Last Updated:
ತಮಿಳು ನಟ ವಿಜಯ್ ಸೇತುಪತಿ ಸಣ್ಣ ಆಗಿದ್ದಾರೆ. ನಂಬೋಕೆ ಆಗೋದೇ ಇಲ್ಲ. ಅಷ್ಟು ಸ್ಲಿಮ್ ಆ್ಯಂಡ್ ಟ್ರಿಮ್ ಆಗಿದ್ದಾರೆ. ಈ ಲುಕ್ನ ಒಂದೇ ಒಂದು ಫೋಟೋದ ಇನ್ನಷ್ಟು ವಿವರ ಇಲ್ಲಿದೆ ಓದಿ.
ವಿಜಯ್ ಸೇತುಪತಿ (Vijay Sethupathi) ತುಂಬಾನೆ ಸಣ್ಣ ಆಗಿದ್ದಾರೆ. ಈ ಬದಲಾವಣೆಯ ಫೋಟೋ (Photo) ನೊಡಿದರೆ ಆಯಿತು. ನಿಮಗೆ ನಂಬೋಕೆ ಆಗೋದಿಲ್ಲ. ಆ ರೀತಿನೇ ವಿಜಯ್ ಸೇತುಪತಿ ಇಲ್ಲಿ ಕಾಣಿಸುತ್ತಿದ್ದಾರೆ. ಆದರೆ ಇದು ಒಂದೇ ದಿನಕ್ಕೆ ಆದ ಬದಲಾವಣೆ ಅಲ್ಲ ಬಿಡಿ. ಸ್ಲಮ್ ಡಾಗ್ ಚಿತ್ರದ (Slum Dog) ಪ್ರೆಸ್ ಮೀಟ್ ಅಲ್ಲಿ ವಿಜಯ್ (Vijay) ಈ ರೀತಿ ಇರಲಿಲ್ಲ. ದಪ್ಪಗೇ ಇದ್ದರು. ಆದರೆ, ಇವರಲ್ಲಿ ಒಂದು ಸಣ್ಣ ಬದಲಾವನೆ ಕಾಣ್ತಾನೇ ಇತ್ತು. ಅದೇನು ಅನ್ನೋದು ಇಲ್ಲಿದೆ ಓದಿ.
ವಿಜಯ್ ಸೇತುಪತಿ ಸಖತ್ ಸ್ಲಿಮ್.!
ನೀವು ಈ ಹಿಂದಿಗಿಂತಲೂ ಈಗ ಸಣ್ಣ ಆಗಿಯೇ ಕಾಣುತ್ತಿದ್ದೀರಾ. ಏನ್ ಇದರ ಗುಟ್ಟು ಅಂತಲೇ ಕೇಳಿದರು. ಇದಕ್ಕೆ ವಿಜಯ್ ಸೇತುಪತಿ ಆಶ್ಚರ್ಯದಿಂದಲೇ ಉತ್ತರ ಕೊಟ್ಟರು.
ನಾನು ಸಣ್ಣ ಆಗಲು ಏನೂ ಮಾಡ್ತಿಲ್ಲ. ಆದರೆ, ನಿತ್ಯವೂ ವರ್ಕೌಟ್ ಮಾಡುತ್ತೇನೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ ಅಂತಲೇ ಹೇಳಿದ್ದರು. ಈ ಸಣ್ಣ ಆಗುವ ವಿಚಾರದ ಪ್ರಶ್ನೆಯನ್ನ ವಿಜಯ್ ಅವರಿಗೆ ಕೇಳಿದಾಗ ಪಕ್ಕದಲ್ಲಿಯೇ ಇದ್ದ ಕನ್ನಡತಿ ರುಕ್ಮಿಣಿ ವಸಂತ್ ಸಿಕ್ಕಾಪಟ್ಟೆ ನಕ್ಕಿರೋದು ಇದೆ.
ವಿಜಯ್ ಸೇತುಪತಿ ಅವರ ಈ ಒಂದು ಲುಕ್ ಯಾವ ಚಿತ್ರಕ್ಕೆ ಅನ್ನುವ ಚರ್ಚೆ ಶುರು ಆಗಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿನೂ ಇಲ್ಲ.
ಈ ಫೋಟೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದೆ. ದಪ್ಪ ಇದ್ದ ವಿಜಯ್ ಸೇತುಪತಿ ನೋಡಿಯೇ ಅನೇಕರು ಆಡಿಕೊಂಡಿರೋದು ಇದೆ. ಅದೆಷ್ಟು ದಪ್ಪ ಇದ್ದಾರೆ ಅಂತ ಕಾಮೆಂಟ್ ಹೊಡೆದಿರೋದು ಇದೆ.
ಈ ಲುಕ್ ಯಾವ್ ಚಿತ್ರಕ್ಕೆ ಗೊತ್ತಾ?
ವಿಜಯ್ ಸೇತುಪತಿ ಯಾಕೆ ಸಣ್ಣ ಆದರು ಅನ್ನೋ ಕುತೂಹ ಜಾಸ್ತಿ ಆಗಿದೆ. ಇದರ ಬೆನ್ನಲ್ಲಿಯೇ ಇವರನ್ನ ಆಡಿಕೊಳ್ಳುತ್ತಿದ್ದ ಮಂದಿಗೆ ಹೀಗೆ ಉತ್ತರ ಕೊಟ್ಟಿದ್ದಾರೆ ಅನ್ನುವ ಮಾತುಗಳೂ ಕೇಳಿ ಬರ್ತಿವೆ.
ವಿಜಯ್ ಸೇತುಪತಿ ಕಾಲಿವುಡ್ನ ಬೇಡಿಕೆಯ ನಾಯಕ ನಟರೇ ಆಗಿದ್ದಾರೆ. ಇವರ ಸ್ಲಮ್ ಡಾಗ್ ಚಿತ್ರದಲ್ಲಿ ಕನ್ನಡ ನಾಯಕ ಮತ್ತು ನಿರ್ದೇಶಕ ದುನಿಯಾ ವಿಜಯ್ ಅಭಿನಯಿಸಿದ್ದಾರೆ. ವಿಲನ್ ಪಾತ್ರದಲ್ಲಿಯೆ ಕಾಣಿಸಿದ್ದಾರೆ. ಈ ಪಾತ್ರ ಹೇಗಿದೆ ಅನ್ನೋದನ್ನ ಚಿತ್ರದ ಟೀಸರ್ ಇತ್ತೀಚಿಗೆ ರಿವೀಲ್ ಮಾಡಿದೆ.
ದುನಿಯಾ ವಿಜಯ್ ಅವರ ಬಗ್ಗೆ ವಿಜಯ್ ಸೇತುಪತಿ ಮಾತನಾಡಿದ್ದರು. ದುನಿಯಾ ವಿಜಯ್ ಅವರ ಕೆಲಸವನ್ನು ಮೆಚ್ಚಿಕೊಂಡಿದ್ದರು.
ನಾಯಕ ನಟ ದುನಿಯಾ ವಿಜಯ್ ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಅದೇ ಒಂದು ಗ್ರೇಟ್ ವಿಚಾರ ಆಗಿದೆ. ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ಮೇಲಿನ ಗೌರವಕ್ಕೆ ಈ ಒಂದು ಪಾತ್ರವನ್ನ ದುನಿಯಾ ವಿಜಯ್ ಮಾಡಿದ್ದಾರೆ. ಆದರೆ, ಇವರು ನಮ್ಮ ಚಿತ್ರದಲ್ಲಿ ನಟಿಸಿರೋದಕ್ಕೆ ತುಂಬಾನೆ ಖುಷಿ ಆಗಿದೆ ಅಂತಲೇ ಹೇಳಿದ್ದರು ಅಂತಲೇ ಹೇಳಬಹುದು.
Bangalore [Bangalore],Bangalore,Karnataka














