Trisha Krishnan: ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್, ಇದೇನಾ ಕಾರಣ? | | ACTPnews

ನಟಿ ತ್ರಿಶಾ (ಸಂಗ್ರಹ ಚಿತ್ರ)


Last Updated:

ತ್ರಿಶಾ ಕೃಷ್ಣನ್ ರಾಜಕೀಯ ಎಂಟ್ರಿ ರೂಮರ್ಸ್ ನಡುವೆ, ಕರುಪು ಹಿಟ್, ಆದರೆ ಸೂಪರ್ ಸ್ಟಾರ್ ಸಿನಿಮಾದ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

ನಟಿ ತ್ರಿಶಾ (ಸಂಗ್ರಹ ಚಿತ್ರ)
ನಟಿ ತ್ರಿಶಾ (ಸಂಗ್ರಹ ಚಿತ್ರ)

ತಮಿಳುನಾಡು ವಿಧಾನಸಭಾ ಚುನಾವಣೆ (Assembly Elections 2026) ಘೋಷಣೆಯಾದ ದಿನದಿಂದಲೂ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಭಾರೀ ಚರ್ಚೆಯಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಥಿಯೇಟರ್‌ಗಳಲ್ಲಿ (Back to Back Cinema) ಪ್ರೇಕ್ಷಕರನ್ನು ರಂಜಿಸುತ್ತಿರುವ ತ್ರಿಶಾ ಅವರ ಹೆಸರು ರಾಜಕೀಯದಲ್ಲೂ ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಪ್ರಮುಖವಾಗಿ ವಿಜಯ್ (CM Vijay) ಅವರು ಸಿಎಂ ಆದ ಬಳಿಕ ರಾಜಕೀಯ ರಂಗಕ್ಕೆ ಎಂಟ್ರಿ ಆಗೋದು ಖಚಿತ ಅಂತಲೇ ಹಲವು ರಾಜಕೀಯ ವಿಮರ್ಶಕರು (Tamil Nadu Politics) ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ತಮ್ಮದೇ ಫಾಲೋವರ್ಸ್ ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 44ರ ವಯಸ್ಸಿನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ನಟಿಸಿದ್ದ ಕರುಪು ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಸೂರ್ಯ ಹೀರೋ ಆಗಿ ನಟಿಸಿರುವ ಈ ಸಿನಿಮಾದ ಮೇ 15ರಿಂದ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಆಗುತ್ತಿದೆ. ವಿಶೇಷ ಎಂದರೇ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾ ನೀಡಿರುವ ಸೂರ್ಯ ಅವರಿಗೆ ಕರುಪು ಬಿಗ್ ಬ್ರೇಕ್ ನೀಡುವ ಮುನ್ಸೂಚನೆ ಸಿಕ್ಕಿದೆ.

ಇದರ ನಡುವೆಯೇ ತ್ರಿಶಾ ಅವರ ಕುರಿತು ಮತ್ತೊಂದು ಅಚ್ಚರಿ ಸುದ್ದಿ ಸದ್ದು ಮಾಡುತ್ತಿದೆ. ಸೂಪರ್ ಸ್ಟಾರ್ ನಟರಾದ ಕಮಲ್ ಹಾಸನ್, ರಜಿನಿಕಾಂತ್ ಬರೋಬ್ಬರಿ 46 ವರ್ಷಗಳ ಬಳಿಕ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾಗೆ ತ್ರಿಶಾ ಅವರಿಗೆ ಆಫರ್ ನೀಡಲಾಗಿದೆ. ಇದಕ್ಕಾಗಿ ಬರೋಬ್ಬರಿ 12 ಕೋಟಿ ರೂಪಾಯಿ ರೆಮ್ಯೂನರೇಶನ್ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈ ಆಫರ್ ಅನ್ನು ತ್ರಿಶಾ ನಿರಾಕರಿಸಿದ್ದಾರೆ ಎಂಬ ವರದಿಗಳನ್ನು ಆಧಾರಿಸಿ ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.

ರಜನಿಕಾಂತ್-ಕಮಲ್ ಹೊಸ ಸಿನಿಮಾ (ಸಂಗ್ರಹ ಚಿತ್ರ)

ಬಹುತೇಕ ದಶಕಗಳ ಬಳಿಕ ಇಬ್ಬರು ಸೂಪರ್ ಸ್ಟಾರ್ ಗಳು ಒಂದಾಗುತ್ತಿದ್ದು, ಇವರ ಸ್ಟಾರ್ಡಮ್‌ಗೆ ಸೂಕ್ತವಾಗುವಂತೆ ಹೀರೋಯಿನ್ ಗಳನ್ನು ಆಯ್ಕೆ ಮಾಡಿಕೊಳ್ಳಲು ತ್ರಿಶಾ ಅವರಿಗೆ ಆಫರ್ ನೀಡಲಾಗುತ್ತಂತೆ. ಭಾರೀ ರೆಮ್ಯೂನರೇಶನ್ ನೀಡಿದ ಬಳಿಕವೂ ಸಿನಿಮಾಗೆ ನೋ ಎಂದಿರುವುದಕ್ಕೆ ಬಲವಾದ ಕಾರಣವಿದೆಯಂತೆ. ಈ ಸಿನಿಮಾಗೆ ಉದಯನಿಧಿ ಸ್ಟಾಲಿನ್ ಅವರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದ್ದು, ತ್ರಿಶಾ ನೋ ಎಂದು ಹೇಳಲು ಇದೆ ಕಾರಣ ಎನ್ನಲಾಗಿದೆ. ಆದರೆ ತ್ರಿಶಾ ಅವರ ಈ ಪ್ರಾಜೆಕ್ಟ್ ನಲ್ಲಿ ನಟಿಸುತ್ತಿದ್ದಾರಾ ಇಲ್ಲವೇ ಎಂಬುವುದರ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ನಟಿ ತ್ರಿಶಾ (ಸಂಗ್ರಹ ಚಿತ್ರ)

ಇನ್ನು, ತ್ರಿಶಾ ಅವರು ಕರುಪು ಸಿನಿಮಾ ಬಳಿಕ ಟಾಲಿವುಡ್​​ನ ಮೆಗಾಸ್ಟಾರ್ ಚಿರಂಜೀವಿ ಅವರ ‘ವಿಶ್ವಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಾರೀ ನಿರೀಕ್ಷೆಯೊಂದಿಗೆ ಬರುತ್ತಿರುವ ಈ ಸಿನಿಮಾಗೆ ಜಗತ್ತಿನ ದೊಡ್ಡ ದೊಡ್ಡ ವಿಎಫ್ಎಕ್ಸ್ ಕಂಪನಿಗಳು ಕೆಲಸ ಮಾಡುತ್ತಿವೆ.

ಕರುಪು ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ರೋಹಿಣಿ ಸಿಲ್ವರ್ ಸ್ಕ್ರೀನ್ ಥಿಯೇಟರ್ ನಲ್ಲಿ ಪ್ರದರ್ಶನ ಮಾಡುತ್ತಿದೆ. ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ತ್ರಿಶಾ ಅವರು ಸ್ನೇಹಿತರೊಂದಿಗೆ ಸಿನಿಮಾ ನೋಡಲು ಹೋಗಿದ್ದರು. ಈ ಸಂದರ್ಭದಲ್ಲಿ ತೆಗೆದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Hassan: ಡ್ರೈವರ್‌ಗೆ ಸುರಸುಂದರಿ ಕ್ಲೀನ್‌ ಬೋಲ್ಡ್‌! ತವರು ಮನೆ ಸೇರಿದ ಹೆಂಡ್ತಿ, ಗಂಡ ಮಾಡಿದ್ದು ಘನಘೋರ!

ನಟ ವಿಜಯ್ ಅವರು ಮೇ 10 ರಂದು ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಈ ಕಾರ್ಯಕ್ರಮದಲ್ಲೂ ಕೂಡ ತ್ರಿಶಾ ಎಲ್ಲರ ಗಮನ ಸೆಳೆದಿದ್ದರು. ಈ ವೇಳೆ ಅವರು ಧರಿಸಿದ್ದ ನೀಲಿ, ಚಿನ್ನದ ಬಣ್ಣದ ಸೀರೆ ಹಾಗೂ ಮಲ್ಲಿಗೆ ಹೂಗಳ ಅಲಂಕಾರ ಎಲ್ಲರ ಕಣ್ಣು ಅವರತ್ತ ತಿರುಗುವಂತೆ ಮಾಡಿದ್ದವು. ಜೊತೆಗೆ ವಿಜಯ್ ಅವರ ತಾಯಿ-ತಂದೆ ಅವರು ಕುಳಿತಿದ್ದ ಸಾಲಿನಲ್ಲಿಯೇ ತ್ರಿಶಾ ಅವರು ಕುಳಿತಿದ್ದರು. ಇದರೊಂದಿಗೆ ವಿಜಯ್, ತ್ರಿಶಾ ಅವರ ನಡುವಿನ ರೂಮರ್ಸ್ ಮತ್ತಷ್ಟು ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *