Vaibhav Sooryavanshi: ವೈಭವ್ ಜೊತೆ ಜಗಳ ಮಾಡಿದ ಆಟಗಾರರಿಗೆ ಶಾಕ್​ ಕೊಟ್ಟ ಮ್ಯಾಚ್ ರೆಫ್ರಿ! ಸೀನಿಯರ್ ಆಟಗಾರರಿಂದಲೂ ವಿಷಾದ | ಕ್ರೀಡಾ ಸುದ್ದಿ | ACTPnews

ಹಾಲಂಬಗೆ


Last Updated:

ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಗೆ ನಡುವಿನ ಜಗಳ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಮೈದಾನದಲ್ಲಿ ಇಬ್ಬರು ಆಟಗಾರರ ನಡುವಿನ ತೀವ್ರ ವಾಗ್ವಾದದ ಬಗ್ಗೆ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಕಠಿಣ ಕ್ರಮ ಕೈಗೊಂಡಿದ್ದಾರೆ.

ಹಾಲಂಬಗೆ
ಹಾಲಂಬಗೆ

ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಪಂದ್ಯದ ವೇಳೆ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಗೆ ನಡುವಿನ ಜಗಳ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ಮೈದಾನದಲ್ಲಿ ಇಬ್ಬರು ಆಟಗಾರರ ನಡುವಿನ ತೀವ್ರ ವಾಗ್ವಾದದ ಬಗ್ಗೆ ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಕಠಿಣ ಕ್ರಮ ಕೈಗೊಂಡಿದ್ದಾರೆ. ವೈಭವ್ ಜೊತೆ ಜಗಳವಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಶ್ರೀಲಂಕಾದ ಆಟಗಾರ ವಿಶೇನ್ ಹಾಲಂಬಗೆಗೆ ರೆಫರಿ ಭಾರಿ ದಂಡ ವಿಧಿಸಲಾಗಿದೆ ಎಂದು ಕ್ರಿಕ್​ಬಜ್ ವರದಿ ಮಾಡಿದೆ. ಆದರೆ ಈ ಘಟನೆಯ ಸಮಯದಲ್ಲಿ ಕೋಪದಲ್ಲಿ ಪ್ರತಿಕ್ರಿಯಿಸಿದ ವೈಭವ್ ಸೂರ್ಯವಂಶಿ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಕೈ ಕೈ ಮಿಲಾಯಿಸಿದ ವೈಭವ್-ವಿಶೇನ್

ಜೂನ್ 15 ರಂದು ನಡೆದ ರೋಮಾಂಚಕ ಪಂದ್ಯವನ್ನು ಭಾರತ ಸೂಪರ್ ಓವರ್‌ನಲ್ಲಿ ಸೋತಿತು. ಸೋಲಿನ ನಂತರ, ಶ್ರೀಲಂಕಾದ ಆಟಗಾರ ವಿಶೇನ್ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಉದ್ದೇಶಪೂರ್ವಕವಾಗಿ ಕೆರಳಿಸಿದ್ದಾರೆ. ವೈಭವ್ ಪೆವಿಲಿಯನ್​​ನತ್ತಾ ತೆರಳುತ್ತಿದ್ದಾರೆ “ಪಂದ್ಯ ಮುಗಿದಿದೆ, ಈಗ ನೀನು ಮನೆಗೆ ಹೋಗು” ಎಂದು ಹೇಳಿ ಅವರನ್ನು ಕೆಣಕಿದ್ದಾರೆ. ಇದರಿಂದ ಕೋಪಗೊಂಡ ವೈಭವ್ ಶ್ರೀಲಂಕಾದ ಆಟಗಾರನ ಜೊತೆಗೆ ವಾಗ್ವಾದಕ್ಕಿಳಿದು ಆತನನ್ನ ತಳ್ಳಿದ್ದಾರೆ. ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಮೈದಾನದಲ್ಲಿ ಉದ್ವಿಗ್ನ ವಾತಾವರಣ ಆವರಿಸಿದೆ. ಶ್ರೀಲಂಕಾದ ಇತರ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದ್ದಾರೆ.

ಶ್ರೀಲಂಕಾದ ಹಿರಿಯ ಆಟಗಾರರ ವಿಷಾದ

ವರದಿಗಳ ಪ್ರಕಾರ, ವಿಶೇನ್ ಹಾಲಂಬಗೆ ಮೊದಲ ಪಂದ್ಯದಿಂದಲೂ ವೈಭವ್ ಸೂರ್ಯವಂಶಿ ಅವರ ಏಕಾಗ್ರತೆಯನ್ನು ಭಂಗಗೊಳಿಸುವ ಉದ್ದೇಶದಿಂದ ನಿರಂತರವಾಗಿ ಸ್ಲೆಡ್ಜಿಂಗ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಶ್ರೀಲಂಕಾ ‘ಎ’ ತಂಡದ ಕೆಲವು ಹಿರಿಯ ಆಟಗಾರರು ವಿಶೇನ್ ಅವರ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕೆಲವು ವರದಿಗಳಿಂದ ತಿಳಿದುಬಂದಿದೆ.

ಸೂರ್ಯವಂಶಿಗೆ ಕ್ಷಮೆಯಾಚನೆ

ಈ ಪಂದ್ಯದ ನಂತರ ಶ್ರೀಲಂಕಾದ ಡ್ರೆಸ್ಸಿಂಗ್ ಕೋಣೆಯಲ್ಲಿ ಈ ವಿಷಯದ ಬಗ್ಗೆ ದೀರ್ಘವಾಗಿ ಚರ್ಚಿಸಲಾಗಿದೆ. ಆಟದ ಉತ್ಸಾಹವನ್ನು ಎತ್ತಿಹಿಡಿದು, ಶ್ರೀಲಂಕಾದ ಕೆಲವು ಹಿರಿಯ ಆಟಗಾರರು ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ ಎಂದು ಕ್ರಿಕ್​​ಬಜ್​ ವರದಿ ಮಾಡಿದೆ.

ಭಾರತೀಯ ತಂಡಕ್ಕೆ ಔಪಚಾರಿಕ ಕ್ಷಮೆಯಾಚಿಸಬೇಕೆ ಅಥವಾ ಬೇಡವೇ ಎಂಬುದನ್ನು ಸಹ ಅವರು ಪರಿಗಣಿಸುತ್ತಿದ್ದಾರೆ. ವೈಭವ್ ಸೂರ್ಯವಂಶಿ ವಿರುದ್ಧ ಯಾವುದೇ ನಿಷೇಧ ಅಥವಾ ಶಿಸ್ತು ಕ್ರಮದ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಆದರೆ, ಯುವ ಭಾರತೀಯ ಆಟಗಾರನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದ ಶ್ರೀಲಂಕಾದ ಆಟಗಾರನಿಗೆ ರೆಫರಿ ಕಠಿಣ ಛೀಮಾರಿ ಹಾಕಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed