Upendra: ‘ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ’ ಎಂದು ಹೇಳಿ ಉಪ್ಪಿ ಲವ್ ಮ್ಯಾರೇಜ್ ಆಗಿದ್ಯಾಕೆ? | | ACTPnews

Real Star Upendra A Movie Preethi Prema Dialogue Uppi Facts


ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೆಕಾಯಿ..

ಪ್ರೀತಿಯ ಬಗ್ಗೆ ಉಪೇಂದ್ರ ಸಖತ್ ಪಾಠ ಮಾಡಿದ್ದರು. “A” ಚಿತ್ರದಲ್ಲಿಯೇ ಅದನ್ನ ಹೇಳಿದ್ದರು. ಆದರೆ, ಈ ಚಿತ್ರವನ್ನ ನೋಡಿದ ಕೆಲವರು ತುಂಬಾನೆ ಇಷ್ಟಪಟ್ಟಿದ್ದರು.
ಅಪ್ಪ ಹೇಳಿದ ಮಾತು ಅರ್ಥ ಆಗಿಲ್ಲ…

(ಚಿತ್ರ ಕೃಪೆ: ರಾಪಿಡ್‌ ರಶ್ಮಿ ಪಾಡ್‌ಕಾಸ್ಟ್‌)

ಉಪೇಂದ್ರ ಹೇಳುವುದು ನಿಜ ಅಲ್ವೇ ಅಂತ ಕೇಳಿಕೊಂಡಿದ್ದರು. ಆದರೆ, ಉಪೇಂದ್ರ ಅವರು ಲವ್ ಮ್ಯಾರೇಜ್ ಆದ್ಮೇಲೆ ಎಲ್ಲರಿಗೂ ಶಾಕ್ ಆಗಿತ್ತು. ಏನಿದು ಹೀಗೆ ಅಂತಲೂ ಹೇಳಿದವರು ಇದ್ದಾರೆ.

ರಕ್ಷಿತ್ ಸಿನಿಮಾದಲ್ಲಿ ಡೈಲಾಗ್

ರಕ್ಷಿತ್ ಶೆಟ್ಟಿ ತಮ್ಮ ಚಿತ್ರದಲ್ಲಿ ಒಂದು ಡೈಲಾಗ್ ಹೇಳಿದ್ದರು. ಪ್ರೇಮ ಲೋಕ ಕಟ್ಟಿದ ರವಿಚಂದ್ರನ್ ಅರೇಂಜ್ ಮ್ಯಾರೇಜ್ ಆದರು. ಪ್ರೀತಿ ಪುಸ್ತಕದ ಬದನೆಕಾಯಿ ಅಂತ ಹೇಳಿದ ಉಪೇಂದ್ರ ಲವ್ ಮ್ಯಾರೇಜ್ ಆದ್ರು ಅನ್ನುವ ಡೈಲಾಗ್ ಅನ್ನೆ ಹೊಡೆದಿದ್ದರು.

ಆದರೆ, ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಶೋದಲ್ಲಿ ಫ್ಯಾನ್ಸ್ ಕೇಳಿದ ಪ್ರಶ್ನೆಯನ್ನೆ ರಶ್ಮಿ ಇಲ್ಲಿ ಕೇಳಿದ್ದಾರೆ. ಪ್ರೀತಿ ಪುಸ್ತಕದ ಬದನೆಕಾಯಿ ಅಂತ ಹೇಳಿದಿರಿ. ಆದರೆ, ನೀವು ಯಾಕೆ ಲವ್ ಮ್ಯಾರೇಜ್ ಆದ್ರಿ ಅಂತಲೇ ಆ ಪ್ರಶ್ನೆಯನ್ನ ಕೇಳ್ತಾರೆ. ಅದಕ್ಕೆ ಉಪ್ಪಿ, ಬಹುಶಃ ಪ್ರಶ್ನೆ ಕೇಳಿದವರು “A” ಚಿತ್ರವನ್ನ ಪೂರ್ತಿ ನೋಡಿಲ್ಲ ಅಂತಲೇ ಹೇಳಿ ಮಾತು ಮುಗಿಸ್ತಾರೆ.

ಅಪ್ಪ ಹೇಳಿದ ಮಾತು ಅರ್ಥ ಆಗಿಲ್ಲ…

ನಮ್ಮ ತಂದೆ ದೇವರನ್ನ ನಾವೇ ಸೃಷ್ಟಿ ಮಾಡಿರೋದು ಅಂತ ಹೇಳ್ತಾ ಇದ್ದರು. ಇನ್ನೂ ಒಮ್ಮೆ ದೇವರನ್ನ ಭಕ್ತಿ ಭಾವದಿಂದಲೂ ನೋಡ್ಬೇಕು. ಪೂಜಿಸಬೆಕು ಅಂತ ಹೇಳ್ತಿದ್ದರು.

ಈ ಒಂದು ವಿಷಯ ನನಗೆ ಅರ್ಥವೇ ಆಗ್ತಾ ಇರಲಿಲ್ಲ. ನಮ್ಮೊಳಗೆ ಇರೋನೆ ದೇವರು ಅಂತಲೂ ಹೇಳುತ್ತಿದ್ದರು. ಅದಕ್ಕೇನೆ ನಾನು ನನ್ನ ಚಿತ್ರದಲ್ಲಿ I am God ಅಂತಲೇ ಹೇಳಿದೆ ಅನ್ನೋದನ್ನು ಉಪೇಂದ್ರ ಇದೇ ಪಾಡ್‌ಕಾಸ್ಟ್ ಅಲ್ಲಿ ಹೇಳಿಕೊಂಡಿದ್ದಾರೆ.

Real Star Upendra A Movie Preethi Prema Dialogue Uppi Facts

ಈ ಪ್ರೀತಿ, ಈ ಪ್ರೇಮ ಪುಸ್ತಕದ ಬದನೆಕಾಯಿ

(ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)

ವಿಚಾರ ವಿನಿಮಯ ಆಗ್ಬೇಕು…

ನಮ್ಮ ದೇಶ ತುಂಬಾನೆ ವಿಶೇಷವಾಗಿದೆ. ಇಲ್ಲಿ ವಿಚಾರ ವಿನಿಮಯ ಆಗುತ್ತಿತ್ತು. ಬಸವಣ್ಣನವರು ಅನುಭವ ಮಂಟಪ ಮಾಡಿದ್ದರು. ಅಲ್ಲಿ ವಿಚಾರ ವಿನಿಮಯ ಆಗುತ್ತಿತ್ತು.

ವಿಚಾರಗಳು ವಿನಿಮಯ ಆದಾಗಲೇ ಅಭಿವೃದ್ಧಿ ಆಗುತ್ತದೆ. ಇದು ಆಗಬೇಕು ಅಂತಲೂ ಉಪೇಂದ್ರ ಇಲ್ಲಿ ಹೇಳಿಕೊಂಡಿದ್ದಾರೆ. ಉಪೇಂದ್ರ ಅವರ ಈ ಒಂದು ವಿಶೇಷ ಪಾಡ್‌ಕಾಸ್ಟ್ ಅಲ್ಲಿ ಓಂ ಚಿತ್ರದ ವಿಷಯವೂ ಬಂದು ಹೋಗಿದೆ.

ಓಂ ಚಿತ್ರದ ಓ ಗುಲಾಬಿಯೇ

ಓಂ ಚಿತ್ರದ ಕಥೆ ರೆಡಿ ಆಗಿತ್ತು. ರಾಜಕುಮಾರ್, ವರದಪ್ಪನವರು, ಪಾರ್ವತಮ್ಮ ರಾಜಕುಮಾರ್ ಅವರು ಹೀಗೆ ಎಲ್ಲರೂ ಈ ಕಥೆಯನ್ನ ಒಪ್ಪಿಕೊಂಡಿದ್ರು.

ಆದರೆ, ಉಪೇಂದ್ರ ಅವರು 30 ದಿನ ಸಮಯ ತೆಗೆದುಕೊಂಡರು. ಸ್ವಲ್ಪ ಇನ್ನೂ ಡೌಟ್ ಇದೆ ಅಂತ ಹೇಳಿದ್ದರು. ಕೆಲವು ದಿನಗಳಾದ್ಮೇಲೆ ವರಪ್ಪನವರು ಕೇಳಿದರು. ನಿಮಗೆ ಓ ಗುಲಾಬಿ ಹಾಡಿನ ಜಾಗದಲ್ಲಿಯೇ ಡೌಟ್ ಇದೆ ಅಲ್ವೇ? ಅಂತಲೇ ಕೇಳಿದರು. ಇದನ್ನ ಕೇಳಿ ಉಪ್ಪಿ ನಿಜಕ್ಕೂ ಶಾಕ್ ಆಗಿದ್ದರು.

ಒಂದು ಸೀನ್ ಹಾಕಿದರು

ಚಿತ್ರದಲ್ಲಿ ಈ ಹಾಡು ಬರುವ ಮುಂಚೇನೆ ಒಂದು ದೃಶ್ಯ ಇಟ್ಟರು. ಇದು ಕಥೆಯನ್ನ ಡ್ರಾಪ್ ಮಾಡಲು ಬಿಡಲಿಲ್ಲ. ಓ ಗುಲಾಬಿಯೇ ಹಾಡು ಆದ್ಮೇಲೂ ಕಥೆ ಜನರನ್ನ ಹಿಡಿದುಕೊಂಡಿತ್ತು. ಹೀಗೆ ಉಪೇಂದ್ರ ತಮ್ಮ ಚಿತ್ರ ಜೀವನದ ಸುಮಾರು ವಿಚಾರಗಳನ್ನ ಈ ಪಾಡ್‌ಕಾಸ್ಟ್ ಅಲ್ಲಿ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports