Last Updated:
ಶ್ರೀಲಂಕಾ ಪ್ರವಾಸಕ್ಕೆ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಟೀಮ್ ಇಂಡಿಯಾ ಸೇರುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ಸರ್ಫರಾಜ್ ಖಾನ್ ಅವರ ಹೊಸ ಲುಕ್ ನೋಡಿ ಶಾಕ್ ಆಗಿದ್ದಾರೆ.
ಕ್ರೀಡಾ (Sports) ಜಗತ್ತಿನಲ್ಲಿ ಯಾರಿಗೆ ಯಾವಾಗ ಅದೃಷ್ಟ (Luck) ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸರ್ಫರಾಜ್ ಖಾನ್(Sarfaraz Khan)ಗೆ ಬೇಕಾದ ಸಮಯದಲ್ಲಿ ಅದೃಷ್ಟ ಬಂದಿದೆ. ಸಾಯಿ ಸುದರ್ಶನ್ (Sai Sudarshan) ಗಾಯಗೊಂಡಿದ್ದರಿಂದ ಅವರು ಶ್ರೀಲಂಕಾ (Sri Lanka) ಪ್ರವಾಸದಿಂದ ಹೊರಗುಳಿದರು. ಆದ್ದರಿಂದ ಸರ್ಫರಾಜ್ ಖಾನ್ಗೆ ಆಡುವ ಅವಕಾಶ ಸಿಕ್ಕಿದೆ. ಅವಕಾಶ ಸಿಕ್ಕಾಗ ಅವರು ಅದನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ನೋಡಬೇಕು.














