Last Updated:
ಬೆಂಗಳೂರು ತರಕಾರಿ ಬೆಲೆ ಗಗನಕ್ಕೇರಿ, ನುಗ್ಗೆಕಾಯಿ 200, ಬೀನ್ಸ್ 140, ಬದನೆಕಾಯಿ 100, ಟೊಮೆಟೊ ಈರುಳ್ಳಿ ಮಾತ್ರ ಸ್ಥಿರ, ಮೊಟ್ಟೆ 8 ರೂ ತಲುಪಿ ಮಧ್ಯಮ ವರ್ಗದ ಬಜೆಟ್ ಹಾಳು.
ಬೆಂಗಳೂರು: ಸಿಲಿಕಾನ್ ಸಿಟಿಯ ಕಿಚನ್ ಬಜೆಟ್ ಇದೀಗ ಸಂಪೂರ್ಣವಾಗಿ ಬುಡಮೇಲಾಗಿದೆ. ಬೆಂಗಳೂರಿನ (Bengaluru) ಜನಪ್ರಿಯ ಕೆ.ಆರ್. ಮಾರ್ಕೆಟ್ ಸೇರಿದಂತೆ ನಗರದ ಮೂಲೆಮೂಲೆಗಳ ಮಾರುಕಟ್ಟೆಯಲ್ಲಿ (Market) ತರಕಾರಿಗಳ ಬೆಲೆ (Vegetable Price) ಕೇಳಿದರೆ, ನಿಮ್ಮ ಕಣ್ಣುಗಳು ಅಕ್ಷರಶಃ ಅಗಲವಾಗುವುದು ಗ್ಯಾರಂಟಿ. ರಾಜ್ಯದ ಅನಾವೃಷ್ಟಿ ಮತ್ತು ನೆರೆಯ ರಾಜ್ಯಗಳ ಹವಾಮಾನ (Weather) ವೈಪರೀತ್ಯದ ಹೊಡೆತ ನೇರವಾಗಿ ನಮ್ಮ ಅಡುಗೆಮನೆಯ ಮೇಲೆ ಬಿದ್ದಿದೆ.
ಈ ಬೆಲೆ ಏರಿಕೆಯಿಂದ ಕೇವಲ ಗ್ರಾಹಕರು ಮಾತ್ರವಲ್ಲ, ವರ್ತಕರೂ ಕಂಗಾಲಾಗಿದ್ದಾರೆ. ಮೊದಲು ಕೆಜಿಗಟ್ಟಲೆ ಕೊಳ್ಳುತ್ತಿದ್ದ ಗ್ರಾಹಕರು, ಈಗ ಕಾಲು ಕೆಜಿಗೆ ಸೀಮಿತವಾಗಿದ್ದಾರೆ, ಎಂದು ವ್ಯಾಪಾರಿ ಸೆಲ್ವಿ ಅಳಲು ತೋಡಿಕೊಳ್ಳುತ್ತಾರೆ. ತರಕಾರಿ ಮಾರಾಟವಿಲ್ಲದೆ ವರ್ತಕರು ತತ್ತರಿಸುತ್ತಿದ್ದರೆ, ಜನಸಾಮಾನ್ಯರು ಇವತ್ತು ಅಡುಗೆಯಲ್ಲಿ ಏನಪ್ಪಾ ಮಾಡೋದು? ಎಂಬ ಚಿಂತೆಯಲ್ಲಿದ್ದಾರೆ. ಹವಾಮಾನ ವೈಪರೀತ್ಯದ ಈ ಆಟದಿಂದ ಪಾರಾಗುವ ದಾರಿಯೇ ಕಾಣದಂತಾಗಿದೆ.ಒಟ್ಟಿನಲ್ಲಿ, ಬಿಸಿಲಿನ ಝಳದ ಜೊತೆಗೆ ತರಕಾರಿಗಳ ಬೆಲೆಯ ಝಳವೂ ಬೆಂಗಳೂರಿಗರನ್ನು ಸುಡುತ್ತಿದೆ.
Bangalore [Bangalore],Bangalore,Karnataka













