Women’s T20I WC: ಕಾಪ್​​ 81 ರನ್​​​ಗಳ ಆಟವಲ್ಲ, ನಮ್ಮ ಸೋಲಿಗೆ ಅದೊಂದು ತಪ್ಪು ಕಾರಣ! ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಕೌರ್ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಹರ್ಮನ್​​ಪ್ರೀತ್ ಕೌರ್


Last Updated:


ದಕ್ಷಿಣ ಆಫ್ರಿಕಾವನ್ನು ಗೆಲುವಿನತ್ತ ಕೊಂಡೊಯ್ದ ಕಾಪ್​​ ಆಡಿದ ಇನ್ನಿಂಗ್ಸ್ ಅನ್ನು ಹರ್ಮನ್ ಪ್ರೀತ್ ಶ್ಲಾಘಿಸಿದರು. ಆದರೆ, ಭಾರತೀಯ ತಮ್ಮ ತಂಡದ ಕೆಲವು ಪ್ಲೇಯರ್ಸ್ ಮಾಡಿದ ತಪ್ಪುಗಳೇ ಸೋಲಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ.

ಹರ್ಮನ್​​ಪ್ರೀತ್ ಕೌರ್
ಹರ್ಮನ್​​ಪ್ರೀತ್ ಕೌರ್

ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup) ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ (India vs South Africa) ಭಾರತ ತಂಡ 6 ವಿಕೆಟ್​ಗಳಿಂದ ಸೋಲು ಕಂಡಿತು. ಭಾರತ ಮೊದಲು ಬ್ಯಾಟಿಂಗ್ ಮಾಡಿ ಕೇವಲ 158 ರನ್​​​ಗಳಿಸಿತ್ತು. 159 ರನ್​ಗಳ ಗುರಿಯನ್ನ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 19.1 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಸೋಲಿನ ಬಗ್ಗೆ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬೇಸರ ಹೊರಹಾಕಿದ್ದಾರೆ. ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ ಎಂದು ಟೀಕಿಸಿದ್ದಾರೆ.

ಪಂದ್ಯದ ನಂತರ ಮಾತನಾಡಿದ ಹರ್ಮನ್‌ಪ್ರೀತ್, ಅವಕಾಶಗಳು ತಪ್ಪಿಹೋದುದೇ ಸೋಲಿಗೆ ಕಾರಣ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು. “ಪಂದ್ಯದ ಸಮಯದಲ್ಲಿ ನಮಗೆ ಉತ್ತಮ ಅವಕಾಶಗಳು ಸಿಕ್ಕವು, ಆದರೆ ದುರದೃಷ್ಟವಶಾತ್, ನಾವು ಅವುಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಪಂದ್ಯಾವಳಿಯಲ್ಲಿ ನಮಗೆ ಇನ್ನೂ ಎರಡು ಪಂದ್ಯಗಳು ಉಳಿದಿವೆ. ನಾವು ಸಕಾರಾತ್ಮಕವಾಗಿರುವುದು ಮತ್ತು ಮುಂಬರುವ ಪಂದ್ಯಗಳತ್ತ ಗಮನಹರಿಸುವುದು ಬಹಳ ಮುಖ್ಯ” ಎಂದು ಹರ್ಮನ್ ಪ್ರೀತ್ ಹೇಳಿದ್ದಾರೆ.

ಮರಿಝಾನ್ ಕಾಪ್ ಕ್ಯಾಚ್ ಕೈಚೆಲ್ಲಿದ ಭಾರತ

ದಕ್ಷಿಣ ಆಫ್ರಿಕಾವನ್ನು ಗೆಲುವಿನತ್ತ ಕೊಂಡೊಯ್ದ ಕಾಪ್​​ ಆಡಿದ ಇನ್ನಿಂಗ್ಸ್ ಅನ್ನು ಹರ್ಮನ್ ಪ್ರೀತ್ ಶ್ಲಾಘಿಸಿದರು. ಆದರೆ, ಭಾರತೀಯ ಫೀಲ್ಡರ್‌ಗಳು ಕಾಪ್ ನೀಡಿದ ಎರಡು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟಿದ್ದೆ ಭಾರತದ ಸೋಲಿಗೆ ಕಾರಣವೆಂದು ತಿಳಿಸಿದರು. “ಕಾಪ್ ಇಂದು ಅದ್ಭುತವಾಗಿ ಆಡಿದರು ಮತ್ತು ಏಕಾಂಗಿಯಾಗಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ಅವರು ಬ್ಯಾಟಿಂಗ್ ಮಾಡುವಾಗ ನಮಗೆ ಎರಡು ಪ್ರಮುಖ ಅವಕಾಶಗಳು ಸಿಕ್ಕವು. ಇಂತಹ ಅವಕಾಶಗಳನ್ನು ಬಿಟ್ಟುಕೊಟ್ಟರೆ, ಗೆಲುವು ನಿಮ್ಮ ಕೈಗೆ ಸಿಗುವುದಿಲ್ಲ. ಅದೇ ಪಂದ್ಯವನ್ನು ತಿರುಗಿಸಿತು” ಎಂದು ಕೌರ್​ ಹೇಳಿದರು.

ಶಫಾಲಿ-ಶ್ರೀಚರಣಿ ಶ್ಲಾಘಿಸಿದ ಕ್ಯಾಪ್ಟನ್

ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡುತ್ತಾ, ಶ್ರೀ ಚರಣಿ ಮತ್ತು ಶಫಾಲಿ ವರ್ಮಾ ಅದ್ಭುತವಾಗಿ ಬೌಲಿಂಗ್ ಮಾಡಿ ಚೆಂಡು ತಿರುಗುತ್ತಿರುವಾಗ ಹರಿಣಗಳ ಬ್ಯಾಟರ್​​ಗಳಿಗೆ ಸವಾಲು ಹಾಕಿದರು, ಆದರೆ ಅವರಿಗೆ ಇತರ ಬೌಲರ್‌ಗಳಿಂದ ನಿರೀಕ್ಷಿತ ಮಟ್ಟದ ಬೆಂಬಲ ಸಿಗಲಿಲ್ಲ ಎಂದು ತಿಳಿಸಿದರು. ಅಂತಹ ಪಿಚ್‌ಗಳಲ್ಲಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವುದು ಹೇಗೆ ಎಂಬುದರ ಕುರಿತು ಇತರ ಸ್ಪಿನ್ನರ್‌ಗಳು ಸಹ ಯೋಚಿಸಬೇಕಾಗಿದೆ ಎಂದು ಅವರು ಹೇಳಿದರು.

ಭಾರತದ ಸೆಮಿಫೈನಲ್ ಹಾದಿ

ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ಇದು ಮೊದಲ ಸೋಲಾದರೂ, ಸೆಮಿಫೈನಲ್​​​ ಪ್ರವೇಶದ ಹಾದಿಯನ್ನ ಈ ಸೋಲು ಕಠಿಣಗೊಳಿಸಿದೆ. ಏಕೆಂದರೆ ಭಾರತ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಲೀಗ್​​ ಪಂದ್ಯ ಆಡಬೇಕಿದೆ. ಈ ಪಂದ್ಯದಲ್ಲಿ ಭಾರತ ಸೋತರೆ ಬಹುತೇಕ ಟೂರ್ನಿಯಿಂದ ಹೊರ ಬೀಳಲಿದೆ. ಭಾರತ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಸೆಮಿಫೈನಲ್ ಪ್ರವೇಶಿಸಬಹುದು. ಮತ್ತೊಂದು ಅವಕಾಶವೆಂದರೆ ದಕ್ಷಿಣ ಆಫ್ರಿಕಾ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದಾದರೂ ಸೋಲಲಿ ಎಂದು ಪ್ರಾರ್ಥಿಸಬೇಕಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Women’s T20I WC: ಕಾಪ್​​ 81 ರನ್​​​ಗಳ ಆಟವಲ್ಲ, ನಮ್ಮ ಸೋಲಿಗೆ ಅದೊಂದು ತಪ್ಪು ಕಾರಣ! ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಕೌರ್ ಅಚ್ಚರಿ ಹೇಳಿಕೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed