Last Updated:
ತಮಿಳು ನಟ ವಿಜಯ್ ಸೇತುಪತಿ ಒಂದಷ್ಟು ಮಾತು ಹೇಳಿದ್ದಾರೆ. ಇದು ದುನಿಯಾ ವಿಜಯ್ ಅವರ ಕುರಿತೇ ಆಗಿದೆ. ಸೆಟ್ ಅಲ್ಲಿ ದುನಿಯಾ ವಿಜಯ್ ಹೇಗೆ ಇರ್ತಾ ಇದ್ದರು. ಇವರ ತಯಾರಿ ಹೇಗೆ ಇರ್ತಿತ್ತು. ಹೀಗೆ ಸುಮಾರು ಇಂಟ್ರಸ್ಟಿಂಗ್ ವಿಚಾರಗಳನ್ನ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ತಮಿಳು ಸಿನಿಮಾ (Tamil Movie) ಮಾಡಿದ್ದಾರೆ. ವಿಜಯ್ ವರ್ಸಸ್ ವಿಜಯ್ ಅನ್ನುವ ರೀತಿಯ ಪಾತ್ರ ಇದಾಗಿದೆ. ವಿಲನ್ ಪಾತ್ರದಿಂದಲೇ ನಟ ವಿಜಯ್ ಸೇತುಪತಿ (Vijay Sethupathi) ಎದುರು ವಿಜಯ್ ಅಬ್ಬರಿಸುತ್ತಿದ್ದಾರೆ. ಮೊನ್ನೆ ಟೀಸರ್ ರಿಲೀಸ್ ಆಗಿದೆ. ಇದು ವಿಜಯ್ ಪಾತ್ರದ ಅಬ್ಬರ ಏನು ಅಂತಲೇ ಹೇಳಿದೆ. ಆದರೆ, ಇದೇ ಚಿತ್ರದ ಇದೇ ಟೀಸರ್ ರಿಲೀಸ್ ಇವೆಂಟ್ (Teaser Release Event) ಅಲ್ಲಿ ನಾಯಕ ನಟ ವಿಜಯ್ ಸೇತುಪತಿ ಒಂದು ಮಾತು ಹೇಳಿದ್ದಾರೆ. ಅದು ದುನಿಯಾ ವಿಜಯ್ ಅವರ ಬಗೆಗಿನ ಮಾತಾಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ವಿಜಯ್ ಪ್ರತಿಭಾವಂತ ನಟ (ಚಿತ್ರ ಕೃಪೆ: ದುನಿಯಾ ವಿಜಯ್ ಇನ್ಸ್ಟಾಗ್ರಾಮ್)
ದುನಿಯಾ ವಿಜಯ್ ನಿಜಕ್ಕೂ ಒಳ್ಳೆ ವ್ಯಕ್ತಿನೇ ಬಿಡಿ. ಇವರು ತಮ್ಮ ಪಾತ್ರಕ್ಕೆ ಏನು ಬೇಕೋ ಎಲ್ಲ ತಯಾರಿ ಮಾಡಿಕೊಂಡು ಬರ್ತಾ ಇದ್ದರು. ಡೈರೆಕ್ಟರ್ ಹೇಳಿರೋದನ್ನ ಅಷ್ಟೆ ಶಿಸ್ತಿನಿಂದಲೇ ಮಾಡಿಕೊಂಡು ಬರ್ತಾ ಇದ್ದರು. ಇವರ ಜೊತೆಗೆ ನಟಿಸಿರೋದು ತುಂಬಾನೆ ಖುಷಿ ಆಗಿದೆ.
ದುನಿಯಾ ವಿಜಯ್ ಅವರ ಬಗ್ಗೆ ವಿಜಯ್ ಸೇತುಪತಿ ಟೀಸರ್ ರಿಲೀಸ್ ಇವೆಂಟ್ ಅಲ್ಲಿ ಮಾತನಾಡಿದ್ದಾರೆ. ಆದರೆ, ವಿಜಯ್ ಈ ಸಮಯದಲ್ಲಿ ಇಲ್ಲಿ ಹಾಜರು ಇರಲಿಲ್ಲ.
ಆದರೂ, ಆ ವಿಷಯವನ್ನ ಹೇಳಿಯೇ ವಿಜಯ್ ಸೇತುಪತಿ ಮಾತನಾಡಿದ್ದಾರೆ. ದುನಿಯಾ ವಿಜಯ್ ಅವರು ಇಲ್ಲಿ ಇಲ್ಲ. ಆದರೆ, ಅವರ ಜೊತೆಗೆ ನಟಿಸಿರೋದು ತುಂಬಾನೆ ಖುಷಿ ಆಗಿದೆ. ದುನಿಯಾ ಚಿತ್ರದಲ್ಲಿ ಅವರ ಕೆಲಸ ಹೇಗಿತ್ತು ಅನ್ನೋದು ಗೊತ್ತಿದೆ.
ದುನಿಯಾ ವಿಜಯ್ ತುಂಬಾ ಶಿಸ್ತಿನ ಕಲಾವಿದರಾಗಿದ್ದಾರೆ. ಅಷ್ಟೆ ಪ್ರತಿಭಾವಂತ ಕೂಡ ಆಗಿದ್ದಾರೆ. ಇವರ ಜೊತೆಗೆ ಕೆಲಸ ಮಾಡಿರೋದು ತುಂಬಾನೆ ಖುಷಿಕೊಟ್ಟಿದೆ.
ಇವರು ತುಂಬಾನೆ ಒಳ್ಳೆ ಮನುಷ್ಯ, ತುಂಬಾನೆ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ನಟಿಸಿದ್ದಕ್ಕೆ ತುಂಬಾನೆ ಖುಷಿ ಆಗಿದೆ. ಥ್ಯಾಂಕ್ಯೂ ದುನಿಯಾ ವಿಜಯ್ ಸರ್ ಅಂತಲೇ ವಿಜಯ್ ಸೇತುಪತಿ ಹೇಳಿದ್ದಾರೆ.
ವಿಜಯ್ ವಿಲನ್ ಅಂದಾಗಲೇ ಆಶ್ವರ್ಯ
(ಚಿತ್ರ ಕೃಪೆ: ವಿಜಯ್ ಸೇತುಪತಿ ಇನ್ಸ್ಟಾಗ್ರಾಮ್)
ಈ ಚಿತ್ರಕ್ಕೆ ಏನು ಹೆಸರು ಅನ್ನುವ ಪ್ರಶ್ನೆ ಇತ್ತು. ಸ್ಲಂ ಡಾಗ್ 33 ಟೆಂಪಲ್ ರೋಡ್ ಅಂತಲೇ ಇದಕ್ಕೆ ಹೆಸರಿಟ್ಟಿದ್ದಾರೆ. ಇದರ ಟೀಸರ್ ಮೊನ್ನೆ ರಿಲೀಸ್ ಆಗಿದೆ.
ಅಂಧನ ಪಾತ್ರದಲ್ಲಿ ವಿಜಯ್ ಸೇತುಪತಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೆ ಪಕ್ಕಾ ಆಗಿಯೇ ಆ್ಯಕ್ಷನ್ ಕೂಡ ಮಾಡಿದ್ದಾರೆ. ದುನಿಯಾ ವಿಜಯ್ ಇಲ್ಲಿ ಚಿತ್ರ-ವಿಚಿತ್ರವಾಗಿಯೇ ಕಾಡುವ ವಿಲನ್ ಆಗಿದ್ದಾರೆ. ಈ ಮೂಲಕ ಇಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಸ್ಲಂ ಡಾಗ್ ಚಿತ್ರವನ್ನ ಪೂರಿ ಜಗನ್ನಾಥ್ ಡೈರೆಕ್ಷನ್ ಮಾಡಿದ್ದಾರೆ. ನಿರ್ಮಾಣ ಕೂಡ ಇವರೇ ಮಾಡಿದ್ದಾರೆ. ನಟಿ ಚಾರ್ಮಿ ಕೌರ್ ಸಹ ಸಾಥ್ ಕೊಟ್ಟಿದ್ದಾರೆ.
ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸ್ಯಾಮ್ ಕೆ.ನಾಯ್ಡು ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ಚಿತ್ರದ ಔಟ್ಪುಟ್ ಕೂಡ ಚೆನ್ನಾಗಿದೆ ಅನ್ನುವ ಭಾವನೆ ಮೂಡಿಸಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













