Last Updated:
ವಿಷ್ಣುವರ್ಧನ್ ಜನ್ಮ ದಿನಕ್ಕೆ ಅಭಿಮಾನಿಗಳು ಅತಿ ದೊಡ್ಡ ಹಬ್ಬ ಮಾಡುತ್ತಿದ್ದಾರೆ. ಬೃಹತ್ ಧ್ವಜದ ಮೆರವಣಿಗೆ ಕೂಡ ಹಮ್ಮಿಕೊಂಡಿದ್ದಾರೆ. 18 ಗಂಟೆಗಳ ಕಾಲ ಕಾರ್ಯಕ್ರಮಗಳನ್ನೆ ಪ್ಲಾನ್ ಮಾಡಿದ್ದಾರೆ. ಇದರ ಅಧಿಕೃತ ವಿವರ ಇಲ್ಲಿದೆ ಓದಿ.
ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನವನ್ನ (Vishnuvardhan 75th Birthday) ಅದ್ದೂರಿಯಾಗಿಯೇ ಆಚರಿಸುತ್ತಿದ್ದಾರೆ. ಸೆಪ್ಟೆಂಬರ್-27 ರಂದು ಈ ಬೃಹತ್ ಕಾರ್ಯಕ್ರಮ ನಡೆಯುತ್ತಿದೆ. ಅರ್ಧ ಕಿಲೋ ಮೀಟರ್ ಉದ್ದದ ಧ್ವಜದ ಮೆರವಣಿಗೆನೂ ಇರುತ್ತದೆ. ಸಾವಿರಾರು ವಿಷ್ಣು ಅಭಿಮಾನಿಗಳು ಈ ಧ್ವನಜವನ್ನ ಹೆಮ್ಮೆಯಿಂದ ಹಿಡಿದು ಸಾಗಿದ್ದಾರೆ. ನಾಯಂಡಹಳ್ಳಿಯಿಂದ ನಂದಿ ಲಿಂಕ್ ಗ್ರೌಂಡ್ವರೆಗೂ ಸಾಗಲಿದ್ದಾರೆ. ವಿಷ್ಣುವರ್ಧನ್ (Vishnuvardhan) ಅವರ ಅಭಿಮಾನಿಗಳ ವಿಷ್ಣು ಸೇನಾ ಸಮಿತಿ (Vishnu Sena Samithi) ಇದನ್ನ ಮಾಡುತ್ತಿದೆ. ಈ ಒಂದು ಬೃಹತ್ ಕಾರ್ಯಕ್ರಮದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.














