ಪ್ರತಿ ಶುಕ್ರವಾರ ವಿಶಾಖಪಟ್ಟಣಂನಿಂದ ಹೊರಡುವ 08581 ವಿಶಾಖಪಟ್ಟಣಂ–ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು 2026ರ ಆಗಸ್ಟ್ 7ರಿಂದ ಸೆಪ್ಟೆಂಬರ್ 25ರವರೆಗೆ ಸಂಚರಿಸಲಿದೆ. ಅದೇ ರೀತಿ, ಪ್ರತಿ ಶನಿವಾರ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡುವ 08582 ಎಸ್ಎಂವಿಟಿ ಬೆಂಗಳೂರು–ವಿಶಾಖಪಟ್ಟಣಂ ವಿಶೇಷ ಎಕ್ಸ್ಪ್ರೆಸ್ ರೈಲು 2026ರ ಆಗಸ್ಟ್ 8ರಿಂದ ಸೆಪ್ಟೆಂಬರ್ 26ರವರೆಗೆ ಓಡಲಿದೆ.
ವಿಸ್ತರಿಸಲಾದ ಅವಧಿಯಲ್ಲಿ ಎರಡೂ ದಿಕ್ಕುಗಳಲ್ಲಿ ತಲಾ 8 ಟ್ರಿಪ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಇದರಿಂದ ಬೆಂಗಳೂರು–ವಿಶಾಖಪಟ್ಟಣಂ ನಡುವೆ ಪ್ರಯಾಣಿಸುವವರಿಗೆ ಹೆಚ್ಚುವರಿ ಆಸನ ಸೌಲಭ್ಯ ದೊರೆಯಲಿದೆ.
ಈ ವಿಶೇಷ ರೈಲುಗಳು ಈಗಿರುವ ವೇಳಾಪಟ್ಟಿ ಮತ್ತು ನಿಲ್ದಾಣಗಳಲ್ಲೇ ಸಂಚರಿಸಲಿವೆ.
ಪ್ರಮುಖ ನಿಲ್ದಾಣಗಳು:
ವಿಶಾಖಪಟ್ಟಣಂ, ದುವ್ವಾಡ, ಅನಕಪಲ್ಲೆ, ಎಲ್ಲಮಂಚಿಲಿ, ಸಮಲ್ಕೋಟ್, ರಾಜಮಂಡ್ರಿ, ಏಲೂರು, ವಿಜಯವಾಡ ಜಂಕ್ಷನ್ಒಂಗೋಲ್ ನೆಲ್ಲೂರು, ಗುಡೂರು, ರೇಣಿಗುಂಟ ಜಂಕ್ಷನ್ , ಕಟ್ಪಾಡಿ ಜಂಕ್ಷನ್ , ಜೋಲಾರ್ಪೆಟ್ಟೈ, ಕುಪ್ಪಂ, ಬಂಗಾರಪೇಟೆ, ಕೃಷ್ಣರಾಜಪುರಂ ಎಸ್ಎಂವಿಟಿ ಬೆಂಗಳೂರು ತಾಣಗಳಲ್ಲಿ ನಿಲ್ಲಲಿದೆ
ಈ ವಿಶೇಷ ರೈಲು ತಿರುಪತಿ (TPTY) ರೈಲು ನಿಲ್ದಾಣದಲ್ಲಿ ನೇರವಾಗಿ ನಿಲ್ಲುವುದಿಲ್ಲ. ಆದರೆ ರೇಣಿಗುಂಟ ಜಂಕ್ಷನ್ (RU) ನಲ್ಲಿ ಸುಮಾರು 10 ನಿಮಿಷಗಳ ಕಾಲ ನಿಲುಗಡೆ ಹೊಂದಿದೆ.
ರೇಣಿಗುಂಟದಿಂದ ತಿರುಪತಿ ಕೇವಲ 8–10 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿಂದ ಬಸ್, ಆಟೋ, ಟ್ಯಾಕ್ಸಿ ಅಥವಾ ಸ್ಥಳೀಯ ರೈಲುಗಳ ಮೂಲಕ ಸುಮಾರು 20ರಿಂದ 40 ನಿಮಿಷಗಳಲ್ಲಿ ತಲುಪಬಹುದು.
ಪ್ರಯಾಣಕ್ಕೂ ಮೊದಲು ಗಮನಿಸಿ
ನೈಋತ್ಯ ರೈಲ್ವೆಯ ಪ್ರಕಟಣೆಯ ಪ್ರಕಾರ, ಈ ವಿಸ್ತರಣೆಯಿಂದ ಬೆಂಗಳೂರು–ವಿಶಾಖಪಟ್ಟಣಂ ನಡುವಿನ ಹೆಚ್ಚಿದ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.













