Last Updated:
ಟಾಕ್ಸಿಕ್ ಚಿತ್ರದ ಟ್ರೈಲರ್ ಸಂಜೆ-7 ಗಂಟೆಗೆ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಕಪಾಲಿ ಮಾಲ್ ಮಲ್ಟಿಪ್ಲೆಕ್ಸ್ ಅಲ್ಲಿ ರಿಲೀಸ್ ಆಗುತ್ತಿದೆ. ಇದನ್ನ ಹೇಳಲಿಕ್ಕೆ ಮಾಡಿರೋ ಪೋಸ್ಟರ್ ಸ್ಪೋಟಕವಾಗಿದೆ. ಇಡೀ ಟ್ರೈಲರ್ ಹೇಗಿರುತ್ತದೆ ಅನ್ನುವ ಕುತೂಹಲವು ಹೆಚ್ಚಾಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಟ್ರೈಲರ್ ರಿಲೀಸ್ (Trailer Release) ದಿನವೇನೋ ಗೊತ್ತಾಗಿದೆ. ಟೈಮ್ ಸಂಜೆ 6 ಗಂಟೆಗೆ ಅಂತಲೇ ಇತ್ತು. ಆದರೆ, ಇದೀಗ ಅಧಿಕೃತ ಮಾಹಿತಿ ಹೊರ ಬಂದಿದೆ. ಇದನ್ನ ಹೇಳಲಿಕ್ಕೆ ಮಾಡಿರೋ ಪೋಸ್ಟರ್ ಕೂಡ ಕುತೂಹಲ ಹೆಚ್ಚಿಸುತ್ತಿದೆ. ಆ ರೀತಿನೆ ಈ ಪೋಸ್ಟರ್ (Poster) ಬ್ಲಾಸ್ಟಿಂಗ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ (Yash) ಬೆಂಕಿ ಹಿನ್ನೆಲೆಯಲ್ಲಿ ನಡೆದು ಬರುವ ದೃಶ್ಯ ಇಲ್ಲಿದೆ. ಇಲ್ಲಿವರೆಗಿನ ವಿಡಿಯೋ ಸಾಂಗ್ ಮತ್ತು ಟೀಸರ್ ಅಲ್ಲಿ ಬೇರೆ ತರದ ವಿಷಯ ಕಾಣಿಸುತ್ತಿತ್ತು. ಆದರೆ, ಈ ಪೋಸ್ಟರ್ ಅಲ್ಲಿ ಆಕ್ರೋಶದ ಕಿಡಿ ಕಾಣಿಸುತ್ತಿದೆ. ಈ ಒಂದು ಪೋಸ್ಟರ್ ಮತ್ತು ಟ್ರೈಲರ್ ರಿಲೀಸ್ನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














