Last Updated:
Upendra-Niranjan Sudhindra: ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ನಿರಂಜನ್ ಸುಧೀಂದ್ರ ತೆರೆ ಹಂಚಿಕೊಳ್ಳುತ್ತಿದ್ದಾರೆ. ಫಸ್ಟ್ ಟೈಮ್ ಚಿಕ್ಕಪ್ಪ ಮತ್ತು ಮಗ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚಿಕ್ಕಪ್ಪ ಉಪೇಂದ್ರ (Upendra) ಮತ್ತು ಅಣ್ಣನ ಮಗ ನಿರಂಜನ್ (Niranjan) ತೆರೆ ಹಂಚಿಕೊಳ್ಳುತ್ತಿದ್ದಾರೆ. ನೆಕ್ಸ್ಟ್ ಲೆವೆಲ್ ಚಿತ್ರದಲ್ಲಿ (Next Level Movie) ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ದೊಡ್ಡ ಬಜೆಟ್ ಅಲ್ಲಿ ತಯಾರಾಗುತ್ತಿರೋ ಈ ಚಿತ್ರದಲ್ಲಿ ಕಾಟೇರ ಚಿತ್ರದ ನಾಯಕಿ ಆರಾಧನಾ (Aradhanaa) ಜೋಡಿ ಆಗಿದ್ದಾರೆ. ಇವರ ಈ ಚಿತ್ರದ ಹೊಸ ಮಾಹಿತಿ ಇದೀಗ ಹೊರ ಬಂದಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ನೆಕ್ಸ್ಟ್ಲೆವೆಲ್ ಚಿತ್ರದ ಹೆಸರು ಅನ್ನೋದು ಗೊತ್ತೇ ಇದೆ. ಈ ಚಿತ್ರದ ನಿರ್ಮಾಣವೂ ನೆಕ್ಸ್ಟ್ಲೆವೆಲ್ ಇದೆ. ಆದರೆ, ಇಲ್ಲಿವರೆಗೂ ಈ ಚಿತ್ರದ ನಾಯಕ ಉಪೇಂದ್ರ ಅಂತ ಇತ್ತು. ನಾಯಕಿ ಆರಾಧನಾ ಅಂತಲೇ ಸುದ್ದಿ ಇತ್ತು. ಇದೇ ಭಾರೀ ಸೌಂಡ್ ಮಾಡ್ತಾ ಇತ್ತು.

ಆದರೆ, ಇದೇ ಚಿತ್ರದಲ್ಲಿ ಈಗ ಉಪ್ಪಿ ಸಹೋದರನ ಮಗ ನಾಯಕ ನಟ ನಿರಂಜನ್ ಸುಧೀಂದ್ರ ಆಗಮಿಸಿದ್ದಾರೆ. ಈ ಮೂಲಕ ಫಸ್ಟ್ ಟೈಮ್ ಚಿಕ್ಕಪ್ಪ ಮತ್ತು ಮಗ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಚಿಕ್ಕಪ್ಪ ಮತ್ತು ಮಗನ ಜುಗಲ್ಬಂದಿ ಇರುತ್ತದೆ ಅನ್ನುವ ಸಣ್ಣ ಸೂಚನೆ ಕೂಡ ಸಿಕ್ಕಿದೆ.
ಈ ನೆಕ್ಸ್ಟ್ಲೆವೆಲ್ ಚಿತ್ರವನ್ನ ಅರವಿಂದ್ ಕೌಶಿಕ್ ಡೈರೆಕ್ಷನ್ ಮಾಡುತ್ತಿದ್ದಾರೆ. ತರುಣ್ ಶಿವಪ್ಪ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿ ಇದು ತಯಾರಾಗುತ್ತಿದೆ.
ಈ ಚಿತ್ರದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ಈಗ ನಿರಂಜನ್ ಸುಧೀಂದ್ರ ಆಗಮಿಸಿದ್ದಾರೆ. ಈ ವಿಷಯವನ್ನ ನಿರ್ಮಾಪಕ ತರುಣ್ ಸುಧೀರ್ ಅವರೇ ಅಧಿಕೃತವಾಗಿಯೇ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ.
ಕಾಟೇರ ಚಿತ್ರದ ನಾಯಕಿ ಆರಾಧನಾ ಈ ಚಿತ್ರದ ನಾಯಕಿ ಆಗಿದ್ದಾರೆ. ಕಾಟೇರ ಆದ್ಮೇಲೆ ಇವರು ಯಾವುದೇ ಚಿತ್ರವನ್ನ ಒಪ್ಪಿರಲಿಲ್ಲ. ಆದರೆ, ಉಪೇಂದ್ರ ಅವರ ಈ ಚಿತ್ರಕ್ಕೆ ಆರಾಧನಾ ನಾಯಕಿ ಆಗಿದ್ದಾರೆ.
ಈ ಚಿತ್ರಕ್ಕೆ ಬೇಕಿರೋ ತಯಾರಿನೂ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ಬಜೆಟ್ನ ಈ ಚಿತ್ರದಲ್ಲಿ ವಿಎಫ್ಎಕ್ಸ್ ಬಳಕೆನೂ ಜಾಸ್ತಿ ಇದೆ. ಇದೆಲ್ಲ ರೆಡಿ ಆದ್ಮೇಲೆ ಶೂಟಿಂಗ್ ಹೋಗ್ತೀವಿ ಅಂತ ನಿರ್ಮಾಪಕ ತರುಣ್ ಶಿವಪ್ಪ ನ್ಯೂಸ್-18 ಕನ್ನಡ ಡಿಜಿಟಲ್ಗೆ ಈ ಹಿಂದನೆ ತಿಳಿಸಿದ್ದರು.

ನಿರಂಜನ್ ಸುಧೀಂದ್ರ ಮೊದಲು ಬಳ್ಳಾರಿ ನಾಗ ಚಿತ್ರದಲ್ಲಿ ನಟಿಸಿದರು. ಇದರಲ್ಲಿ ಇವರು ಬಾಲ ನಟರೇ ಆಗಿದ್ದರು. ಇದಾದ್ಮೇಲೆ ಸೆಕೆಂಡ್ ಹಾಫ್ ಚಿತ್ರದಲ್ಲಿ ನಾಯಕರಾದರು. ನಮ್ಮ ಹುಡುಗರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸೀತಾ ಪಯಣ ಸಿನಿಮಾದಲ್ಲಿ ಇವರು ನಾಯಕರಾಗಿದ್ದಾರೆ. ಅರ್ಜುನ್ ಸರ್ಜಾ ನಿರ್ಮಾಣದ ಈ ಚಿತ್ರ ಇವರಿಗೆ ಒಳ್ಳೆ ಹೆಸರು ತಂದುಕೊಟ್ಟಿದೆ. ಸ್ಪಾರ್ಕ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಸೂಪರ್ ಸ್ಟಾರ್ ಅನ್ನೋ ಚಿತ್ರ ಅನೌನ್ಸ್ ಆಗಿದೆ.
ಅದು ಬಿಟ್ಟರೆ, ಇದೀಗ ನೆಕ್ಸ್ಟ್ಲೆವೆಲ್ ಚಿತ್ರ ಮಾಡುತ್ತಿದ್ದಾರೆ. ವಿಶೇಷವಾಗಿ ಚಿಕ್ಕಪ್ಪ ಉಪೇಂದ್ರ ಅವರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರಿಯಾಂಕಾ ಉಪೇಂದ್ರ ಅವರ ಜೊತೆಗೆ ಸೆಕೆಂಡ್ ಹಾಫ್ ಚಿತ್ರದಲ್ಲಿ ನಿರಂಜನ್ ಕೆಲಸ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













