UT Khader: ನಿಮ್ಮ ಆರೋಗ್ಯದ ಸಂಪೂರ್ಣ ವಿವರ ಒಂದೇ ಕ್ಲಿಕ್‌ನಲ್ಲಿ! ಹಳ್ಳಿ ಆಸ್ಪತ್ರೆಗೂ ರಾಜ್ಯದ ಟಾಪ್‌ ವೈದ್ಯರ ಚಿಕಿತ್ಸೆ; ಇದು ನಿಜಕ್ಕೂ ಆರೋಗ್ಯ ಕ್ರಾಂತಿ! | | ACTPnews

ಆರೋಗ್ಯ ಸೇವೆ ಕರ್ನಾಟಕ


Last Updated:

183 ತಾಲೂಕು ಆಸ್ಪತ್ರೆಗಳು ಮತ್ತು CHCಗಳಲ್ಲಿ ಇ-ಹೆಲ್ತ್, ಡಿಜಿಟಲ್ ಆರೋಗ್ಯ ದಾಖಲೆ, ಟೆಲಿ-ಐಸಿಯು ಹಾಗೂ ‘ಝೀರೋ ಬಿಲ್’ ವ್ಯವಸ್ಥೆ ಜಾರಿಯಾಗಲಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಆರೋಗ್ಯ ಸೇವೆ ಕರ್ನಾಟಕ
ಆರೋಗ್ಯ ಸೇವೆ ಕರ್ನಾಟಕ

ಮಂಗಳೂರು/ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮುಂದಿನ ದಿನಗಳಲ್ಲಿ ಸಂಪೂರ್ಣ ಹೊಸ ಅನುಭವ ಸಿಗುವ ಸಾಧ್ಯತೆ ಇದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಫೈಲ್ ಹಿಡಿದು ಓಡಾಡುವ ದಿನಗಳು ಕ್ರಮೇಣ ಅಂತ್ಯವಾಗಲಿದ್ದು, ವೈದ್ಯರು (Doctors) ಒಂದೇ ಕ್ಲಿಕ್‌ನಲ್ಲಿ ರೋಗಿಯ ಆರೋಗ್ಯ ಇತಿಹಾಸ, ಲ್ಯಾಬ್ ವರದಿ ಹಾಗೂ ಔಷಧಿಗಳ ವಿವರವನ್ನು ನೋಡಬಹುದಾದ ಡಿಜಿಟಲ್ ವ್ಯವಸ್ಥೆ (Digital Model) ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದು, ರಾಜ್ಯದ 183 ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು (CHC) ಡಿಜಿಟಲೀಕರಣಗೊಳಿಸುವ ಯೋಜನೆ ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.

ಇ-ಹೆಲ್ತ್ ವ್ಯವಸ್ಥೆ ರಾಜ್ಯದಾದ್ಯಂತ ವಿಸ್ತರಣೆ

ಪ್ರಸ್ತುತ ಪ್ರಾಯೋಗಿಕವಾಗಿ 40 ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿರುವ ಇ-ಹೆಲ್ತ್ ಸಾಫ್ಟ್‌ವೇರ್ ಅನ್ನು ಈಗ 183 ಆಸ್ಪತ್ರೆಗಳಿಗೆ ವಿಸ್ತರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಈ ಯೋಜನೆಯ ಭಾಗವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಿಗೆ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತಿದೆ. ನಾಲ್ಕು ಕಂಪನಿಗಳ ತಂತ್ರಾಂಶಗಳಲ್ಲಿ ಅತ್ಯುತ್ತಮ ಮಾದರಿಯನ್ನು ಮುಕ್ತ ಟೆಂಡರ್ ಮೂಲಕ ಆಯ್ಕೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

ಯಾವ ಆಸ್ಪತ್ರೆಗೆ ಹೋದರೂ ವೈದ್ಯರಿಗೆ ನಿಮ್ಮ ವೈದ್ಯಕೀಯ ಮಾಹಿತಿ ಲಭ್ಯ

ಡಿಜಿಟಲ್ ವ್ಯವಸ್ಥೆ ಜಾರಿಯಾದ ಬಳಿಕ ರೋಗಿಯ ವೈದ್ಯಕೀಯ ಇತಿಹಾಸ, ಲ್ಯಾಬ್ ವರದಿಗಳು, ಹಿಂದಿನ ಚಿಕಿತ್ಸೆಯ ವಿವರಗಳು ಮತ್ತು ನೀಡಲಾದ ಔಷಧಿಗಳ ಮಾಹಿತಿ ಒಂದೇ ವೇದಿಕೆಯಲ್ಲಿ ಲಭ್ಯವಾಗಲಿದೆ. ಇದರ ಪರಿಣಾಮವಾಗಿ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗೆ ರೋಗಿ ಭೇಟಿ ನೀಡಿದರೂ ವೈದ್ಯರು ಅಗತ್ಯ ಮಾಹಿತಿಯನ್ನು ತಕ್ಷಣವೇ ಪಡೆದು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಅನಗತ್ಯ ಪರೀಕ್ಷೆಗಳು ಕಡಿಮೆಯಾಗುವ ಜೊತೆಗೆ ಚಿಕಿತ್ಸೆಯ ವೇಗ ಮತ್ತು ಗುಣಮಟ್ಟವೂ ಹೆಚ್ಚುವ ನಿರೀಕ್ಷೆಯಿದೆ.

ಉಚಿತ ಚಿಕಿತ್ಸೆ ಬಳಿಕ ‘ಝೀರೋ ಬಿಲ್’ ನೀಡಲಾಗುತ್ತದೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆದು ಬಿಡುಗಡೆಯಾಗುವ ಪ್ರತಿಯೊಬ್ಬ ರೋಗಿಗೂ ಇನ್ನು ಮುಂದೆ ‘ಝೀರೋ ಬಿಲ್’ ನೀಡುವ ವ್ಯವಸ್ಥೆ ಜಾರಿಯಾಗಲಿದೆ. ಈ ಬಿಲ್‌ನಲ್ಲಿ ಸರ್ಕಾರ ಆ ರೋಗಿಯ ಚಿಕಿತ್ಸೆಗೆ ಎಷ್ಟು ವೆಚ್ಚ ಮಾಡಿದೆ ಎಂಬ ಮಾಹಿತಿ ದಾಖಲಾಗಿರುತ್ತದೆ. ಇದರಿಂದ ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆ ಹೆಚ್ಚುವ ಜೊತೆಗೆ ಸರ್ಕಾರ ನೀಡುತ್ತಿರುವ ಉಚಿತ ಚಿಕಿತ್ಸೆಯ ಮೌಲ್ಯ ಜನರಿಗೆ ಸ್ಪಷ್ಟವಾಗಲಿದೆ.
ವೈದ್ಯರ ಕೊರತೆಗೆ ಟೆಲಿ-ಐಸಿಯು ಪರಿಹಾರ

ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆಯನ್ನು ನಿವಾರಿಸಲು ಟೆಲಿ-ಐಸಿಯು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರ ಮೂಲಕ ಜಿಲ್ಲಾ ಅಥವಾ ದೊಡ್ಡ ಆಸ್ಪತ್ರೆಗಳ ತಜ್ಞ ವೈದ್ಯರು ದೂರದಿಂದಲೇ ಗಂಭೀರ ರೋಗಿಗಳ ಚಿಕಿತ್ಸೆಗೆ ಮಾರ್ಗದರ್ಶನ ನೀಡಲು ಸಾಧ್ಯವಾಗಲಿದೆ. ಜೊತೆಗೆ ನವಜಾತ ಶಿಶುಗಳ ತುರ್ತು ಆರೈಕೆ ಘಟಕ (NICU) ಹಾಗೂ ಮಕ್ಕಳ ಚಿಕಿತ್ಸಾ ಸೇವೆಗಳನ್ನು ತಾಲೂಕು ಮಟ್ಟದಲ್ಲೇ ಮತ್ತಷ್ಟು ಬಲಪಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಉಳ್ಳಾಲ ಮಾದರಿ’ ರಾಜ್ಯಾದ್ಯಂತ ವಿಸ್ತರಣೆ

ಅಲ್ಲೋಪತಿ ಚಿಕಿತ್ಸೆಯ ಜೊತೆಗೆ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ (AYUSH) ಸೇವೆಗಳನ್ನು ಒಂದೇ ಕ್ಯಾಂಪಸ್‌ನಲ್ಲಿ ಒದಗಿಸುವ ‘ಉಳ್ಳಾಲ ಮಾದರಿ’ಯನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲು ಸರ್ಕಾರ ಯೋಜಿಸಿದೆ. ಇದರ ಮೂಲಕ ರೋಗಿಗಳಿಗೆ ಒಂದೇ ಸ್ಥಳದಲ್ಲಿ ವಿವಿಧ ವೈದ್ಯಕೀಯ ಪದ್ಧತಿಗಳ ಸೇವೆ ಲಭ್ಯವಾಗುವಂತೆ ಮಾಡುವ ಉದ್ದೇಶವಿದೆ.

ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಚಿಂತನೆ

ಮಳೆಗಾಲ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಭಾಗವಾಗಿ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕುಡಿಯಲು ಬಿಸಿ ನೀರು ಕಡ್ಡಾಯವಾಗಿ ನೀಡುವ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಇದರ ಜೊತೆಗೆ ಆಹಾರದಲ್ಲಿ ಅಜಿನೊಮೋಟೊ ಹಾಗೂ ಅಪಾಯಕಾರಿ ಕೃತಕ ಬಣ್ಣಗಳ ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಆಹಾರ ಸುರಕ್ಷತೆ ಬಲಪಡಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅತ್ಯಾಧುನಿಕ ಆಹಾರ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ಕುರಿತೂ ಸರ್ಕಾರ ಚಿಂತನೆ ನಡೆಸುತ್ತಿದೆ.

ವೈದ್ಯಕೀಯ ಪ್ರವಾಸೋದ್ಯಮಕ್ಕೂ ಒತ್ತು

ಇದನ್ನೂ ಓದಿ: Job Alert: ಪಿಯುಸಿ ಪಾಸಾಗಿದ್ದೀರಾ? ನೀವು ಈ ಪರೀಕ್ಷೆ ಬರೆದರೆ ನಿಮಗೆ ಸಿಗಲಿದೆ 1.77 ಲಕ್ಷ ಸಂಬಳದ ಉದ್ಯೋಗ!

ಇತ್ತೀಚಿನ ಅಮೆರಿಕ ಪ್ರವಾಸದ ಅನುಭವ ಹಂಚಿಕೊಂಡ ಸಚಿವ ಯು.ಟಿ. ಖಾದರ್, ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಕಡಿಮೆ ವೆಚ್ಚದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ದೊರೆಯುತ್ತಿರುವುದರಿಂದ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು. ಡಿಜಿಟಲ್ ಆರೋಗ್ಯ ವ್ಯವಸ್ಥೆ, ಗುಣಮಟ್ಟದ ಚಿಕಿತ್ಸಾ ಸೇವೆಗಳು ಹಾಗೂ ಸುಧಾರಿತ ಮೂಲಸೌಕರ್ಯಗಳ ಮೂಲಕ ಕರ್ನಾಟಕವನ್ನು ಆರೋಗ್ಯ ಸೇವೆಯ ಪ್ರಮುಖ ತಾಣವನ್ನಾಗಿ ರೂಪಿಸುವ ದಿಸೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed