U Turn Movie: ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ರಸ್ತೆ ಮೇಲೆ ಮಲಗಿದ ಆ ಫೋಟೋ ಹಂಚಿಕೊಂಡ ಡೈರೆಕ್ಟರ್ ಪವನ್ ಕುಮಾರ್! | | ACTPnews

ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ಡೈರೆಕ್ಟರ್ ಹೇಳಿದ್ದೇನು?


Last Updated:

ಡೈರೆಕ್ಟರ್ ಪವನ್ ಕುಮಾರ್ ಯು ಟರ್ನ್ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. 10 ವರ್ಷದ ಹಿಂದೆ ಬಂದ ಈ ಚಿತ್ರವನ್ನ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ…

ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ಡೈರೆಕ್ಟರ್ ಹೇಳಿದ್ದೇನು?
ಯು ಟರ್ನ್ ಚಿತ್ರಕ್ಕೆ 10 ವರ್ಷ ಕಂಪ್ಲೀಟ್; ಡೈರೆಕ್ಟರ್ ಹೇಳಿದ್ದೇನು?

ಕನ್ನಡದ (Kannada) ವಿಶೇಷ ಡೈರೆಕ್ಟರ್ ಪವನ್ ಕುಮಾರ್ (Pawan Kumar) ತಮ್ಮ ಯುಟರ್ನ್ ಚಿತ್ರವನ್ನ (U Turn Movie) ನೆನಪಿಸಿಕೊಂಡಿದ್ದಾರೆ. ಲೂಸಿಯಾ ಮೂಲಕವೇ ಸ್ಯಾಂಡಲ್‌ವುಡ್‌ ಅಲ್ಲಿ ಹೊಸ ಅಲೆ ಎಬ್ಬಿಸಿದ್ದ ಪವನ್ ಕುಮಾರ್, ಯುಟರ್ನ್ ಚಿತ್ರದಿಂದಲೂ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಈ ಚಿತ್ರ 10 ವರ್ಷದ ಹಿಂದೆ ತೆರೆಗೆ ಬಂದಿತ್ತು. ಮೈಕ್ರೋ ಬಜೆಟ್ ಅಂದ್ರೆ 2.5 ಕೋಟಿ ಬಜೆಟ್ ಅಲ್ಲಿ ಈ ಸಿನಿಮಾ ರೆಡಿ ಆಗಿತ್ತು. ಯಶಸ್ವಿ ಕೂಡ ಆಗಿತ್ತು. ಈ ಚಿತ್ರದ ಕೆಲವು ಸ್ಪೆಷಲ್ ಫೋಟೊಗಳನ್ನು ಡೈರೆಕ್ಟರ್ ಪವನ್ ಕುಮಾರ್ (Pawan Kumar) ಇದೀಗ ಹಂಚಿಕೊಂಡಿದ್ದಾರೆ. ಈ ಮೂಲಕ ಆ ದಿನಗಳಿಗೂ ಜಾರಿದ್ದಾರೆ. ತಮಗೆ ಈಗ ಅನಿಸಿರೋದನ್ನು ಬರೆದುಕೊಂಡಿದ್ದಾರೆ. ಇದರ ಡಿಟೈಲ್ಸ್ ಇಲ್ಲಿದೆ ಓದಿ.

ರೀಮೇಕ್ ಆದ ಸಿನಿಮಾ

ಕನ್ನಡದ ಈ ಯು ಟರ್ನ್ ಚಿತ್ರದ ಕಾನ್ಸೆಪ್ಟ್ ವಿಶೇಷವಾಗಿದೆ. ಇಂತಹ ವಿಷಯ ಪವನ್ ಕುಮಾರ್ ಅವರಿಗೇನೆ ಹೊಳೆಯೋದು ಅನಿಸುತ್ತದೆ. ಆ ರೀತಿಯ ಈ ಚಿತ್ರ ಹಲವು ಭಾಷೆಯಲ್ಲಿ ಈ ಚಿತ್ರ ರೀಮೇಕ್ ಕೂಡ ಆಗಿದೆ.
Kannada U Turn Movie Complete 10 Years and Director Pawan Kumar Share Photos on Social Media

2.5 ಕೋಟಿ ಬಜೆಟ್ ಸಿನಿಮಾ

(ಚಿತ್ರ ಕೃಪೆ: ಪವನ್ ಕುಮಾರ್ ಇನ್‌ಸ್ಟಾಗ್ರಾಮ್)

ಈ ಚಿತ್ರ ಬಂದು ಈಗ 10 ವರ್ಷ ಆಗಿದೆ. ಮೇ-20,2016 ರಂದು ಇದು ರಿಲೀಸ್ ಆಗಿತ್ತು. ಈ ಲೆಕ್ಕದಂತೆ ಕನ್ನಡ ಈ ಚಿತ್ರ ಮೇ-20,2026 ಕ್ಕೆ 10 ವರ್ಷ ಪೂರ್ಣಗೊಳಿಸಿದೆ.

ವಿಶೇಷ ಫೋಟೋ ಶೇರ್

ಈ ಚಿತ್ರದ ಡೈರೆಕ್ಟರ್ ಪವನ್ ಕುಮಾರ್ ಕೆಲವು ಫೋಟೋ ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ರಾತ್ರಿ ರಸ್ತೆ ಮೇಲೆ ತಾವು ಮಲಗಿಕೊಂಡ ಫೋಟೋವನ್ನು ಇವರು ಹಂಚಿಕೊಂಡಿದ್ದಾರೆ.

ರಸ್ತೆ ಡಿವೈಡರ್ ಫೋಟೋಗಳು ಇಲ್ಲಿವೆ. ಆ ಡಿವೈಡರ್ ಅನ್ನ ಸರಿ ಮಾಡುವ ಫೋಟೋಗಳು ಇವೆ. ರಾಧಿಕಾ ನಾರಾಯಣ್, ಪವನ್ ಕುಮಾರ್, ರೋಜರ್ ನಾರಾಯಣ್, ಶ್ರದ್ಧಾ ಶ್ರೀನಾಥ್ ಇರೋ ಫೋಟೋಗಳು ಇಲ್ಲಿವೆ.

ಪವನ್ ಹೀಗೆ ಬರೆದ್ರು

ಪವನ್ ಕುಮಾರ್ ತಮ್ಮ ಯು ಟರ್ನ್ ಚಿತ್ರದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಆ ದಿನಗಳ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಹೀಗೆ ಬರೆದುಕೊಂಡಿದ್ದಾರೆ. “10 years ago we took this U Turn on this day with a Pan world release My gratitude to everyone who was involved in making this turn”.

Kannada U Turn Movie Complete 10 Years and Director Pawan Kumar Share Photos on Social Media

ವಿಶೇಷ ಫೋಟೋ ಶೇರ್

(ಚಿತ್ರ ಕೃಪೆ: ಪವನ್ ಕುಮಾರ್ ಇನ್‌ಸ್ಟಾಗ್ರಾಮ್)

ಈ ದಿನ 10 ವರ್ಷದ ಹಿಂದೆ ನಮ್ಮ ಚಿತ್ರವನ್ನ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ರಿಲೀಸ್ ಮಾಡಿದ್ದೇವೆ. ಈ ಒಂದು ಚಿತ್ರ ಆಗಲು ಸಾಥ್ ಕೊಟ್ಟಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು ಅಂತಲೇ ಪವನ್ ಕುಮಾರ್ ಬರೆದುಕೊಂಡಿದ್ದಾರೆ.

ಕಾಂಪ್ಲಿಮೆಂಟ್‌ಗಳ ಸುರಿಮಳೆ

ಪವನ್ ಕುಮಾರ್ ಅವರ ಈ ಒಂದು ಪೋಸ್ಟ್‌ಗೆ ಕಾಂಪ್ಲಿಮೆಂಟ್ಸ್ ಬಂದಿವೆ. ಬಹುತೇಕರು ನೀವು ಮತ್ತೆ ಡೈರೆಕ್ಷನ್ ಮಾಡೋದು ಯಾವಾಗ ಅಂತ ಕೇಳಿದ್ದಾರೆ. ನಾನು ನೋಡಿದ ಅತ್ಯದ್ಭುತ ಚಿತ್ರ ಯು ಟರ್ನ್ ಅಂತ ಹೇಳಿದವರೂ ಇದ್ದಾರೆ.

ಈ ಚಿತ್ರದ ಇತರ ವಿಚಾರಕ್ಕೆ ಬಂದ್ರೆ, ಇದರಲ್ಲಿ ರಾಧಿಕಾ ನಾರಾಯಣ್ ನಟಿಸಿದ್ದಾರೆ. ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ. ರೋಜರ್ ನಾರಾಯಣ್ ಕೂಡ ಅಭಿನಯಿಸಿದ್ದಾರೆ.

2.5 ಕೋಟಿ ಬಜೆಟ್ ಸಿನಿಮಾ

ಯು ಟರ್ನ್ ಚಿತ್ರವನ್ನ 2.5 ಕೋಟಿ ಬಜೆಟ್ ಅಲ್ಲಿಯೇ ನಿರ್ಮಾಣ ಮಾಡಲಾಗಿದೆ. ಈಗ ಈ ಬಜೆಟ್ ಅನ್ನ ಮೈಕ್ರೋ ಬಜೆಟ್ ಅಂತಲೇ ಹೇಳಬೇಕು. ಏನು ಇಲ್ಲ ಅಂದ್ರೂ ಇದೀಗ ಒಂದು ಚಿತ್ರ ಮಾಡೋಕೆ ನಾಲ್ಕರಿಂದ ಐದು ಕೋಟಿ ಬೇಕಾಗುತ್ತದೆ.

ಆದರೆ, 10 ವರ್ಷದ ಹಿಂದೆ ಈ ಚಿತ್ರ 2.5 ಕೋಟಿ ಬಜೆಟ್ ಅಲ್ಲಿ ರೆಡಿ ಆಗಿತ್ತು. ಯಶಸ್ವಿ ಕೂಡ ಆಗಿತ್ತು. ಈ ಯಶಸ್ವಿ ಚಿತ್ರದ ಆ ದಿನಗಳನ್ನ ಪವನ್ ಕುಮಾರ್ ಮತ್ತೆ ಮೆಲುಕು ಹಾಕಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports