Vaibhav Sooryavanshi: ವೈಭವ್ ಸೂರ್ಯವಂಶಿಯನ್ನ ಈಗಲೇ ಟೆಸ್ಟ್​​ ತಂಡಕ್ಕೆ ಆಯ್ಕೆಮಾಡಬಾರದು! ಕಾರಣಸಹಿತ ವಿವರಿಸಿದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:


ಐಪಿಎಲ್ 2026 ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಹೊಂದಿರುವವರಾಗಿ ಹೊರಹೊಮ್ಮಿದ ನಂತರ ವೈಭವ್ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನ ಚರ್ಚೆಯಾಗುತ್ತಿದ್ದಾರೆ. ಹಲವು ಲೆಜೆಂಡ್​ಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಪ್ರದರ್ಶನದ ನಂತರ, ಅವರು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು.

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ ಅಥವಾ ಟಿ20 ಪಂದ್ಯಗಳಲ್ಲಿ ತಾವು ಏನೆಂದು ಸಾಬೀತುಪಡಿಸಿದ್ದಾರೆ. ಆದರೆ ಅವರನ್ನ ಶೀಘ್ರವೇ ಏಕದಿನ (ODI) ಮತ್ತು ಟೆಸ್ಟ್ ಕ್ರಿಕೆಟ್​​​ನಲ್ಲಿ (Test Cricket) ಆಡಿಸಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಅಜಿಂಕ್ಯ ರಹಾನೆ (Ajinkya Rahane) ಕ್ರಿಕೆಟ್ ಪಂಡಿತರಿಗೆ ವೈಭವ್ ಸೂರ್ಯವಂಶಿ ಮೇಲೆ ಒತ್ತಡ ಹೇರಬೇಡಿ ಎಂದು ಸಲಹೆ ನೀಡಿದ್ದಾರೆ. ಯುವ ಆಟಗಾರ ಈಗಷ್ಟೇ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾನೆ, ಅವನಿಗೆ ಸ್ವಲ್ಪ ಸಮಯ ನೀಡಬೇಕು. ಈ ಹಂತದಲ್ಲಿ ಅವರನ್ನು ಟೆಸ್ಟ್ ಕ್ರಿಕೆಟ್‌ಗೆ ಆತುರಪಡಿಸಬಾರದು ಎಂದು ಸಲಹೆ ನೀಡಿದ್ದಾರೆ.

ಟಿ20ಯಲ್ಲಿ ಸಾಮರ್ಥ್ಯ ಸಾಬೀತು

ಐಪಿಎಲ್ 2026 ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಹೊಂದಿರುವವರಾಗಿ ಹೊರಹೊಮ್ಮಿದ ನಂತರ ವೈಭವ್ ಕ್ರಿಕೆಟ್ ಜಗತ್ತಿನಲ್ಲಿ ಪ್ರತಿದಿನ ಚರ್ಚೆಯಾಗುತ್ತಿದ್ದಾರೆ. ಹಲವು ಲೆಜೆಂಡ್​ಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಪ್ರದರ್ಶನದ ನಂತರ, ಅವರು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಪಾದಾರ್ಪಣೆ ಮಾಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವದಾಖಲೆಯನ್ನ ತನ್ನದಾಗಿಸಿಕೊಂಡರು. ಆ ಸರಣಿಯಲ್ಲಿ ಅವರ ಪ್ರದರ್ಶನ ನಿರೀಕ್ಷಿತವಾಗಿರಲಿಲ್ಲ, ಆದರೂ ಜಿಂಬಾಬ್ವೆ ಪ್ರವಾಸದ ಸಮಯದಲ್ಲಿ 2 ಅರ್ಧಶತಕ ಸಿಡಿಸಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕೇವಲ 6 ಪಂದ್ಯಗಳನ್ನಾಡಿರುವ ಸೂರ್ಯವಂಶಿಯನ್ನ ಎಲ್ಲಾ ಸ್ವರೂಪದಲ್ಲಿ ಆದಷ್ಟು ಬೇಗ ಅವಕಾಶ ಕೊಡಬೇಕೆಂದು ಕೆಲವು ಮಾಜಿ ಕ್ರಿಕೆಟಿಗರು ಆಗ್ರಹಿಸುತ್ತಿದ್ದಾರೆ. ಆದರೆ ರಹಾನೆ ಅದಕ್ಕೆ ತದ್ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ.

ವೈಭವ್‌ಗೆ ಸ್ವಲ್ಪ ಸಮಯ ನೀಡಿ

ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಅಜಿಂಕ್ಯ ರಹಾನೆ, ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಭಾಗವಹಿಸಿ, ವೈಭವ್ ಸೂರ್ಯವಂಶಿ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ವೈಭವ್ ಅವರ ಟೆಸ್ಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದು ಆತುರದ ಕೆಲಸವಾಗುತ್ತದೆ. ಅನಗತ್ಯ ಒತ್ತಡ ಹೇರುವ ಬದಲಿಗೆ ಇನ್ನಷ್ಟು ಸಮಯ ನೀಡುವ ಅಗತ್ಯವನ್ನು ಒತ್ತಿ ಹೇಳಿದರು.

“ನನ್ನ ಮಾತುಗಳಿಂದ ವೈಭವ್ ಮೇಲೆ ಒತ್ತಡ ಹೇರಲು ನಾನು ಬಯಸುವುದಿಲ್ಲ. ಜನರು ಈಗಾಗಲೇ ಅವರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಅವರು ಇಲ್ಲಿಯವರೆಗೆ ಎರಡು ಐಪಿಎಲ್ ಋತುಗಳನ್ನು ಮಾತ್ರ ಆಡಿದ್ದಾರೆ. ಐಪಿಎಲ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣವಾಗಿ ವಿಭಿನ್ನವಾಗಿವೆ ಎಂದು ನಾನು ಅರಿತುಕೊಂಡಿದ್ದೇನೆ. ದೇಶವನ್ನು ಪ್ರತಿನಿಧಿಸುವಾಗ ಒತ್ತಡವು ಅಪಾರವಾಗಿರುತ್ತದೆ. ಐಪಿಎಲ್‌ನಲ್ಲಿ, 4 ಅಥವಾ 5 ಓವರ್‌ಗಳಲ್ಲಿ 70 ರನ್‌ಗಳನ್ನು ಬೆನ್ನಟ್ಟುವುದು ಸುಲಭವಾಗಬಹುದು, ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಾಗೆ ಮಾಡುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಆದ್ದರಿಂದ, ವೈಭವ್ ತನ್ನ ನೈಸರ್ಗಿಕ ಆಟವನ್ನು ಆಡಲಿ ಮತ್ತು ಅವರು ಬೆಳೆಯಲು ಅವಕಾಶ ನೀಡಬೇಕು” ಎಂದು ರಹಾನೆ ಹೇಳಿದ್ದಾರೆ.

ಹಿರಿಯ ಆಟಗಾರರನ್ನು ಸೇರಿಸಿಕೊಳ್ಳಬೇಕು

ಟೆಸ್ಟ್ ಕ್ರಿಕೆಟ್​​​​ನಲ್ಲಿ ಯುವ ಆಟಗಾರರಿಗಿಂತ ಹಿರಿಯ ಆಟಗಾರರಿಗೆ ಆದ್ಯತೆ ನೀಡಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲು ತಂಡದಲ್ಲಿ ಹಿರಿಯ ಆಟಗಾರರನ್ನು ಉಳಿಸಿಕೊಳ್ಳುವುದು ಅನಿವಾರ್ಯ. ಹಿರಿಯ ಆಟಗಾರರ ಒಬ್ಬರ ಹಿಂದೆ ಒಬ್ಬರ ಕಡಿಮೆ ಸಮಯದಲ್ಲಿ ನಿರ್ಗಮಿಸಿದ್ದರಿಂದ ಟೀಮ್ ಇಂಡಿಯಾ ಲಯ ಕಳೆದುಕೊಳ್ಳುವಂತೆ ಮಾಡಿದೆ ಎಂದು ರಹಾನೆ ತಿಳಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್ ಉಳಿಯಬೇಕು

ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಹೊಸ ಆಟಗಾರರು ಭಾರತೀಯ ಟೆಸ್ಟ್ ತಂಡವನ್ನು ಪ್ರವೇಶಿಸಿದ್ದಾರೆ. ಟೆಸ್ಟ್‌ಗಳಿಗೆ ಆದರ್ಶ ತಂಡದ ಸಂಯೋಜನೆಯು 7-8 ಹಿರಿಯ ಆಟಗಾರರು ಮತ್ತು ಮೂರು ಅಥವಾ ನಾಲ್ಕು ಯುವಕರನ್ನು ಒಳಗೊಂಡಿರಬೇಕು. ಆದರೆ ಪ್ರಸ್ತುತ ಭಾರತ ತಂಡವು ಹೊಸಬರಿಂದ ತುಂಬಿದೆ. ಬಹುತೇಕ ಎಲ್ಲಾ ಹಿರಿಯ ಆಟಗಾರರು ನಿವೃತ್ತರಾಗಿದ್ದಾರೆ. ಉಳಿದ ಹಿರಿಯ ಆಟಗಾರರನ್ನು ಗೌರವಿಸುವುದು ಅತ್ಯಗತ್ಯ. ಟೆಸ್ಟ್ ಕ್ರಿಕೆಟ್ ಉಳಿವಿನ ಬಗ್ಗೆ ನನಗೆ ಚಿಂತೆಯಾಗಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್ ಮುಂದುವರಿಯಬೇಕು” ಎಂದು ರಹಾನೆ ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed