Tulu Film: ಹೊಸ ತುಳು ಸಿನಿಮಾ ನೋಡಲು ರೆಡಿಯಾಗಿ, ಅಕ್ಟೋಬರ್ 7ಕ್ಕೆ ಬಿಡುಗಡೆ ಆಗಲಿದೆ ‘ಪಿಚ್ಚರ್’ ಧಮಾಕ! | | ACTPnews

ಪಿಚ್ಚರ್ ಕನ್ನಡ ತುಳು ಚಿತ್ರ


Last Updated:

ಗೋಲ್ಡನ್ ಸ್ಟಾರ್ ಗಣೇಶ್ ಅವರ ಗೋಲ್ಡನ್ ಮೂವೀಸ್ ನಿರ್ಮಿಸಿರುವ ‘ಪಿಚ್ಚರ್’ ಸಿನಿಮಾ ಅಕ್ಟೋಬರ್ 7 ರಂದು ತೆರೆಗೆ. ಇದು ಕನ್ನಡ ಮತ್ತು ತುಳು ಭಾಷೆಯಲ್ಲಿ ನಿರ್ಮಿಸಿದ ಮೊದಲ ಸಿನಿಮಾ.

ಪಿಚ್ಚರ್ ಕನ್ನಡ ತುಳು ಚಿತ್ರ
ಪಿಚ್ಚರ್ ಕನ್ನಡ ತುಳು ಚಿತ್ರ

ಮಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ಯಶಸ್ವಿ ನಿರ್ಮಾಪಕರಾಗಿ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ (Ganesh) ಅವರ ಗೋಲ್ಡನ್ ಮೂವೀಸ್ ಬ್ಯಾನರ್ ನಲ್ಲಿ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ ಬಹುನಿರೀಕ್ಷಿತ ‘ಪಿಚ್ಚರ್’ (Pitcher) ಸಿನಿಮಾ ಇದೇ ಅಕ್ಟೋಬರ್ 7 ರಂದು ತೆರೆಕಾಣಲಿದೆ. ಗೋಲ್ಡನ್ ಮೂವೀಸ್ ಸಂಸ್ಥೆಯು ಕನ್ನಡದ (Kannada) ಜೊತೆಗೆ ಇದೇ ಮೊದಲ ಬಾರಿಗೆ ತುಳು (Tulu) ಭಾಷೆಯಲ್ಲೂ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

‘ಪಿಚ್ಚರ್’ ಚಿತ್ರದ ತಾರಾಗಣ ಹಾಗೂ ವಿಶೇಷತೆಗಳು

ಸಂದೀಪ್ ಬೆದ್ರ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಸಂಪೂರ್ಣವಾಗಿ ಹಾಸ್ಯಭರಿತ ಕೌಟುಂಬಿಕ ಕಥಾನಕ ಹೊಂದಿದೆ. ತುಳು ರಂಗಭೂಮಿ ಹಾಗೂ ಸಿನಿಮಾರಂಗದ ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಚಿತ್ರದಲ್ಲಿ ಹೊಸ ಪ್ರತಿಭೆ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ಅಮೃತಾ ಸುಧಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ರೂಪ ವರ್ಕಾಡಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಮೊದಲ ಬಾರಿಗೆ ತುಳು ಸಿನಿಮಾ ಮಾಡುತ್ತಿರುವುದರಿಂದ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ಕಾಶ್ಮೀರದಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ಹಾಡು ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ತಿಳಿಸಿದ್ದಾರೆ.

ತಾಂತ್ರಿಕ ವರ್ಗದ ಬಲ

ಚಿತ್ರಕ್ಕೆ ನಿರ್ದೇಶಕ ಸಂದೀಪ್ ಬೆದ್ರ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ.ಎಸ್ ಅವರ ಛಾಯಾಗ್ರಹಣ, ರಾಜು ಆರ್ಯನ್ ಸಂಕಲನ, ಧನಂಜಯ್.ಬಿ – ಶ್ರೀರಾಜು ನೃತ್ಯ ನಿರ್ದೇಶನ, ರಾಧೇಶ್ – ಸಂತೋಷ್ ಪೂಜಾರಿ ಕಲಾ ನಿರ್ದೇಶನ ಹಾಗೂ ಗ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಹಾಸ್ಯ ಮತ್ತು ಮನರಂಜನೆಯ ಮಹಾಪೂರವನ್ನೇ ಹೊತ್ತು ತರುತ್ತಿರುವ ‘ಪಿಚ್ಚರ್’ ಸಿನಿಮಾವು ಕರಾವಳಿಯಾದ್ಯಂತ ಭಾರೀ ಸಂಚಲನ ಮೂಡಿಸುವುದು ಖಚಿತವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed