Last Updated:
ಟಿಟಿಡಿ ತಿರುಮಲದಲ್ಲಿ ತೋಮಾಲ ಸೇವೆ ಸಮಯದಲ್ಲೂ ಸಾಮಾನ್ಯ ಭಕ್ತರಿಗೆ ದರ್ಶನ ಅವಕಾಶ, ಶ್ರೀವಾಣಿ ಟ್ರಸ್ಟ್ ದೇಣಿಗಾದಾರರಿಗೆ ಜೂನ್ 10ರಿಂದ ಪ್ರತ್ಯೇಕ ವಿಶೇಷ ದರ್ಶನ ವ್ಯವಸ್ಥೆ.
ತಿರುಮಲ ಶ್ರೀವಾರಿ ಭಕ್ತರಿಗೆ (Tirupati Tirumala) ಟಿಟಿಡಿ ಸಿಹಿ ಸುದ್ದಿ ನೀಡಿದೆ. ಟಿಟಿಡಿ (TTD) ಸಾಮಾನ್ಯ ಭಕ್ತರಿಗೆ (Devotees) ದರ್ಶನ ಅವಕಾಶ ಕಲ್ಪಿಸಲು ಮತ್ತೊಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಇನ್ನು ಮುಂದೆ ತೋಮಲ ಸೇವೆಯ ಸಮಯದಲ್ಲೂ ಸಾಮಾನ್ಯ ಭಕ್ತರಿಗೆ ಅವಕಾಸ ಕಲ್ಪಿಸಿದೆ. ಭಕ್ತರ ಕಾಯುವಿಕೆ ಸಮಯ ಕಡಿಮೆ ಮಾಡಲು ಹಾಗೂ ವೇಗವಾಗಿ ದರ್ಶಕ್ಕೆ (Tirumala Darshan Tickets) ಅವಕಾಸ ಕಲ್ಪಿಸುವ ಭಾಗವಾಗಿ ಟಿಟಿಡಿ ಮಹತ್ವದ ನಿರ್ಣಯ ತೆಗೆದುಕೊಂಡಿದೆ.
ಅದರಲ್ಲೂ ಸಾಮಾನ್ಯ ಭಕ್ತರಿಗೆ ಅನುಕೂಲ ಆಗುವಂತೆ ಟಿಟಿಡಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿಯೇ ಈಗಾಗಲೇ ಟಿಟಿಡಿ ವಿಐಪಿ ಬ್ರೇಕ್ ದರ್ಶನವನ್ನು ರದ್ದು ಮಾಡಿದೆ. ಅಷ್ಟೇ ಅಲ್ಲ ಸಾಮಾನ್ಯ ಭಕ್ತರು ಮತ್ತಷ್ಟು ವೇಗವಾಗಿ ಶ್ರೀವಾರಿ ದರ್ಶನ ಪಡೆದುಕೊಳ್ಳಲು ಸಹಾಯವಾಗುವಂತೆ ಇತ್ತೀಚೆಗೆ ಅಭಿಷೇಕ ಸೇವೆ ಸಮಯದಲ್ಲೂ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಇದರ ನಡುವೆಯೇ ಟಿಟಿಡಿ ಮತ್ತೊಂದು ಮಹತ್ವದ ನಿರ್ಣಯ ತೆಗೆದುಕೊಂಡಿದೆ. ತಕ್ಷಣದಿಂದಲೇ ಜಾರಿ ಆಗುವಂತೆ ಸಾಮಾನ್ಯ ಭಕ್ತರಿಗೆ ವೇಗವಾಗಿ ದರ್ಶನ ಪಡೆದುಕೊಳ್ಳಲು ತೋಮಾಲ ಸೇವೆ ಸಮಯದಲ್ಲೂ ತಿಮ್ಮಪ್ಪನ ದರ್ಶನಕ್ಕೆ ಅನುಮತಿ ನೀಡಿ ಆದೇಶವನ್ನು ಮಾಡಿದೆ. ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರೋದು ಈ ಹೊಸ ನಿರ್ಧಾರಕ್ಕೆ ಕಾರಣವಾಗಿದೆ. ಈ ವಾರ ಶ್ರೀವಾರಿ ತೋಮಾಲ ಸೇವೆ ಸಮಯದಲ್ಲಿ 1200 ಭಕ್ತರಿಗೆ ದರ್ಶನ ಮಾಡಿಕೊಳ್ಳಲು ಅವಕಾಶ ನೀಡಲಅಗಿತ್ತು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ತೋಮಾಲ ಸೇವೆಯ ಸಂದರ್ಭದಲ್ಲಿ ಬರೋಬ್ಬರಿ 87,689 ಮಂದಿ ಭಕ್ತರು ಶ್ರೀವಾರಿ ದರ್ಶನ ಪಡೆದುಕೊಂಡಿದ್ದರು. ಟಿಟಿಡಿ ಇತಿಹಾಸದಲ್ಲೇ ಶುಕ್ರವಾರದ ವೇಳೆ ಇಷ್ಟು ಸಂಖ್ಯೆ ಭಕ್ತರು ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡಿರುವುದು ಇದೇ ಮೊದಲು. ತಿರುಮಲದಲ್ಲಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಟಿಟಿಡಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕ್ಯೂ ಲೈನ್ ನಲ್ಲಿ, ಬೆಟ್ಟದ ಮೇಲೆ ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡಿದೆ. ಕುಡಿಯುವ ನೀರು, ಆಹಾರ, ಕೊಠಡಿಗಳನ್ನು ಭಕ್ತರಿಗೆ ಸಿಗುವಂತೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದೇ ವೇಳೆ ಶ್ರೀವಾಣಿ ಟ್ರಸ್ಟ್ಗೆ ದೇಣಿಗೆ ನೀಡುವ ಭಕ್ತರಿಗೂ ಟಿಟಿಡಿ ಗುಡ್ ನ್ಯೂಸ್ ನೀಡಿದ್ದು, ಈ ಟ್ರಸ್ಟ್ಗೆ ದೇಣಿಗೆ ನೀಡುವ ಭಕ್ತರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಮಾಡಲು ನಿರ್ಧಾರ ಮಾಡಿದೆ. ಜೂನ್ 10ರಿಂದ ಈ ಯೋಜನೆ ಜಾರಿ ಆಗಲಿದ್ದು, ಪ್ರತಿ ದಿನ 1500 ಭಕ್ತರಿಗೆ ವಿಶೇಷ ದರ್ಶನ ವ್ಯವಸ್ಥೆಗೆ ಮೀಸಲಿಡಲು ಟಿಟಿಡಿ ಮುಂದಾಗಿದೆ. ಇದರಲ್ಲಿ 500 ಟಿಕೆಟ್ ಗಳು ಮೂರು ತಿಂಗಳ ಮುನ್ನವೇ ಭಕ್ತರು ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 200 ಟಿಕೆಟ್ ಗಳು ತಿರುಪತಿ ವಿಮಾನ ನಿಲ್ದಾಣದ ಟಿಟಿಡಿ ಬುಕ್ಕಿಂಗ್ ಕೇಂದ್ರದಲ್ಲಿ ಲಭ್ಯವಾಗಲಿದೆ. ಉಳಿದಂತೆ ಪ್ರತಿ ದಿನ ಆನ್ ಲೈನ್ ಕರೆಂಟ್ ಬುಕ್ಕಿಂಗ್ ಕೋಟಾ ಮೂಲಕ ಬೆಳಗ್ಗೆ 09 ಗಂಟೆಗೆ 800 ಟಿಕೆಟ್ಗಳು ಭಕ್ತರಿಗೆ ಲಭ್ಯವಾಗಲಿದೆ. ಈಗಾಗಲೇ ಶ್ರೀವಾಣಿ ಟ್ರಸ್ಟ್ಗೆ ದೇಣಿಗೆ ನೀಡಿದ ಸುಮಾರು 40 ಸಾವಿರ ಮಂದಿ ಭಕ್ತರು ತಿಮ್ಮಪ್ಪನ ದರ್ಶನಕ್ಕೆ ಅರ್ಹರಿದ್ದು, 800 ಟಿಕೆಟ್ ಗಳಲ್ಲಿ ನಿತ್ಯ 300 ಟಿಕೆಟ್ ಗಳನ್ನು ಮೀಸಲು ಇಡಲಿದೆ. ಇವು ಜೂನ್ 10ರ ಬೆಳಗ್ಗೆ 9 ಗಂಟೆಯಿಂದ ಲಭ್ಯವಾಗಲಿದೆ. 2027 ಮಾರ್ಚ್ 31 ವರೆಗೂ ಇದು ಮುಂದುವರಿಯಲಿದೆ.
Tirumala,Chittoor,Andhra Pradesh
May 31, 2026 10:53 AM IST













