Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಏನಿದು ಹೊಸ ಪ್ಲಾನ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

vijay


Last Updated:

Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಹುಟ್ಟುಹಬ್ಬದಂದೇ ವಿಜಯ್ ಹೊಸ ಚಾನಲ್ ಲಾಂಚ್! ಹೆಸರೇನಂತ ಗೊತ್ತಾ?

vijay
vijay

ಚೆನ್ನೈ (ತಮಿಳುನಾಡು): ತಮಿಳುನಾಡು (Tamil Nadu) ರಾಜಕೀಯಕ್ಕೂ ಮಾಧ್ಯಮ ಕ್ಷೇತ್ರಕ್ಕೂ ಒಂಥರಾ ಅವಿನಾಭಾವ ಸಂಬಂಧ. ಅದಕ್ಕೇನೆ ದ್ರಾವಿಡನಾಡಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದಂತಹ ಸ್ವಂತ ಚಾನೆಲ್​ಗಳನ್ನ ಹೊಂದಿವೆ. ಈ ಸಾಲಿಗೆ ತಮಿಳುನಾಡು ಹಾಲಿ ಸಿಎಂ ಹೊಸ ಸೇರ್ಪಡೆ! 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಭರ್ಜರಿ ಗೆಲುವು ಸಾಧಿಸಿದ ನಂತರ ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ (Tamizhaga Vetri Kazhagam) ಈಗ ಮಾಧ್ಯಮ ಕ್ಷೇತ್ರಕ್ಕೂ ಕಾಲಿಡುತ್ತಿದೆ.

ಹೌದು, ವರದಿಗಳ ಪ್ರಕಾರ, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಮುಂಬರುವ ಜೂನ್​ 22 ರಂದು “Vettri TV” ಎಂಬ ಹೆಸರಿನ ತನ್ನದೇ ಅಧಿಕೃತ ಸುದ್ದಿ ವಾಹಿನಿಯನ್ನ ಪ್ರಾರಂಭಿಸಲು ಸಜ್ಜಾಗಿದೆ. ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳು ಮತ್ತು ವಿಜಯ್ ಅವರ ರಾಜಕೀಯ ಸಂದೇಶಗಳನ್ನು ನೇರವಾಗಿ ಜನರಿಗೆ ತಲುಪಿಸುವುದು ಈ ಚಾನೆಲ್‌ನ ಮುಖ್ಯ ಉದ್ದೇಶವಾಗಿರಲಿದೆ.

ವೆಟ್ರಿ ಟಿವಿ ಹಿಂದಿನ ಯೋಜನೆ ಏನು?

ತಮಿಳಗ ವೆಟ್ರಿ ಕಳಗಂ ಅನ್ನು ವಿಜಯ್ 2024ರಲ್ಲಿ ಸ್ಥಾಪಿಸಿದರು. ಇದಾದ ನಂತರ ಕಳೆದ ತಿಂಗಳು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಈಗ ತನ್ನ ಧ್ವನಿಯನ್ನ ನೇರವಾಗಿ ಜನರಿಗೆ ತಲುಪಿಸಲು ಸ್ವಂತ ಮಾಧ್ಯಮ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟಿರುವ ವಿಜಯ್​ ವೆಟ್ರಿ ಎಂಬ ಮಾಧ್ಯಮವನ್ನ ಸ್ಥಾಪಿಸಿದ್ದಾರೆ ಎನ್ನಲಾಗಿದೆ.

ಜೂನ್ 22 ಯಾಕೆ ಲಾಂಚ್​?

ಏಷ್ಯಾನೆಟ್ ತಮಿಳು ವರದಿಯ ಪ್ರಕಾರ, ಜೂನ್ 22 ನಟ ವಿಜಯ್ ಅವರ ಹುಟ್ಟುಹಬ್ಬ. ಪ್ರತಿ ವರ್ಷ ಈ ದಿನವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಹುಟ್ಟುಹಬ್ಬದಂದೇ ಪಕ್ಷದ ವಾಹಿನಿಯನ್ನ ಪ್ರಾರಂಭಿಸ ಬೇಕು ಎನ್ನುವುದು ವಿಜಯ್​ ಆಸೆ. ಅದರಂತೆ, ಈ ದಿನದಂದು ದೊಡ್ಡ ಸಮಾವೇಶ ನಡೆಸಿ, ಅಂದೇ ಲೋಗೋ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದಾದ ನಂತರ ಜೂನ್ 30ರಿಂದ ಟೆಸ್ಟ್ ಪ್ರಸಾರ ಆರಂಭಿಸಿ, ಮುಂದೇ ಪೂರ್ಣ ಪ್ರಮಾಣದ 24×7 ಸುದ್ದಿ ಸೇವೆ ನೀಡುವ ಯೋಜನೆ ಇದೆ ಎಂದು ವರದಿಯಾಗಿದೆ.

ಮಕ್ಕಳ ಬ್ರೇಕ್ಫಾಸ್ಟ್ ವ್ಯವಸ್ಥೆ ವಿಸ್ತರಣೆ, ವಿದ್ಯಾರ್ಥಿಗಳು ಖುಷ್

ಸಮಾಜ ಕಲ್ಯಾಣ ಮತ್ತು ಮಹಿಳಾ ಹಕ್ಕುಗಳ ಇಲಾಖೆಯ ಯೋಜನೆಗಳು ಮತ್ತು ಚಟುವಟಿಕೆಗಳ ಕುರಿತು ಸಚಿವಾಲಯದಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ, ಸಮಾಜ ಕಲ್ಯಾಣ ಮತ್ತು ಮಹಿಳಾ ಹಕ್ಕುಗಳ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸಮಾಜ ಕಲ್ಯಾಣ ಇಲಾಖೆ, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು, ಮಕ್ಕಳ ಕಲ್ಯಾಣ ಮತ್ತು ವಿಶೇಷ ಸೇವೆಗಳ ಇಲಾಖೆಯ ಮೂಲಕ ಮಕ್ಕಳು, ಮಹಿಳೆಯರು, ಟ್ರಾನ್ಸ್ಜೆಂಡರ್‌ಗಳು ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾದ ಮನೆಗಳು, ವಿವಿಧ ಯೋಜನೆಗಳು, ಸಾಮಾಜಿಕ ಕಾನೂನುಗಳು, ಪೌಷ್ಟಿಕಾಂಶ ಕೇಂದ್ರಗಳು ಮತ್ತು ಮಕ್ಕಳ ಕೇಂದ್ರಗಳ ಚಟುವಟಿಕೆಗಳನ್ನು ವಿವರವಾಗಿ ವಿವರಿಸಲಾಯಿತು.

ಇದಲ್ಲದೆ, ಮಹಿಳೆಯರಿಗಾಗಿ ಒನ್ ಸ್ಟಾಪ್ ಸೆಂಟರ್, ದತ್ತು ಕೇಂದ್ರಗಳು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗಾಗಿ ಜಾರಿಗೊಳಿಸಲಾದ ಸಹಾಯವಾಣಿಗಳು, ಮಕ್ಕಳಿಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟ ಯೋಜನೆ ಮತ್ತು ಅಂಗನವಾಡಿ ಕೇಂದ್ರಗಳ ಚಟುವಟಿಕೆಗಳನ್ನು ವಿವರವಾಗಿ ವಿವರಿಸಲಾಯಿತು. ಜೊತೆಗೆ ಇಲಾಖೆಯಿಂದ ಜಾರಿಗೆ ತರಲಾದ ಯೋಜನೆಗಳನ್ನು ಮಕ್ಕಳು, ಮಹಿಳೆಯರು, ಟ್ರಾನ್ಸ್ಜೆಂಡರ್ ಮತ್ತು ಹಿರಿಯ ನಾಗರಿಕರಂತಹ ಸಂಬಂಧಿತ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಮತ್ತು ತ್ವರಿತವಾಗಿ ತಲುಪಿಸಬೇಕು ಎನ್ನಲಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ದೇಶ-ವಿದೇಶ/

Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್‌ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಏನಿದು ಹೊಸ ಪ್ಲಾನ್?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed