸಿಕ್ ಅಂತಹ ಒಂದು ಪ್ರಯಾಣವಾಗಿದೆ.
ವರದಿ: ವಿನಯ್ ಪುರದಾಳ್, ನ್ಯೂಸ್18 ಕನ್ನಡ ಪ್ರತಿನಿಧಿ, ಶಿವಮೊಗ್ಗ
Bangalore,Karnataka
Jun 02, 2026 11:48 AM IST













