Virat Kohli vs Travis Head: ಪಂದ್ಯದ ನಂತರವೂ ಕೊಹ್ಲಿ ಆಕ್ರೋಶ! ‘ಹ್ಯಾಂಡ್‌ಶೇಕ್’ ಮಾಡಲು ಬಂದ ಟ್ರಾವಿಸ್ ಹೆಡ್ ವಿರುದ್ಧ ಸಿಟ್ಟಿಗೆದ್ದಿದ್ದೇಕೆ ವಿರಾಟ್? ವಿಡಿಯೋ ವೈರಲ್ | ಕ್ರೀಡಾ ಸುದ್ದಿ | ACTPnews

News18


Last Updated:

Virat Kohli and Travis Head clash during SRH vs RCB: ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಸ್‌ಆರ್‌ಎಚ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ.

News18
News18

ಹೈದರಾಬಾದ್: ನಿನ್ನೆ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ (RCB vs SRH) ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ವಾಗ್ವಾದ ನಡೆಯಿತು. ಈ ಜಗಳ ಅಲ್ಲಿಗೆ ಮುಗಿಯಲಿಲ್ಲ, ಪಂದ್ಯ ಮುಗಿದ ನಂತರವೂ ವಿರಾಟ್ ಆಕ್ರೋಶಗೊಂಡಿದ್ದರು. ಈ ಸಂಬಂಧ (Virat Kohli and Travis Head Handshake clash) ವಿಡಿಯೋ ವೈರಲ್ ಆಗಿದೆ.

ಅಂದಹಾಗೆ, ನಿನ್ನೆ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 55 ರನ್‌ಗಳಿಂದ ಸೋಲಿಸಿತು. ಪಂದ್ಯದ ನಂತರವೂ ಆಸ್ಟ್ರೇಲಿಯಾದ ಆಟಗಾರನ ಮೇಲೆ ಕೊಹ್ಲಿಗೆ ಇದ್ದ ಕೋಪ ಕಡಿಮೆಯಾಗಿರಲಿಲ್ಲ. ಟ್ರಾವಿಸ್ ಹೆಡ್ ಕೈಕುಲುಕಲು ಮುಂದಾದರೂ ವಿರಾಟ್ ಕೊಹ್ಲಿ ಅವರು ಕೈಕುಲುಕಲು ನಿರಾಕರಿಸಿದರು ಮಾತ್ರವಲ್ಲದೇ, ಅವರ ಮುಖವೂ ನೋಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು,  ಅನೇಕರು ಭಾರತೀಯ ಆಟಗಾರನ ನಡವಳಿಕೆಯ ಬಗ್ಗೆ ಪರವಿರೋಧ ಚರ್ಚೆ ಮಾಡುತ್ತಿದ್ದಾರೆ.

ಇಬ್ಬರ ಮಧ್ಯೆ ಜಗಳ ಯಾಕೆ?

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಸ್‌ಆರ್‌ಎಚ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಯಾವುದೋ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ‘ಕೆಲವು ಓವರ್ ಬೌಲಿಂಗ್ ಮಾಡು ನೋಡೋಣ’ ಎಂದು ಸವಾಲು ಹಾಕಿದ್ದರು, ಆದರೆ, ಕೊಹ್ಲಿ, ಕೇವಲ ಹದಿನೈದು ರನ್ ಗಳಿಸಿ ಔಟಾಗಿದ್ದರು. ಇದು ಕೂಡ ಕೊಹ್ಲಿ ಅವರನ್ನು ನಿರಾಸೆ ಮಾಡಿತ್ತು ಎನ್ನಲಾಗಿದೆ.

ಆದರೆ, ನಂತರ, ‘ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀನು ಔಟ್ ಆಗಿ ಹೋದಿಯಲ್ಲಾ’ ಎಂದು ಟ್ರಾವಿಸ್ ಹೆಡ್, ಮತ್ತೆ ಕೊಹ್ಲಿಯನ್ನು ಕೆಣಕಿದ್ದಾರೆ. ಇದು ವಿರಾಟ್ ಕೊಹ್ಲಿ ಕೋಪಕ್ಕೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದರಿಂದ ಸಿಟ್ಟಿನಲ್ಲಿದ್ದ ಕೊಹ್ಲಿ ಪಂದ್ಯದ ನಂತರವೂ ಹಸ್ತಲಾಘವ ಮಾಡುವಾಗ ಹೆಡ್ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Petrol, Diesel Prices Hiked: ಮತ್ತೊಮ್ಮೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ! ಕೇವಲ 10 ದಿನದಲ್ಲಿ ಮೂರನೇ ಬಾರಿಗೆ ಹೆಚ್ಚಳ!

ಅಂದಹಾಗೆ, ಆರ್‌ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ಈ ವಾಗ್ವಾದ ಆರಂಭವಾಗಿದೆ. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಶಾನ್ ಕಿಶನ್ (79), ಅಭಿಷೇಕ್ ಶರ್ಮಾ (56) ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಸ್ಫೋಟಕ ಇನ್ನಿಂಗ್ಸ್‌ನ ನೆರವಿನಿಂದ, SRH 255 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೇವಲ 200 ರನ್‌ಗಳಿಗೆ ಮಾತ್ರ ಶಕ್ತವಾಯಿತು.

ಹಾಲಿ ಚಾಂಪಿಯನ್ ಆರ್‌ಸಿಬಿ ಈ ವರ್ಷ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಜಿಟಿ ಮತ್ತು ಎಸ್‌ಆರ್‌ಹೆಚ್ ಕೂಡ ತಲಾ 18 ಅಂಕಗಳನ್ನು ಹೊಂದಿವೆ, ಆದರೆ ಬೆಂಗಳೂರು ತಂಡವು ಈ ಮೂರರಲ್ಲಿ ಅತ್ಯುತ್ತಮ ನಿವ್ವಳ ರನ್ ರೇಟ್ (+0.783) ಹೊಂದಿದೆ. ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ರಲ್ಲಿ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Virat Kohli vs Travis Head: ಪಂದ್ಯದ ನಂತರವೂ ಕೊಹ್ಲಿ ಆಕ್ರೋಶ! ‘ಹ್ಯಾಂಡ್‌ಶೇಕ್’ ಮಾಡಲು ಬಂದ ಟ್ರಾವಿಸ್ ಹೆಡ್ ವಿರುದ್ಧ ಸಿಟ್ಟಿಗೆದ್ದಿದ್ದೇಕೆ ವಿರಾಟ್? ವಿಡಿಯೋ ವೈರಲ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed