Travel Hack: ರಸ್ತೆ ಗುಂಡಿಯಿಂದ ನಿಮ್ಮ ಗಾಡಿ ಹಾಳಾದ್ರೆ ಸರ್ಕಾರ ಕೊಡಲಿದೆ ಲಕ್ಷ ಲಕ್ಷ; ಕೂತಲ್ಲೇ ಕೊಡಬಹುದು ದೂರು, ಏನಿದು ಸೆಕ್ಷನ್‌ 232? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಾಹನ ಹಾನಿ-ದಂಡ ವಸೂಲಿ


Last Updated:

ರಸ್ತೆ ಗುಂಡಿಯಿಂದ ವಾಹನ ಹಾನಿ, ಗಾಯ ಅಥವಾ ಮರಣವಾದರೆ ನಾಗರಿಕರಿಗೆ ಪರಿಹಾರ ಹಕ್ಕು ಇದೆ, ಫೋಟೋ, ಬಿಲ್, BBMP ಅಥವಾ PWDಗೆ ದೂರು, ನಂತರ ಗ್ರಾಹಕ ನ್ಯಾಯಾಲಯದಲ್ಲಿ ಕ್ಲೇಮ್ ಮಾಡಬಹುದು

ವಾಹನ ಹಾನಿ-ದಂಡ ವಸೂಲಿ
ವಾಹನ ಹಾನಿ-ದಂಡ ವಸೂಲಿ

ಬೆಂಗಳೂರು: ದೇಶದಾದ್ಯಂತ ರಸ್ತೆ ಗುಂಡಿಗಳು (Pot Holes) ಲಕ್ಷಾಂತರ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಟೈರ್ ಪಂಕ್ಚರ್‌ನಿಂದ ಹಿಡಿದು ಸಸ್ಪೆನ್ಷನ್ ಮುರಿತದವರೆಗೆ ದುರಸ್ತಿ ಖರ್ಚು (Repair Cost) ನಿಮ್ಮ ಜೇಬಿಗೆ ಭಾರ ಬೀಳುತ್ತಿದೆಯೇ? ಗೊತ್ತಿರಲಿ, ಭಾರತೀಯ ನ್ಯಾಯಾಲಯಗಳು ಉತ್ತಮ ರಸ್ತೆ (Road) ಪ್ರತಿಯೊಬ್ಬ ನಾಗರಿಕನ (Citizen) ಮೂಲಭೂತ ಹಕ್ಕು ಎಂದು ಪದೇ ಪದೇ ತೀರ್ಪು ನೀಡಿವೆ! ವಾಹನ ಹಾನಿ ಕ್ಲೇಮ್‌ಗಳಿಗೆ ₹10,000 ರಿಂದ ₹2,00,000ವರೆಗೆ, ಗಾಯಗಳಿಗೆ ₹50,000 ರಿಂದ ₹2.5 ಲಕ್ಷದವರೆಗೆ ಮತ್ತು ಮರಣ ಸಂಭವಿಸಿದರೆ ₹6 ಲಕ್ಷದವರೆಗೆ ಪರಿಹಾರ ಪಡೆದ ನೈಜ ಪ್ರಕರಣಗಳಿವೆ!

ಪರಿಹಾರ ಪಡೆಯಲು ಈ 4 ಹೆಜ್ಜೆಗಳನ್ನು ಅನುಸರಿಸಿ

  1. ಮೊದಲ ಹೆಜ್ಜೆಯಾಗಿ ಗುಂಡಿ ಇರುವ ರಸ್ತೆ ಮತ್ತು ವಾಹನಕ್ಕಾದ ಹಾನಿಯ ಸ್ಪಷ್ಟ ಫೋಟೋ ಹಾಗೂ ವಿಡಿಯೋ ತೆಗೆಯಿರಿ. GPS ಕ್ಯಾಮೆರಾ ಆ್ಯಪ್ ಬಳಸಿ ಚಿತ್ರೀಕರಿಸಿದರೆ ನಿಖರ ಸ್ಥಳ, ದಿನಾಂಕ ಮತ್ತು ಸಮಯ ಫೈಲ್‌ನಲ್ಲೇ ದಾಖಲಾಗುತ್ತದೆ. ಇದು ನಿಮ್ಮ ಅತ್ಯಂತ ಪ್ರಮುಖ ಆಧಾರ.
  2. ಎರಡನೇ ಹೆಜ್ಜೆಯಾಗಿ ವಾಹನವನ್ನು ಅಧಿಕೃತ ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿ, ರಸ್ತೆ ದೋಷದಿಂದ ಉಂಟಾದ ಹಾನಿಯ ಸಂಪೂರ್ಣ ವಿವರ ನಮೂದಿಸಿದ ಅಧಿಕೃತ ಬಿಲ್ ಪಡೆಯಿರಿ. ಇದಿಲ್ಲದೆ ಪರಿಹಾರ ಕ್ಲೇಮ್ ಮಾಡಲು ಸಾಧ್ಯವೇ ಇಲ್ಲ.
  3. ಮೂರನೇ ಹೆಜ್ಜೆಯಾಗಿ ನಿಮ್ಮ ಸ್ಥಳೀಯ ಮಹಾನಗರ ಪಾಲಿಕೆ (BBMP, BMC, MCD) ಅಥವಾ ಲೋಕೋಪಯೋಗಿ ಇಲಾಖೆ (PWD) ಪೋರ್ಟಲ್‌ನಲ್ಲಿ ಜಿಯೋ-ಟ್ಯಾಗ್ ಫೋಟೋ ಮತ್ತು ದುರಸ್ತಿ ಬಿಲ್ ಲಗತ್ತಿಸಿ ಅಧಿಕೃತ ದೂರು ದಾಖಲಿಸಿ.
  4. ನಾಲ್ಕನೇ ಹಾಗೂ ಅತಿ ಮುಖ್ಯ ಹೆಜ್ಜೆಯಾಗಿ ದೂರು ಸಲ್ಲಿಸಿದ ಬಳಿಕ ಸಿಗುವ ಸ್ವೀಕೃತಿ, ರೆಫರೆನ್ಸ್ ನಂಬರ್ ಅಥವಾ ಅಕ್ನಾಲೆಡ್ಜ್‌ಮೆಂಟ್ ಸ್ಕ್ರೀನ್‌ಶಾಟ್ ಯಾವತ್ತೂ ಡಿಲಿಟ್‌ ಮಾಡಬೇಡಿ! ಇದೇ ನಿಮ್ಮ ಕಾನೂನು ಹೋರಾಟದ ಅಡಿಪಾಯ
ನಿಮ್ಮ ಕ್ಲೇಮ್ ಬೆಂಬಲಿಸುವ ಕಾನೂನುಗಳು ಯಾವುವು?

ಸಂವಿಧಾನದ 21ನೇ ವಿಧಿ (ಜೀವಿಸುವ ಹಕ್ಕು) ಅಡಿಯಲ್ಲಿ ಸುರಕ್ಷಿತ ರಸ್ತೆ ಪಡೆಯುವ ಹಕ್ಕು ನಿಮ್ಮದು. ಟಾರ್ಟ್ ಕಾನೂನಿನಡಿ ನಿರ್ಲಕ್ಷ್ಯಕ್ಕಾಗಿ ಮುನ್ಸಿಪಲ್ ಕಾರ್ಪೊರೇಷನ್ ಅಥವಾ PWD ವಿರುದ್ಧ ಮೊಕದ್ದಮೆ ಹೂಡಬಹುದು. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರಡಿ ರಸ್ತೆ ನಿರ್ವಹಣೆಯನ್ನು “ಸೇವೆ” ಎಂದು ಪರಿಗಣಿಸಿ ಸೇವಾ ಲೋಪಕ್ಕಾಗಿ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು. ಇದು ಅತ್ಯಂತ ವೇಗದ ಮತ್ತು ಕಡಿಮೆ ವೆಚ್ಚದ ಮಾರ್ಗ. ಬೆಂಗಳೂರಿನವರಿಗೆ ವಿಶೇಷ ಸಿಹಿ ಸುದ್ದಿಯೆಂದರೆ BBMP ಕಾಯ್ದೆ 2020ರ ಸೆಕ್ಷನ್ 232 ರಸ್ತೆ ಲೋಪದಿಂದ ಉಂಟಾದ ಹಾನಿಗೆ ಪರಿಹಾರ ನೀಡಲು ಸ್ಪಷ್ಟವಾಗಿ ಅವಕಾಶ ಕಲ್ಪಿಸುತ್ತದೆ. 2025ರ ಬಾಂಬೆ ಹೈಕೋರ್ಟ್ ತೀರ್ಪು ಸಹ ಸುರಕ್ಷಿತ ರಸ್ತೆ ಹಕ್ಕನ್ನು ಮೂಲಭೂತ ಹಕ್ಕೆಂದು ಮನ್ನಿಸಿ ಪರಿಹಾರ ಚೌಕಟ್ಟನ್ನು ನಿರ್ದೇಶಿಸಿದೆ.

ದೂರು ನಿರ್ಲಕ್ಷ್ಯವಾದರೆ? ಇನ್ನಷ್ಟು ಮೇಲಕ್ಕೆ ಹೋಗಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed