Toxic Movie: “ಪ್ರೀತಿ, ಮೋಸ ಹೆಣ್ಣನ್ನು ರಾಕ್ಷಸಿಯಾಗಿಸಬಲ್ಲದು” ಲೇಡೀಸ್ ಟೀಸರ್​​ನಲ್ಲಿ ಅಡಗಿದೆ ಟಾಕ್ಸಿಕ್ ಗುಟ್ಟು | | ACTPnews

ಲೇಡೀಸ್ ಟೀಸರ್ ಅಲ್ಲಿ ಅಡಗಿದೆ ಟಾಕ್ಸಿಕ್ ಗುಟ್ಟು!


Last Updated:

ಟಾಕ್ಸಿಕ್ ಚಿತ್ರದ ಲೇಡೀಸ್ ಆ್ಯಂಡ್ ಲೇಡೀಸ್ ಟೀಸರ್ ನಿರೂಪಣೆಯಲ್ಲಿಯೇ ಚಿತ್ರದ ಕತೆ ಅಡಗಿದೆ. ಇಡೀ ಚಿತ್ರದ ಕತೆ ಯಾಕೆ ಅನ್ನೋದು ತಿಳಿಯುತ್ತದೆ. ಇಂಗ್ಲಿಷ್ ಅಲ್ಲಿರೋ ಈ ಸಾಲುಗಳ ಪೂರ್ಣ ವಿವರ ಇಲ್ಲಿದೆ ಓದಿ.

ಲೇಡೀಸ್ ಟೀಸರ್ ಅಲ್ಲಿ ಅಡಗಿದೆ ಟಾಕ್ಸಿಕ್ ಗುಟ್ಟು!
ಲೇಡೀಸ್ ಟೀಸರ್ ಅಲ್ಲಿ ಅಡಗಿದೆ ಟಾಕ್ಸಿಕ್ ಗುಟ್ಟು!

ಟಾಕ್ಸಿಕ್ ಚಿತ್ರದಲ್ಲಿ (Toxic Movie) ಇರೋ ಕತೆ ಏನು? ಬರೀ ಬೋಲ್ಡ್ ದೃಶ್ಯಗಳೇ ಇದರಲ್ಲಿ ಇವೆಯಾ? ಅಥವಾ ಹಾಲಿವುಡ್‌ ರೇಂಜ್‌ನ ಒಂದು ಆ್ಯಕ್ಷನ್ ಸಿನಿಮಾನಾ (Action Movie) ಅನ್ನುವ ಪ್ರಶ್ನೆಗಳೂ ಇದ್ದವು. ಆದರೆ, ಇದು ನೀವು ಅಂದುಕೊಂಡಂತಹ ಸಿನಿಮಾ ಅಲ್ಲ. ಇಲ್ಲಿ ಪ್ರೀತಿಯ ಕತೆ ಇದೆ. ಪ್ರೀತಿಯಿಂದಲೇ ಮೋಸಗೊಂಡವರ ಸ್ಟೋರಿನೂ ಇದೆ. ಆದರೆ, ಹಾಗೆ ಮೋಸಗೊಂಡವರು ಬಲ ಹೀನರಲ್ಲ. ಇವರು ಮಾನ್ಸ್ಟರ್ಸ್ ಅನ್ನೋದನ್ನು ಇಲ್ಲಿ ಹೇಳುತ್ತಿದ್ದಾರೆ. ಇದೆಲ್ಲ ಚಿತ್ರದ ಲೇಡೀಸ್ ಆ್ಯಂಡ್ ಲೇಡೀಸ್ ಟೀಸರ್ (Ladies and Ladies Teaser) ಅಲ್ಲಿಯೇ ಇದೆ. ಇದರೊಟ್ಟಿಗೆ ಇಡೀ ಕತೆಯ ಝಲಕ್ ಈ ಟೀಸರ್ ನಿರೂಪಣೆಯಲ್ಲಿಯೇ (Narration) ಇದೆ. ಒಂದೊಂದು ಸಾಲು ಸಾಕಷ್ಟು ಅರ್ಥ ಕೊಡುತ್ತವೆ. ಇದರ ವಿವರ ಮುಂದೆ ಇದೆ ಓದಿ.

ಪ್ರೀತಿ ಹೆಣ್ಣನ್ನ ರಾಕ್ಷಸಿ ಆಗಿಸಬಲ್ಲದು…

ಈ ಒಂದು ಲೈನ್ ಇಲ್ಲಿ ಪ್ರೀತಿಯ ಇನ್ನೂ ಒಂದು ಮುಖವನ್ನು ಹೇಳುತ್ತದೆ. ಪ್ರೀತಿ ಆ ಪ್ರೀತಿನೇ ಹೆಣ್ಣನ್ನ ರಾಕ್ಷಸಿ ಆಗಿಸಬಲ್ಲದು (Love… Love makes monsters of women) ಅನ್ನೋದು ಇಲ್ಲಿ ಬರುತ್ತದೆ.

Toxic Ladies and Ladies Teaser Narration Interesting Facts

ಪ್ರೀತಿಯ ಮೋಸ ಸುಂದರವಾದ ಭ್ರಮೆ

ಇದೇ ಪ್ರೀತಿಯ ಮೋಸ ನಿಜಕ್ಕೂ ಸುಂದರವಾಗಿ ಇರುತ್ತದೆ. (It is a beautiful illusion, if one understands the depth of its deception) ಆದರೆ, ಇದು ಭ್ರಮ ಅನ್ನೋದು ಅಷ್ಟೆ ಸತ್ಯ ನೋಡಿ.

ಪ್ರೀತಿಯ ಭಿಕ್ಷೆಗಾಗಿಯೇ ಹೋರಾಟ

ನಮಗೆ ಪ್ರೀತಿ ಅಂದರೆ ಏನು ಅನ್ನೊದು ಗೊತ್ತೇ ಇರುತ್ತದೆ. ಆದರೂ, ನಾವು ಪ್ರೀತಿಯ ಭಿಕ್ಷೆಗಾಗಿಯೇ (And yet here we are… fighting for scraps of devotion) ಹೋರಾಡುತ್ತಲೇ ಇರುತ್ತೇವೆ.

ಆದರೆ, ಇಲ್ಲೊಂದು ಟ್ವಿಸ್ಟ್ ಇದೆ ಲೇಡೀಸ್ (But here comes a plot twist, ladies) ಅನ್ನುವ ಸಾಲು ಇಲ್ಲಿ ಬರುತ್ತದೆ.

ಗಂಡಸರ ಅಹಂ ಮರೆಯಬೇಡಿ….

ಗಂಡಸರು ಮತ್ತು ಅವರ ಅಹಂ ಅನ್ನ ನೀವು ಊಹಿಸಬಹುದು. (Don’t forget the predictable spectacle of men and their cocks) ಆದರೆ, ಅದನ್ನ ಮರೆಯಬೇಡ ಅನ್ನೋದು ಇಲ್ಲಿ ಬರುತ್ತದೆ.

Toxic Ladies and Ladies Teaser Narration Interesting Facts

ಲೇಡೀಸ್ ಟೀಸರ್ ಅಲ್ಲಿ ಅಡಗಿದೆ ಟಾಕ್ಸಿಕ್ ಗುಟ್ಟು

ಇಷ್ಟೆಲ್ಲ ಸಾಲುಗಳು ಲೇಡೀಸ್ ಆ್ಯಂಡ್ ಲೇಡೀಸ್ ಟೀಸರ್ ಅಲ್ಲಿಯೇ ಇವೆ. ಅಂದ್ರೆ ಇಡೀ ಚಿತ್ರದಲ್ಲಿ ಬರುವ ನಟಿಮಣಿಯರ ಪಾತ್ರದ ಉದ್ದೇಶ ಏನು ಅನ್ನೋದು ಇಲ್ಲಿ ತಿಳಿಯುತ್ತದೆ.

ಆದರೆ ಇಲ್ಲೊಂದು ಎಚ್ಚರಿಕೆ ಇದೆ

ಮಕ್ಕಳೇ ದೂರವಿರಿ, ಮಕ್ಕಳು ದೂರ ಇದ್ದಾರಾ ಅನ್ನೋದನ್ನು ಪೋಷಕರೇ ಚೆಕ್ ಮಾಡಿಕೊಳ್ಳಿ, ಅಜ್ಜಂದಿರು, ಮುತ್ತಜ್ಜಂದಿರೇ..ನಿಮ್ಮ ರಿಸ್ಕ್ ಮೇಲೆ ಇದನ್ನ ನೋಡಿ ಅನ್ನೋದು ಇಲ್ಲಿದೆ.

Toxic Ladies and Ladies Teaser Narration Interesting Facts

ಪ್ರೀತಿ ಹೆಣ್ಣನ್ನ ರಾಕ್ಷಸಿ ಆಗಿಸಬಲ್ಲದು

ಅಂದರೆ, ಈ ಚಿತ್ರ ಮಕ್ಕಳು ನೋಡುವಂತದ್ದು ಅಲ್ವೇ ಅಲ್ಲ ಅನ್ನೋದನ್ನ ಇಲ್ಲಿ ಹೇಳಲಾಗಿದೆ. ಆ ರೀತಿಯ ಈ ಚಿತ್ರ ಆಗಸ್ಟ್-26 ರಂದು ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ.

ಕನ್ನಡ ಮತ್ತು ಇಂಗ್ಲಿಷ್ ಅಲ್ಲಿ ಇದು ತಯಾರಾಗಿದೆ. ಆದರೆ, ಇತರ ಭಾಷೆಯಲ್ಲೂ ಇದು ಡಬ್ ಆಗುತ್ತದೆ. ಹಾಗೆ ರಿಲೀಸ್ ಕೂಡ ಆಗುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports