Last Updated:
ಕೃಷ್ಣನಗರಿ ಉಡುಪಿಯಲ್ಲಿ (Udupi) ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಸಂಭ್ರಮದಿಂದ ನಡೆಯುತ್ತಿದೆ. ಈ ನಡುವೆ ತಮಿಳುನಾಡು ಸಿಎಂ ವಿಜಯ್ (CM Vijay) ಉಡುಪಿಗೆ ಬಂದಿದ್ದಾರಾ ಎಂಬಂತೆ ಕಾಣಿಸುವ ವ್ಯಕ್ತಿಯೊಬ್ಬರ ವೇಷ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಕೃಷ್ಣನಗರಿ ಉಡುಪಿಯಲ್ಲಿ (Udupi) ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಸಂಭ್ರಮದಿಂದ ನಡೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಉಡುಪಿಗೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ಕೃಷ್ಣಮಠ, ರಥಬೀದಿ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದ್ದು, ವಿವಿಧ ವೇಷಭೂಷಣಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆಯುತ್ತಿವೆ. ಈ ನಡುವೆ ತಮಿಳುನಾಡು ಸಿಎಂ ವಿಜಯ್ (CM Vijay) ಉಡುಪಿಗೆ ಬಂದಿದ್ದಾರಾ ಎಂಬಂತೆ ಕಾಣಿಸುವ ವ್ಯಕ್ತಿಯೊಬ್ಬರ ವೇಷ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.














