Last Updated:
ಜುಲೈ 2026 ರಲ್ಲಿ ಇಂಗ್ಲೆಂಡ್ ಸರಣಿಯ ಮಧ್ಯದಲ್ಲಿ ಮರುಕಳಿಸಿದ್ದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವರುಣ್ ದೆಹಲಿಯಲ್ಲಿ ಅಫ್ಘಾನ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. ಆದರೆ ಕೇವಲ ಒಂದೇ ಪಂದ್ಯಕ್ಕೆ ಮತ್ತೆ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಈ ಟಿ20 ಸರಣಿ ಮಾತ್ರವಲ್ಲದೆ ಅಲ್ಲದೆ, ಮುಂಬರುವ ಏಷ್ಯನ್ ಗೇಮ್ಸ್ನಿಂದಲೂ ಹೊರಬೀಳುವ ಭೀತಿಯನ್ನ ಹುಟ್ಟುಹಾಕಿದೆ.
ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ತಂಡಕ್ಕೆ (Team India) ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಅಫ್ಘಾನಿಸ್ತಾನ ವಿರುದ್ಧ ಕೇವಲ ಒಂದು ಪಂದ್ಯವನ್ನಾಡಿದ ಬೆನ್ನಲ್ಲೇ ವರುಣ್ ಚಕ್ರವರ್ತಿ (Varun Chakravarthy) ಗಾಯಗೊಂಡು ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಈ ಸರಣಿಯ ಎರಡನೇ ಪಂದ್ಯವು ಸೆಪ್ಟೆಂಬರ್ 15ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲೇ ನಡೆಯಲಿದೆ. ಜುಲೈ 2026 ರಲ್ಲಿ ಇಂಗ್ಲೆಂಡ್ ಸರಣಿಯ ಮಧ್ಯದಲ್ಲಿ ಮರುಕಳಿಸಿದ್ದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವರುಣ್ ದೆಹಲಿಯಲ್ಲಿ ಅಫ್ಘಾನ್ ವಿರುದ್ಧ ಮೊದಲ ಪಂದ್ಯವನ್ನಾಡಿದ್ದರು. ಆದರೆ ಕೇವಲ ಒಂದೇ ಪಂದ್ಯಕ್ಕೆ ಮತ್ತೆ ಗಾಯಗೊಂಡಿದ್ದಾರೆ. ಅವರ ಪರಿಸ್ಥಿತಿ ನೋಡಿದರೆ ಈ ಟಿ20 ಸರಣಿ ಮಾತ್ರವಲ್ಲದೆ, ಮುಂಬರುವ ಏಷ್ಯನ್ ಗೇಮ್ಸ್ನಿಂದಲೂ ಹೊರಬೀಳುವ ಭೀತಿಯನ್ನು ಹುಟ್ಟುಹಾಕಿದೆ.














