Vijayalakshmi Darshan: ‘ಅಣ್ಣ ಹೊರಗೆ ಬಂದೇ ಬರ್ತಾರೆ’ ಕಣ್ಣೀರಿಟ್ಟ ಅಭಿಮಾನಿಗಳ ನೋಡಿ ಭಾವುಕರಾದ್ರು ವಿಜಯಲಕ್ಷ್ಮಿ | Vijayalakshmi Darshan meets fans after meeting | | ACTPnews

ದರ್ಶನ್-ವಿಜಯಲಕ್ಷ್ಮಿ


Last Updated:

Darshan: ದರ್ಶನ್ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದ ನಂತರ ವಿಜಯಲಕ್ಷ್ಮಿ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕಣ್ಣೀರಿಡುತ್ತಿದ್ದ ಸೆಲೆಬ್ರಿಟಿಸ್​​ಗೆ ಅವರು ಧೈರ್ಯ ತುಂಬಿದ್ದಾರೆ.

ದರ್ಶನ್-ವಿಜಯಲಕ್ಷ್ಮಿ
ದರ್ಶನ್-ವಿಜಯಲಕ್ಷ್ಮಿ

ವಿಜಯಲಕ್ಷ್ಮಿ (Vijayalakshmi) ಅವರು ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಗಂಡನ ಜೊತೆ ಸಂಭ್ರಮದಲ್ಲಿ ಆಚರಿಸಬೇಕಾಗಿತ್ತು. ಆದರೆ ವಿಧಿ ಬೇರೆಯೇ. ಅವರು ಡಿಜಿಪಿಯನ್ನು (DGP) ಭೇಟಿಯಾಗಿ ಅನುಮತಿ ಪಡೆದು ಮಗನ ಜೊತೆ ಹೋಗಿ ಪರಪ್ಪನ ಅಗ್ರಹಾರದಲ್ಲಿ ಗಂಡನನ್ನು ಭೇಟಿಯಾಗಬೇಕಾಗಿ ಬಂತು. ಆ್ಯನಿವರ್ಸರಿ ಎಂದರೆ ವಿದೇಶಗಳಲ್ಲಿ ಪ್ರವಾಸ ಮಾಡಿ ವಿವಾಹ ವಾರ್ಷಿಕೋತ್ಸವ ಆಚರಿಸುತ್ತಿದ್ದ ಜೋಡಿ ಈಗ ಅರ್ಧ ಗಂಟೆ ಅವಕಾಶ ಒಡೆದು, ಹಲವಾರು ಕಂಡೀಷನ್ಸ್ ಫಾಲೋ ಮಾಡಿ ಭೇಟಿ ಮಾಡಬೇಕಾಗಿ ಬಂದಿದೆ.

ಮಗ ವಿನೀಶ್ ಜೊತೆ ರೇಂಜ್ ರೋವರ್ ಕಾರಿನಲ್ಲಿ ಪರಪ್ಪನ ಅಗ್ರಹಾರಕ್ಕೆ ಬಂದ ವಿಜಯಲಕ್ಷ್ಮಿ ಅವರು ಅರ್ಧ ಗಂಟೆ ಗಂಡನನ್ನು ಭೇಟಿ ಮಾಡಿ ತೆರಳಿದ್ದಾರೆ. ಅದಾದ ನಂತರ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ.

ನಿಮ್ಮ ಅಣ್ಣ ಜೈಲಿಂದ ಹೊರಗಡೆ ಬಂದೇ ಬರುತ್ತಾರೆ. ಅಳಬೇಡಿ ಎಂದು ದರ್ಶನ್ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದಾರೆ. ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ನಂತರ ಅವರು ಅಭಿಮಾನಿಗಳ ಭೇಟಿ ಮಾಡಿದ್ದಾರೆ.

ಅಭಿಮಾನಿಗಳ ಭೇಟಿ ವೇಳೆ ಕಣ್ಣೀರಿಟ್ಟ ಅಭಿಮಾನಿಗಳಿಗೆ ದರ್ಶನ್ ಪತ್ನಿ ಸಾಂತ್ವನ ಮಾಡಿದ್ದಾರೆ. ಅಭಿಮಾನಿಗಳಿಗೆ ಧೈರ್ಯದ ಮಾತು ಹೇಳಿ ವಿಜಯಲಕ್ಷ್ಮಿ ಅವರು ಸ್ವತಃ ಭಾವುಕರಾದರರು.

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರಿಗೆ ಇನ್ನು ಒಂದು ವರ್ಷ ಬೇಲ್ ಸಿಗಲ್ಲ. ದರ್ಶನ್ ಗೆ ಬೇಲ್ ಸಿಗದ ಹಿನ್ನಲೆ ಆತಂಕದಲ್ಲಿ ಇರುವ ಫ್ಯಾನ್ಸ್ ಅವರು ಆದಷ್ಟು ಬೇಗ ಹೊರಗೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ವರದಿ: ಸತೀಶ್ ಕನಕಪುರ, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports