Last Updated:
ನಾನು ನನ್ನ ತಂದೆ ಪ್ರಭಾಕರ್ ಅವರ ಮುಂದುವರೆದ ಅಧ್ಯಾಯವೇ ಆಗಿದ್ದೇನೆ. ನಮ್ಮ ತಂದೆಗೆ ಅವಾರ್ಡ್ ಬರಲೇ ಇಲ್ಲ. ಆದರೆ, ನನಗೆ ಬರೋ ಪ್ರಶಸ್ತಿಗಳನ್ನ ಅಪ್ಪನಿಗೆ ಅರ್ಪಿಸುತ್ತೇನೆ ಅಂತ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ಇವರ ಎಮೋಷನಲ್ ಮಾತುಗಳ ಪೂರ್ಣ ವಿವರ ಇಲ್ಲಿದೆ ಓದಿ.
ನಮ್ಮ ತಂದೆಗೆ ಯಾವುದೇ ಅವಾರ್ಡ್ (Award) ಬಂದಿರಲಿಲ್ಲಿ. ಅವರು 52ನೇ ವಯಸ್ಸಿಗೇನೆ ಹೊರಟು ಹೋದ್ರು. ಅವರು ಬಿಟ್ಟು ಹೋದ ಅಧ್ಯಾಯದ ಮುಂದುವರೆದ ಭಾಗ ನಾನು ಅಂತ ವಿನೋದ್ ಎಮೋಷನಲ್ (Vinod Emotional) ಆಗಿಯೇ ಹೇಳಿಕೊಂಡಿದ್ದಾರೆ. ಬಲರಾಮನ ದಿನಗಳು ಚಿತ್ರ (Balaramana Dinagalu Movie) ಆ ದಿನಗಳು ಚಿತ್ರದ ಮುಂದುವರೆದ ಅಧ್ಯಾಯವೇ ಆಗಿದೆ. ನಾನು ನನ್ನ ಅಪ್ಪನ ಮುಂದುರೆದ ಅಧ್ಯಾಯವೇ ಆಗಿದ್ದೇನೆ. ಆರಂಭದಲ್ಲಿ ಒಂದಷ್ಟು ತಪ್ಪುಗಳನ್ನ ಮಾಡಿದ್ದೇನೆ. ಆದರೆ, ಇದೀಗ ಎಲ್ಲವೂ ಸರಿ ಹೋಗ್ತಿದೆ. ನನಗೆ ಸಿಗ್ತಿರೋ ಪ್ರತಿ ಅವಾರ್ಡ್ ಅನ್ನು ನಾನು ನನ್ನ ತಂದೆಗೆ ಅರ್ಪಿಸುತ್ತೇನೆ ಅಂತಲೇ ವಿನೋದ್ ಪ್ರಭಾಕರ್ (Vinod Prabhakar) ಹೇಳಿಕೊಂಡಿದ್ದಾರೆ. ಇವರ ಎಮೋಷನಲ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಲರಾಮನ ದಿನಗಳು ಚಿತ್ರ ಈ ತಿಂಗಳು 26 ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರವೂ ಜೋರಾಗಿಯೇ ನಡೀತಿದೆ. ಹಾಡುಗಳ ರಿಲೀಸ್ ಆಗ್ತಾನೇ ಇವೆ.
ನಾನು ಅಪ್ಪನ ಮುಂದುವರೆದ ಅಧ್ಯಾಯ
ನಮ್ಮ ತಂದೆ ಅರ್ಧಕ್ಕೆ ಹೊರಟು ಹೋದ್ರು. 52 ನೇ ವಯಸ್ಸಿಗೇನೆ ಹೊರಟು ಹೋದ್ರು. ಅವರಿಗೆ ಯಾವುದೇ ಅವಾರ್ಡ್ ಕೂಡ ಬಂದಿರಲಿಲ್ಲ.
ಅವರ ಮುಂದುವರೆದ ಅಧ್ಯಾಯವೇ ನಾನಾಗಿದ್ದೇನೆ. ನನಗೆ ಬರುವ ಪ್ರತಿ ಅವಾರ್ಡ್ ಅನ್ನು ನಮ್ಮ ತಂದೆಗೆ ಅರ್ಪಿಸುತ್ತೇನೆ. ನಾನು ಇಲ್ಲಿದ್ದೇನೆ ಅಂದ್ರೆ ಅದು ನಮ್ಮ ತಂದೆಯಿಂದಲೇ ಅಂತ ವಿನೋದ್ ಪ್ರಭಾಕರ್ ತಂದೆ ನೆನೆದು ಎಮೋಷನಲ್ ಆಗಿದ್ದಾರೆ.
ಬಲರಾಮನ ದಿನಗಳು ಆ ದಿನಗಳು ಮುಂದುವರೆದ ಅಧ್ಯಾಯವೇ ಆಗಿದೆ. ಹಾಗೆ ನಾನು ಇಲ್ಲಿ ನನ್ನ ತಂದೆಯ ಮುಂದುವರೆದ ಅಧ್ಯಾಯವಾಗಿದ್ದೇನೆ. ಹೀಗೆ ಹೇಳುತ್ತಲೇ ತಮ್ಮ ಬಲರಾಮನ ದಿನಗಳು ಚಿತ್ರದ ಕುರಿತು ಹೇಳಿಕೊಂಡಿದ್ದಾರೆ.
ಈ ಚಿತ್ರದ ವಿಚಾರಕ್ಕೆ ಬಂದ್ರೆ, ಕೆ.ಎಂ. ಚೈತನ್ಯ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಆ ದಿನಗಳು ಚಿತ್ರವನ್ನು ಇವರೇ ಡೈರೆಕ್ಷನ್ ಮಾಡಿರೋದು. ಇಲ್ಲಿ ಈ ಸಲ ಬಲರಾಮನ ಕತೆ ಹೇಳುತ್ತಿದ್ದಾರೆ.
52 ವರ್ಷಕ್ಕೇನೆ ಅಪ್ಪ ಹೋದ್ರು
ಬಲರಾಮನ ದಿನಗಳು ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಕೊಟ್ಟಿದ್ದಾರೆ. ಆಲ್ ಓಕೆ ಈ ಚಿತ್ರಕ್ಕೆ ಯಾರಿಲ್ಲ ಯಾರಿಲ್ಲ ಅನ್ನುವ ಹಾಡು ಬರೆದಿದ್ದಾರೆ. ರಾಪ್ ಮಾಡಿದ್ದಾರೆ, ಹಾಡೂ ಕೂಡ ಇವರೇ ಹಾಡಿದ್ದಾರೆ.
ಈ ಚಿತ್ರದಲ್ಲಿ ಸುಮಾರು ವಿಷಯ ಇದೆ. ಆ ದಿನಗಳು ಚಿತ್ರದ ಪಾತ್ರಗಳು ಇಲ್ಲಿ ಮುಂದುವರೆದಿವೆ. ಆಶಿಶ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ ಹೀಗೆ ಸುಮಾರು ಕ್ಯಾರೆಕ್ಟರ್ ಇಲ್ಲೂ ಇವೆ.
ವಿನೋದ್ ಪ್ರಭಾಕರ್ ಈ ಚಿತ್ರವನ್ನ 7 ಕೋಟಿ ಬಜೆಟ್ ಅಲ್ಲಿಯೇ ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದರು. ಅಷ್ಟರಲ್ಲಿಯೇ ಇಡೀ ಚಿತ್ರ ಮುಗಿಬೇಕು ಅಂತಲೂ ಹೇಳಿದ್ದರು.
ಆದರೆ, ಈ ಚಿತ್ರಕ್ಕೆ ಪದ್ಮಾವತಿ ಜಯರಾಮ್ ಹಾಗೂ ಶ್ರೇಯಶ್ ಜೊತೆ ಆಗಿದ್ದಾರೆ. ಇದರಿಂದ ಈ ಚಿತ್ರದ ಬಜೆಟ್ ಅದನ್ನ ದಾಟಿ ಹೋಗಿದೆ. ಮಾದೇವ ಚಿತ್ರ ಬಂದ್ಮೇಲೆ ವಿನೋದ್ ಬೇಡಿಕೆ ಜಾಸ್ತಿ ಆಗಿದೆ. ಮಾರ್ಕೆಟ್ ಕೂಡ ಚೇಂಜ್ ಆಗಿದೆ. ಹಾಗಾಗಿಯೇ ವಿನೋದ್ ಅವರಿಗೆ ಧೈರ್ಯ ಇದೆ. ಕತೆ ಮೇಲೂ ನಂಬಿಕೆ ಇದೆ ಅಂತ ಹೇಳಬಹುದು.
Bangalore [Bangalore],Bangalore,Karnataka













