Vaibhav Sooryavanshi: ವೈಭವ್ ಸೂರ್ಯವಂಶಿ ಪದಾರ್ಪಣೆ ವಿಳಂಬ! ಟೀಕೆಗಳ ನಂತರ ಮೌನ ಮುರಿದ ಬಿಸಿಸಿಐ! | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:


ಟೀಮ್ ಇಂಡಿಯಾ ಮ್ಯಾನೇಜ್​​ಮೆಂಟ್ ತಂಡದಲ್ಲಿರುವ ಹಿರಿಯ ಆಟಗಾರರಿಗೆ ಆದ್ಯತೆ ನೀಡುತ್ತಿದೆ. ಪರಿಣಾಮವಾಗಿ ವೈಭವ್ ಅವರನ್ನು ಬೆಂಚ್‌ನಲ್ಲಿ ಕಾಯಿಸುತ್ತಿದೆ. ಆದರೆ ವೈಭವ್ ಸೂರ್ಯವಂಶಿ ಪದಾರ್ಪಣೆ ವಿಷಯವು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಚರ್ಚೆ ವಿಷಯವಾಗಿದೆ.

 ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಟೀಮ್ ಇಂಡಿಯಾದ ಹದಿಹರೆಯದ ಸೆನ್ಸೇಶನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಅಂತರರಾಷ್ಟ್ರೀಯ ಪದಾರ್ಪಣೆಗಾಗಿ ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾಯುತ್ತಿದೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ (India vs England) ಈ ಸ್ಫೋಟಕ 15 ವರ್ಷದ ಬ್ಯಾಟ್ಸ್‌ಮನ್ ಬಗ್ಗೆ ಕ್ರಿಕೆಟ್ ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಗವಾಸ್ಕರ್, ರವಿಶಾಸ್ತ್ರಿ ಮತ್ತು ಎಬಿ ಡಿವಿಲಿಯರ್ಸ್‌ರಂತಹ ದಂತಕಥೆಗಳು ಅವರನ್ನು ಆದಷ್ಟು ಬೇಗ ವೈಭವ್​​ ಪ್ಲೇಯಿಂಗ್​ ಇಲೆವೆನ್​​​ನಲ್ಲಿ ಸೇರಿಸಬೇಕೆಂದು ಒತ್ತಾಯಿಸುತ್ತಿದ್ದರೆ, ಮಾಜಿ ಆಟಗಾರರಾದ ಅಶ್ವಿನ್, ಸಬಾ ಕರೀಮ್ ಮತ್ತು ಚೇತೇಶ್ವರ ಪೂಜಾರ ಅವರು ಅವರನ್ನು ಬೆಂಚ್‌ನಲ್ಲಿ ಇರಿಸಿ, ಸಂಜು ಸ್ಯಾಮ್ಸನ್​ ಹಾಗೂ ಅಭಿಷೇಕ್​​ ಶರ್ಮಾರನ್ನ ಮುಂದುವರಿಸಬೇಕೆಂದು ಹೇಳುತ್ತಿದ್ದಾರೆ.

ಟೀಮ್ ಇಂಡಿಯಾ ಮ್ಯಾನೇಜ್​​ಮೆಂಟ್ ತಂಡದಲ್ಲಿರುವ ಹಿರಿಯ ಆಟಗಾರರಿಗೆ ಆದ್ಯತೆ ನೀಡುತ್ತಿದೆ. ಪರಿಣಾಮವಾಗಿ ವೈಭವ್ ಅವರನ್ನು ಬೆಂಚ್‌ನಲ್ಲಿ ಕಾಯಿಸುತ್ತಿದೆ. ಆದರೆ ವೈಭವ್ ಸೂರ್ಯವಂಶಿ ಪದಾರ್ಪಣೆ ವಿಷಯವು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಚರ್ಚೆಯ ವಿಷಯವಾಗಿದೆ. ಸತತ ಮೂರು ಪಂದ್ಯಗಳಿಗೆ ಅವರನ್ನು ಬೆಂಚ್‌ನಲ್ಲಿ ಇರಿಸಲಾಗಿರುವುದರಿಂದ, ಅಭಿಮಾನಿಗಳು ಆಸಕ್ತಿ ಮತ್ತು ಅಸಹನೆಯನ್ನ ತೋರುತ್ತಿದ್ದಾರೆ.

ತಂಡದ ಆಡಳಿತ ಮಂಡಳಿಗೆ ಬಿಸಿಸಿಐ ಫುಲ್ ಸಪೋರ್ಟ್

ವೈಭವ್ ಸೂರ್ಯವಂಶಿ ಪದಾರ್ಪಣೆ ವಿಳಂಬಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ತಂಡದ ಆಡಳಿತ ಮಂಡಳಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವೈಭವ್ ಅವರನ್ನು ಅವರ ಪ್ರತಿಭೆಯ ಆಧಾರದ ಮೇಲೆ ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ, ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳುವ ನಿರ್ಧಾರವು ಸಂಪೂರ್ಣವಾಗಿ ತಂಡದ ಆಡಳಿತ ಮಂಡಳಿಯ ಮೇಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಆಡಳಿತ ಮಂಡಳಿಯ ಮೇಲೆ ನಂಬಿಕೆ ಇಡಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅವರು ಸರಿಯಾದ ಸಮಯ ಬಂದಾಗ ಮಾತ್ರ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ಗೆ ಅಂತರರಾಷ್ಟ್ರೀಯ ಪದಾರ್ಪಣೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ವಿಶ್ವಕಪ್ ವಿಜೇತರಿಗೆ ಬೆಂಬಲ

ತಂಡವು ತನ್ನ ಬಲಿಷ್ಠ ಸಂಯೋಜನೆಯನ್ನ ಅಡ್ಡಿಪಡಿಸಲು ಹಿಂಜರಿಯುತ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮತ್ತು ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಯಶಸ್ಸನ್ನು ಸಾಧಿಸಿದ ಅದೇ ಸಂಯೋಜನೆಯನ್ನು ಕಾಪಾಡಿಕೊಳ್ಳುವ ದೃಢಸಂಕಲ್ಪವಿದೆ. ವೈಭವ್ ಅವರ ಪ್ರತಿಭೆಯ ಬಗ್ಗೆ ಯಾವುದೇ ಸಂದೇಹವಿಲ್ಲದಿದ್ದರೂ, ಹಿರಿಯ ಆಟಗಾರರನ್ನು ಬೆಂಬಲಿಸುವುದನ್ನು ಮುಂದುವರಿಸುವುದು ಮುಖ್ಯ ಎಂದು ತಂಡದ ಆಡಳಿತ ಮಂಡಳಿ ಭಾವಿಸುತ್ತದೆ.

ಸಹಾಯಕ ಕೋಚ್ ರಯಾನ್ ಟೆನ್ ಡೋಶಾಟ್ ಕೂಡ ವೈಭವ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಸಂಜು ಸ್ಯಾಮ್ಸನ್‌ರಂತಹ ಅನುಭವಿ ಆಟಗಾರರು ತಂಡಕ್ಕೆ ನೀಡಿರುವ ಕೊಡುಗೆಯನ್ನ ನೆನಪಿಸಿದ್ದಾರೆ. ವಿಶ್ವಕಪ್ ಗೆದ್ದ ಆಟಗಾರರಿಗೆ ಧೈರ್ಯ ತುಂಬುವುದು ಅತ್ಯಗತ್ಯ ಎಂದು ಹೊಸ ಟಿ20 ನಾಯಕ ಶ್ರೇಯಸ್ ಅಯ್ಯರ್ ಕೂಡ ಅಭಿಪ್ರಾಯಪಟ್ಟಿದ್ದಾರೆ.

ಗೌತಮ್ ಗಂಭೀರ್ ಸ್ಪಷ್ಟನೆ

ಭಾರತಕ್ಕೆ 2026ರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಟ್ಟ ಗೆಲುವಿನ ಸಂಯೋಜನೆಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲು ಬಯಸುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ. ವೈಭವ್ ಅತ್ಯಂತ ಪ್ರತಿಭಾನ್ವಿತ ಎಂದು ಮ್ಯಾನೇಜ್‌ಮೆಂಟ್ ನಂಬುತ್ತದೆ, ಆದರೆ ಅವರ ಸರದಿಗಾಗಿ ಕಾಯಬೇಕು. ಆದರೆ, ಈ ಹೇಳಿಕೆಯು ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರ ವಿರುದ್ಧ ತೀವ್ರ ಟೀಕೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed