Last Updated:
Wilson Garden Naga: 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ.
ಬೆಳಗಾವಿ: ನಟ ದರ್ಶನ್ ಜೊತೆ ಚಹಾ ಕುಡಿದು ಸುದ್ದಿ ಮಾಡಿದ್ದ ಕುಖ್ಯಾತ ರೌಡಿ ಶೀಟರ್ (rowdy sheeter) ವಿಲ್ಸನ್ ಗಾರ್ಡನ್ ನಾಗ (Wilson Garden Naga) ರಿಲೀಸ್ ಆಗಿದ್ದಾನೆ. ಬೆಳಗಾವಿಯ (Belagavi) ಹಿಂಡಗಲಾ ಜೈಲಿನಲ್ಲಿದ್ದ (Hindalaga Jail) ವಿಲ್ಸನ್ ಗಾರ್ಡನ್ ನಾಗ, ಇದೀಗ ಬಿಡುಗಡೆಯಾಗಿದ್ದಾನೆ. 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ.
ಬೆಳಗಾವಿಯ ಹಿಂಡಲಗಾ ಜೈಲಿನಿಂದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಬಿಡುಗಡೆ ಆಗಿದ್ದಾನೆ. ಕಳ್ಳತನ, ಮರ್ಡರ್ ಕೇಸ್‌ನಲ್ಲಿ ನಾಗ ಜೈಲು ಸೇರಿದ್ದ. ಬೆಂಗಳೂರಿನ ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬೆಳಗಾವಿ ಜೈಲು ಸೇರಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಇದೀಗ ಹಿಂಡಲಗಾ ಜೈಲಿನಿಂದ ರಿಲೀಸ್ ಆಗಿದ್ದಾನೆ.
ಕಳೆದ 2024ರ ಜುಲೈನಿಂದ ಹಿಂಡಲಗಾ ಜೈಲಿನ ಕೈದಿಯಾಗಿದ್ದ ನಾಗನಿಗೆ, ಹೈಕೋರ್ಟ್ ಜಾಮೀನು ನೀಡಿತ್ತು. ಇತ್ತ ಅನಾರೋಗ್ಯದ ಹಿನ್ನೆಲೆಯಲ್ಲಿ ನಾಗನನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೇಲ್ ಮಂಜೂರು ಹಿನ್ನೆಲೆಯಲ್ಲಿ ಬೆಳಗಾವಿ ಬೀಮ್ಸ್ ಆಸ್ಪತ್ರೆಯಿಂದೇ ನಾಗನನ್ನು ರಿಲೀಸ್ ಮಾಡಲಾಯ್ತು. ಬಳಿಕ ಮುಖಕ್ಕೆ ಮಾಸ್ಕ್ ಧರಿಸಿ, ಕಾರ್‌ನಲ್ಲಿ ನಾಗ ಬೆಂಗಳೂರಿಗೆ ಪ್ರಯಾಣಿಸಿದ್ದಾನೆ.
ವಿಲ್ಸನ್ ಗಾರ್ಡನ್ ನಾಗನ ನಿಜ ಹೆಸರು ಜೆ. ನಾಗರಾಜ್. ಬೆಂಗಳೂರಿನ ನಟೋರಿಯಸ್ ರೌಡಿ ಶೀಟರ್ ಮತ್ತು ಗ್ಯಾಂಗ್‌ಸ್ಟರ್. ವಿಲ್ಸನ್ ಗಾರ್ಡನ್ ಪ್ರದೇಶದ ವಿನಾಯಕ ನಗರ ಸ್ಲಮ್‌ನಿಂದ ಬಂದವನು. ತಮಿಳುನಾಡು ಮೂಲದ ಕೂಲಿ ಕಾರ್ಮಿಕರ ಕುಟುಂಬದಿಂದ ಬಂದು, ನಾಲ್ಕು ದಶಕಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದ.
ಹದಿನೆಂಟು ವರ್ಷಕ್ಕೂ ಮುಂಚೆಯೇ ಅಪರಾಧಗಳಲ್ಲಿ ತೊಡಗಿದ್ದ. ಮೈನರ್ ಆಗಿದ್ದಾಗ ವಾಹನ ಕಳವು ಮಾಡಿದ್ದ. 2004ರಲ್ಲಿ ವಯಸ್ಕರಾಗಿ ಮೊದಲ ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿ ಇತರ ಗ್ಯಾಂಗ್ ಸದಸ್ಯರೊಂದಿಗೆ ಸ್ನೇಹ ಬೆಳೆಸಿ ಅಂಡರ್‌ವರ್ಲ್ಡ್‌ಗೆ ಎಂಟ್ರಿ ಪಡೆದಿದ್ದ.
ವಿಲ್ಸನ್ ಗಾರ್ಡನ್ ನಾಗನ ಮೇಲೆ 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೊಲೆ, ಕೊಲೆ ಪ್ರಯತ್ನ, ದರೋಡೆ, ಎಕ್ಸ್‌ಟಾರ್ಷನ್, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಹಿಂಸೆ ಇತ್ಯಾದಿ ಕೇಸ್ ಇದೆ. ಕನಿಷ್ಠ 6-7 ಕೊಲೆ ಅಥವಾ ಕೊಲೆ ಪ್ರಯತ್ನ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಕಳೆದ 20 ವರ್ಷಗಳಲ್ಲಿ ಏಳು ಕೊಲೆ ಸಂಬಂಧಿತ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಸಿದ್ದಾಪುರ, ಕಲಾಸಿಪಾಳ್ಯ ಸೇರಿದಂತೆ ಬೆಂಗಳೂರಿನ ಹಲವು ಪೊಲೀಸ್ ಸ್ಟೇಷನ್‌ಗಳಲ್ಲಿ ರೌಡಿ ಶೀಟರ್ ಆಗಿದ್ದಾನೆ.
(ವರದಿ: ಚಂದ್ರಕಾಂತ ಸುಗಂಧಿ, ನ್ಯೂಸ್ 18 ಕನ್ನಡ, ಬೆಳಗಾವಿ)
Belgaum,Belgaum,Karnataka













