Vinod Prabhakar: ಸೆಂಟ್ರಲ್ ಜೈಲಿನೊಳಗೆಯೇ ಕೊಲೆಯಾದ ಬೆಂಗಳೂರಿನ ರೌಡಿ ಕಥೆ! ಬಲರಾಮನಾಗಿ ಬೆಳ್ಳಿ ತೆರೆಗೆ ಬಂದ ವಿನೋದ್ ಪ್ರಭಾಕರ್! ಹೇಗಿದೆ ಸಿನಿಮಾ? | | ACTPnews

ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ!


Last Updated:

Balaramana A dinagalau Review: ಹೇಗಿದೆ ವಿನೋದ್ ಪ್ರಭಾಕರ್ ಅಭಿನಯದ ಬಲರಾಮನ ಆ ದಿನಗಳು ದಿನಿಮಾ? ವಿಮರ್ಶೆ ಇಲ್ಲಿದೆ ಓದಿ.

ಬಲರಾಮನ ದಿನಗಳು
ಬಲರಾಮನ ದಿನಗಳು

ಸ್ಯಾಂಡಲ್​ವುಡ್​ನಲ್ಲಿ (Sandalwood) ಹೊಸ ಹೊಸ ಸಿನಿಮಾಗಳು (Cinema) ಬರುತ್ತಲೇ ಇವೆ. ಇದೀಗ ವಿನೋದ್ ಪ್ರಬಾಕರ್ (Vinod Prabhakar) ಬಲರಾಮನಾಗಿ (Balarama) ತೆರೆ ಮೇಲೆ ಬಂದಿದ್ದಾರೆ. ಕಂಟೆಂಟ್ ಚನ್ನಾಗಿದ್ದರೆ ಸಿನಿಮಾ ಹಿಟ್ ಆಗೇ ಆಗುತ್ತೆ ಅಭಿಮಾನಿಗಳ ಮನ ಗೆಲ್ಲುತ್ತೆ ಅನ್ನೋದನ್ನು ಬಲರಾಮನ ದಿನಗಳು ನಿರೂಪಿಸಿದೆ.

ಕೋಟಿ ಕೋಟಿ ಬಜೆಟ್ ಹಾಕಿ ಪ್ಯಾನ್ ಇಂಡಿಯಾ ಅಂತ ಹಿಂದೆ ಬಿದ್ದು ಕತೆ ಕಡೆಗೆ ಗಮನ ಹರಿಸದ ಮಂದಿಯ ಮುಂದೆ ಬಲರಾಮ ಗೆದ್ದಿದ್ದಾನೆ. ಮತ್ತೊಮ್ಮೆ ಬಲರಾಮನ ಸಾರಥಿ ಕೆಎಂ ಚೈತನ್ಯ, ಬಲರಾಮನ ದಿನಗಳ ಮೂಲಕ ಆ ದಿನಗಳನ್ನ ತೆರೆ ಮೇಲೆ ತಂದಿದ್ದಾರೆ.

ಬಲರಾಮ ರೌಡಿ ಶಿಟರ್

80 ರದಶಕದಲ್ಲಿ ಬಲರಾಮ ಬಂದರೆ ಅಂಗಡಿಗಳೆಲ್ಲವು ಬಂದ್ ಆಗುತ್ತಿದ್ದವು. ಆದರೆ ಹೆಸರಿಗೆ ತಕ್ಕಂತೆ ಬಲಭೀಮನಂತಿದ್ದ ಬಲರಾಮ ಸೆಂಟ್ರಲ್ ಜೈಲಿನಲ್ಲೇ ಕೊಲೆಯಾಗೋ ಮೂಲಕ ಸುದ್ದಿಯಾಗಿದ್ದರು. ಇದೀಗ ಅದೇ ಬಲರಾಮನಾಗಿ ವಿನೋದ್ ಪ್ರಭಾಕರ್ ಪಾತ್ರಕ್ಕೆ ಜೀವ ತುಂಬಿದ್ದ ನೈಜ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.

ಇದಿಷ್ಟೆ ಅಲ್ಲ ಚಿತ್ರದಲ್ಲಿ ಬರುವ ಒಂದೊಂದು ಪಾತ್ರಗಳು ಕೂಡ ನೆನಪಲ್ಲಿ ಉಳಿಯುತ್ತವೆ. ಅದರಲ್ಲು ಕತ್ತಿ ಪಾತ್ರದಲ್ಲಿ ನಟಿಸಿರೋ ಬಿಗ್​ಬಾಸ್ ಖ್ಯಾತಿಯ ವಿನಯ್ ಗೌಡ ಆ ಪಾತ್ರದಲ್ಲಿ ಜೀವಿಸಿದ್ದಾರೆ. ಆರಂಭದಿಂದ ಕೊನೆಯವರೆಗು ತೆರೆಯನ್ನ ಆಕ್ರಮಿಸಿಕೊಂಡಿದ್ದಾರೆ.

ಶಶಿಧರ್ ಪಾತ್ರದಲ್ಲಿ ಅತುಲ್ ಕುಲಕರ್ಣಿ ಇಂಟಲಿಜೆಂಟ್ ಕ್ರಿಮಿನಲ್ ಆಗಿ ಇಷ್ಟವಾಗ್ತಾರೆ. ಅಲ್ಲದೆ ಜಯರಾಶ್ ಪಾತ್ರದ ಆಶಿಷ್ ವಿದ್ಯಾರ್ಥಿಯ ಸಮಾಜ ಸೇವೆ ರೌಡಿಗಳಲ್ಲಿ ಮನುಷ್ಯತ್ವ ಇರುತ್ತೆ ಓದದೆ ಇದ್ದರೂ ಮೋಸ ಮಾಡೋ ಗುಣ ಇರಲ್ಲ ಅನ್ನೋದನ್ನ ಸಾರಿ ಸಾರಿ ಹೇಳುತ್ತೆ.

ನಟ ಅವಿನಾಶ್ ವಠಾರದ ಗಲಾಟೆಯ ಮೂಲಕ ಶುರುವಾಗೋ ಪ್ರೇಮಕತೆಯಲ್ಲಿ ಬಲರಾಮನ ಜೋಡಿಯಾಗಿ ರೇವತಿ ಪಾತ್ರದ ಮೂಲಕ ಪ್ರಿಯಾ ಆನಂದ್ ಇಷ್ಟವಾಗ್ತಾರೆ. ಇನ್ನುಳಿದಂತೆ ಬಿಂಡ ಪಾತ್ರಧಾರಿಯ ಮಗನೇ ಮುಂದೆ ಬಲರಾಮನ ಜೀವಕ್ಕೆ ಹಾನಿ ಮಾಡೋ ಟ್ವಿಸ್ಟ್ ಇಷ್ಟವಾಗುತ್ತದೆ. ಇನ್ನು ರಮೇಶ್ ಇಂದಿರಾ ಮುತ್ತಪ್ಪ ರೈ ಪಾತ್ರದಲ್ಲಿ ಗಮನ ಸಳೆದಿದ್ದು ಸಂತೋಷ್ ನಾರಾಯಣ್ ಬಿಜಿಎಮ್ ಚಿತ್ರದ ಪ್ಲಸ್ ಆಗಿದೆ.

ವರದಿ: ಗೀತಾಶ್ರೀ ಹಾಸನ್ ನ್ಯೂಸ್ 18 ಕನ್ನಡ

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Vinod Prabhakar: ಸೆಂಟ್ರಲ್ ಜೈಲಿನೊಳಗೆಯೇ ಕೊಲೆಯಾದ ಬೆಂಗಳೂರಿನ ರೌಡಿ ಕಥೆ! ಬಲರಾಮನಾಗಿ ಬೆಳ್ಳಿ ತೆರೆಗೆ ಬಂದ ವಿನೋದ್ ಪ್ರಭಾಕರ್! ಹೇಗಿದೆ ಸಿನಿಮಾ?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed