Women’s T20 World Cup: ವೆಸ್ಟ್​ ಇಂಡೀಸ್ ಧೂಳೀಪಟ ಮಾಡಿ 8ನೇ ಬಾರಿಗೆ ಫೈನಲ್ ತಲುಪಿದ ಆಸ್ಟ್ರೇಲಿಯಾ ವನಿತೆಯರು | ಕ್ರೀಡಾ ಸುದ್ದಿ | ACTPnews

ಆಸ್ಟ್ರೇಲಿಯಾ ತಂಡ


Last Updated:

ಮೊದಲ ವಿಕೆಟ್​​​ಗೆ 47 ರನ್​ಗಳ ಜೊತೆಯಾಟ ನಡೆಸಿದ ಕೆರಿಬಿಯನ್ ಪಡೆ, ಅದೇ ಆರಂಭವನನ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಆಸ್ಟ್ರೇಲಿಯಾದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಮೊದಲ ವಿಕೆಟ್ ಪತನದ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು.

ಆಸ್ಟ್ರೇಲಿಯಾ ತಂಡ
ಆಸ್ಟ್ರೇಲಿಯಾ ತಂಡ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಮಣಿಸಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಮೊದಲ ತಂಡವಾಗಿ ಫೈನಲ್ ತಲುಪಿದೆ. ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಜರುಗಿದ ಈ ರೋಮಾಂಚನಕಾರಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು (Australia Women) ತನ್ನ ಸಾಂಘಿಕ ಬಲದಿಂದ ಎದುರಾಳಿ ಮೇಲೆ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿ ಗೆಲುವು ಸಾಧಿಸಿತು. ಈ ಅದ್ಭುತ ಗೆಲುವಿನ ಮೂಲಕ ಆಸ್ಟ್ರೇಲಿಯಾ ಮಹಿಳಾ ತಂಡ ಜಾಗತಿಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬರೋಬ್ಬರಿ ಎಂಟನೇ ಬಾರಿಗೆ ಫೈನಲ್ ಪ್ರವೇಶಿಸಿತು. ಇದು 10ನೇ ವಿಶ್ವಕಪ್ ಆಗಿದ್ದು, ಆಸೀಸ್ ತಂಡ ಕೇವಲ 2 ಬಾರೀ ಮಾತ್ರ ಫೈನಲ್ ಪ್ರವೇಶಿಸಲಿ ವಿಫಲರಾಗಿದೆ. ಈ ವರ್ಷದ ಫೈನಲ್ ಹೊರೆತುಪಡಿಸಿದರೆ, ಆಸ್ಟ್ರೇಲಿಯಾ ತಂಡ ಹಿಂದಿನ 7 ಫೈನಲ್​ಗಳಲ್ಲಿ 6 ರಲ್ಲಿ ಚಾಂಪಿಯನ್ ಆಗಿದೆ.

ಪರದಾಡಿದ ವೆಸ್ಟ್ ಇಂಡೀಸ್ ಬ್ಯಾಟರ್ಸ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಎದುರಾಳಿ ತಂಡವನ್ನ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸುವ ಮೂಲಕ ಉತ್ತಮ ತಂತ್ರಗಾರಿಕೆ ಪ್ರದರ್ಶಿಸಿದರು. ನಾಯಕಿಯ ನಿರ್ಧಾರವನ್ನು ಅಷ್ಟೇ ಶಿಸ್ತುಬದ್ಧವಾಗಿ ಸಮರ್ಥಿಸಿಕೊಂಡ ಆಸ್ಟ್ರೇಲಿಯಾದ ಮಾರಕ ಬೌಲರ್‌ಗಳು ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಿಂದಲೇ ಕಂಟಕರಾದರು. ವೆಸ್ಟ್ ಇಂಡೀಸ್ ತಂಡದ ಬ್ಯಾಟರ್‌ಗಳು ಆಸ್ಟ್ರೇಲಿಯಾದ ನಿಖರ ಬೌಲಿಂಗ್ ಮತ್ತು ಚುರುಕಾದ ಫೀಲ್ಡಿಂಗ್ ದಾಳಿಗೆ ತತ್ತರಿಸಿ ರನ್ ಗಳಿಸಲು ಪರದಾಡಿದರು. ವೆಸ್ಟ್ ಇಂಡೀಸ್ ಪರ ಆರಂಭಿಕ ಬ್ಯಾಟರ್ ಹ್ಯಾಲಿ ಮ್ಯಾಥ್ಯೂಸ್ ಬಿರುಸಿನ ಬ್ಯಾಟಿಂಗ್ ನಡೆಸಿ 28 ಎಸೆತಗಳಲ್ಲಿ 30 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು. ಅವರಿಗೆ ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಸಿಗದ ಕಾರಣ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.

ಮಧ್ಯಮ ಕ್ರಮಾಂಕದ ವೈಫಲ್ಯ ಮತ್ತು ಸಾಧಾರಣ ಮೊತ್ತ

ಮೊದಲ ವಿಕೆಟ್​​​ಗೆ 47 ರನ್​ಗಳ ಜೊತೆಯಾಟ ನಡೆಸಿದ ಕೆರಿಬಿಯನ್ ಪಡೆ, ಅದೇ ಆರಂಭವನನ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಆಸ್ಟ್ರೇಲಿಯಾದ ಬೌಲರ್‌ಗಳು ಅವಕಾಶ ನೀಡಲಿಲ್ಲ. ಮೊದಲ ವಿಕೆಟ್ ಪತನದ ನಂತರ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕ್ವಿನಾ ಜೋಶೆಫ್ 16, ಶೆಮೈನ್ ಕ್ಯಾಂಪ್​ಬೆಲ್ 22 ರನ್​ಗಳಿಸಿ ಔಟ್ ಆದರೆ, ಮಾಜಿ ನಾಯಕಿ ಸ್ಟೇಫನಿ ಟೇಲರ್ ಹಾಗೂ ಜಹ್ಜಾರಾ ಕ್ಲಾಕ್ಸ್ಟನ್​ ಖಾತೆ ತೆರಯಲು ವಿಪಲರಾದರು. ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ್ತಿ ಡಿಯಾಂಡ್ರಾ ಡಾಟ್ಟಿನ್ ದಿಟ್ಟ ಹೋರಾಟ ನಡೆಸಿ 26 ರನ್ ಗಳಿಸುವ ಮೂಲಕ ತಂಡದ ಮೊತ್ತ ನೂರರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಆಸ್ಟ್ರೇಲಿಯಾದ ಬಿಗಿಯಾದ ಬೌಲಿಂಗ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 125 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಲಷ್ಟೇ ಶಕ್ತವಾಯಿತು.

ಬೆತ್ ಮೂನಿ ಬಿರುಗಾಳಿ ಬ್ಯಾಟಿಂಗ್

ವೆಸ್ಟ್ ಇಂಡೀಸ್ ತಂಡ ನೀಡಿದ 126 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಬ್ಯಾಟರ್ ಬೆತ್ ಮೂನಿ ಬಿರುಸಿನ ಆರಂಭ ಒದಗಿಸಿದರು. ಪವರ್‌ಪ್ಲೇ ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡರೂ ಸಹ ಆಸ್ಟ್ರೇಲಿಯಾ ತಂಡವು ಬರೋಬ್ಬರಿ 63 ರನ್ ಚಚ್ಚಿ ಪಂದ್ಯದ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿತು. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಬೆತ್ ಮೂನಿ ಕೇವಲ 36 ಎಸೆತಗಳನ್ನು ಎದುರಿಸಿ 8 ಆಕರ್ಷಕ ಬೌಂಡರಿಗಳ ನೆರವಿನಿಂದ ಅಜೇಯ 61 ರನ್​ಗಳಿಸಿದರು.

ಎಲಿಸ್​​ ಪೆರ್ರಿ ಗಾಯದ ಆತಂಕ ಮತ್ತು ಗಾರ್ಡ್ನರ್ ಫಿನಿಶಿಂಗ್

ಬ್ಯಾಟಿಂಗ್ ಹಂತದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸಣ್ಣ ಆತಂಕ ಎದುರಾಯಿತು. ಸ್ಟಾರ್ ಆಲ್ರೌಂಡರ್ ಎಲಿಸೆ ಪೆರ್ರಿ ಅವರು ರನ್ ಗಳಿಸುವ ಓಟದಲ್ಲಿ ತೀವ್ರ ಸ್ನಾಯು ಸೆಳೆತಕ್ಕೆ (ಗಾಯ) ಒಳಗಾಗಿ ಮೈದಾನದಿಂದ ಹೊರನಡೆಯಬೇಕಾಯಿತು. ಆದರೆ ಆ ಬಳಿಕ ಮೈದಾನಕ್ಕಿಳಿದ ಆಶ್​ ಗಾರ್ಡ್ನರ್ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿ ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಗಾರ್ಡ್ನರ್ ಅವರ ಸ್ಫೋಟಕ ಫಿನಿಶಿಂಗ್ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಯಾವುದೇ ಹಂತದಲ್ಲೂ ಒತ್ತಡಕ್ಕೆ ಸಿಲುಕದೆ ಸುಲಭವಾಗಿ ಗೆಲುವಿನ ದಡ ಸೇರಿ ವಿಜಯೋತ್ಸವ ಆಚರಿಸಿತು.

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಫೈನಲ್

ಈ ಭರ್ಜರಿ ಮತ್ತು ಅಧಿಕಾರಯುತ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮಹಿಳಾ ತಂಡವು ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಜೇಯ ಯಾತ್ರೆಯನ್ನು ಯಶಸ್ವಿಯಾಗಿ ಮುಂದುವರಿಸಿದೆ. ಕಾಂಗರೂ ಪಡೆ ಜುಲೈ 5ರಂದು ಲಂಡನ್‌ನ ವಿಶ್ವವಿಖ್ಯಾತ ಹಾಗೂ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಜರುಗಲಿರುವ ಮಹಾಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯ ಗೆದ್ದವರ ವಿರುದ್ಧ ಆಡಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed