Tim David: ದಂಡ, ಬ್ಯಾನ್ ಬೆನ್ನಲ್ಲೇ ಟಿಮ್ ಡೇವಿಡ್​ರ ಮತ್ತೊಂದು ವಿಡಿಯೋ ವೈರಲ್! ಮೈದಾನದ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದ್ರಾ ಆಸ್ಟ್ರೇಲಿಯನ್? | ಕ್ರೀಡಾ ಸುದ್ದಿ | ACTPnews

ಮೈದಾನದಲ್ಲೇ ಸ್ಮೋಕ್ ಮಾಡಿದ ಟಿಮ್ ಡೇವಿಡ್


Last Updated:

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್​​ ನಂತರ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಮೈದಾನದ ಒಳಗೆ ಬಹಿರಂಗವಾಗಿಯೇ ಸಿಗಾರ್ ಸೇದುವ ಮೂಲಕ ಮತ್ತೊಂದು ಐಪಿಎಲ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದಾರೆ.

ಮೈದಾನದಲ್ಲೇ ಸ್ಮೋಕ್ ಮಾಡಿದ ಟಿಮ್ ಡೇವಿಡ್
ಮೈದಾನದಲ್ಲೇ ಸ್ಮೋಕ್ ಮಾಡಿದ ಟಿಮ್ ಡೇವಿಡ್

2026ರ ಐಪಿಎಲ್​​ನಲ್ಲಿ (IPL 2026) ಆರ್​​ಸಿಬಿ (RCB) ಚಾಂಪಿಯನ್​ ಆಗಿ ಹೊರಹೊಮ್ಮಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಭ್ರಮಾಚರಣೆಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆರ್​​​ಸಿಬಿ ಸತತ ಎರಡು ಟ್ರೋಫಿ ಗೆದ್ದ ಆರ್​ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್​​ ನಂತರ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಮೈದಾನದ ಒಳಗೆ ಬಹಿರಂಗವಾಗಿಯೇ ಸಿಗಾರ್ ಸೇದುವ ಮೂಲಕ ಮತ್ತೊಂದು ಐಪಿಎಲ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದಾರೆ.

ಸಿಗಾರ್ ಸೇದುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ಫೈನಲ್ ಗೆಲುವಿನ ನಂತರ ಟಿಮ್ ಡೇವಿಡ್ ಮೈದಾನದಲ್ಲಿ ಸಿಗಾರ್ ಹಚ್ಚಿ ಸಂಭ್ರಮಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪ್ರಶಸ್ತಿ ಗೆದ್ದ ನಂತರ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಸಿಗಾರ್‌ನೊಂದಿಗೆ ಸಂಭ್ರಮಾಚರಣೆ ಮಾಡುವುದು ಸಾಮಾನ್ಯ ಸಂಪ್ರದಾಯವೆಂದು ಪರಿಗಣಿಸಲಾಗಿದೆ. ಅದೇ ರೀತಿ, ಡೇವಿಡ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಾಯಿಯಲ್ಲಿ ಸಿಗಾರ್ ಮತ್ತು ಟ್ರೋಫಿಯೊಂದಿಗೆ ಫಿಲ್ ಸಾಲ್ಟ್‌ನೊಂದಿಗೆ ಪೋಸ್ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊ ವೈರಲ್ ಆದ ನಂತರ, ಐಪಿಎಲ್ ಸಂಘಟಕರು ಡೇವಿಡ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಸಿಗಾರ್​ ಸೇದುವುದಕ್ಕೆ ನಿಯಮವಿಲ್ಲ

ಆದರೆ ಪ್ರಸ್ತುತ ಐಪಿಎಲ್ ನಿಯಮಗಳ ಪ್ರಕಾರ, ಪಂದ್ಯದ ನಂತರ ಆಚರಣೆಗಳು ಮತ್ತು ಪ್ರಸ್ತುತಿ ಕಾರ್ಯಕ್ರಮದ ಸಮಯದಲ್ಲಿ ಸಿಗಾರ್ ಸೇದುವುದನ್ನು ನಿಷೇಧಿಸುವ ಯಾವುದೇ ನಿರ್ದಿಷ್ಟ ನಿಬಂಧನೆಗಳಿಲ್ಲ. ಅಲ್ಲದೆ ಡೇವಿಡ್​ ಪಂದ್ಯದ ಸಮಯದಲ್ಲಿ ಈ ರೀತಿ ಮಾಡಿಲ್ಲ, ಪಂದ್ಯದ ನಂತರ ನಡೆದಿರುವುದರಿಂದ, ಶಿಕ್ಷೆಯ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

1 ಪಂದ್ಯ ನಿಷೇಧಕ್ಕೆ ಒಳಗಾಗಿರುವ ಡೇವಿಡ್

ಆದರೆ, ಈ ಋತುವಿನಲ್ಲಿ ಟಿಮ್ ಡೇವಿಡ್ ವಿವಾದಗಳಿಗೆ ಹೊಸದೇನಲ್ಲ. ಇತ್ತೀಚೆಗೆ ಐಪಿಎಲ್ ಫೈನಲ್ ಸಮಯದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ. ಜೊತೆಗೆ ಅವರ ಪಂದ್ಯ ಶುಲ್ಕದ 50 ಪ್ರತಿಶತ ದಂಡ ವಿಧಿಸಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅಶ್ಲೀಲ ಸನ್ನೆಗಳನ್ನು ಮಾಡಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು. ಮತ್ತೊಂದೆಡೆ, ಈ ಋತುವಿನಲ್ಲಿಯೇ, ಆರ್‌ಆರ್ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ಇ-ಸಿಗರೇಟ್ ಸೇದುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದ ನಂತರ ಅವರ ಪಂದ್ಯ ಶುಲ್ಕದ 25 ಪ್ರತಿಶತ ದಂಡ ವಿಧಿಸಲಾಗಿತ್ತು. ಆದರೆ ಆಗ ಪಂದ್ಯದ ಸಮಯದಲ್ಲಿ ಈ ಘಟನೆ ನಡೆದ ಕಾರಣ ಕ್ರಮ ಕೈಗೊಳ್ಳಲಾಗಿತ್ತು.

ಟಿಮ್ ಡೇವಿಡ್ ಅವರ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕೆಲವರು ಇದನ್ನು ಆಸ್ಟ್ರೇಲಿಯಾದ ಆಚರಣೆಯ ಸಂಸ್ಕೃತಿಯ ಭಾಗವೆಂದು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಇದು ಯುವಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಟೀಕಿಸುತ್ತಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Tim David: ದಂಡ, ಬ್ಯಾನ್ ಬೆನ್ನಲ್ಲೇ ಟಿಮ್ ಡೇವಿಡ್​ರ ಮತ್ತೊಂದು ವಿಡಿಯೋ ವೈರಲ್! ಮೈದಾನದ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದ್ರಾ ಆಸ್ಟ್ರೇಲಿಯನ್?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed