Team India: ಆತ ಭಾರತ ಕ್ರಿಕೆಟ್ ಆಳ್ತಾನೆ! ಏಷ್ಯನ್ ಗೇಮ್ಸ್​​ ಚಿನ್ನ ಗೆದ್ದ ಬೆನ್ನಲ್ಲೇ ಯುವ ಆಟಗಾರನ ಬಗ್ಗೆ ಶ್ರೇಯಸ್ ಅಯ್ಯರ್ ಮಹತ್ವದ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಭಾರತ ತಂಡ (ANI Photo)


Last Updated:



ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ ಶ್ರೇಯಸ್ ಅಯ್ಯರ್, ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೈದಾನದ ಹೊರಗೆ ವೈಭವ್ ತುಂಬಾ ಶಾಂತ ಮತ್ತು ನಾಚಿಕೆ ಸ್ವಭಾವದವರಾಗಿದ್ದರೂ, ಕ್ರೀಸ್‌ಗೆ ಕಾಲಿಟ್ಟ ತಕ್ಷಣವೇ ಅವರು ಎದುರಾಳಿ ಬೌಲರ್‌ಗಳ ಮೇಲೆ ಅಬ್ಬರಿಸುವ ಬಿರುಗಾಳಿಯಂತೆ ಬದಲಾಗುತ್ತಾರೆ ಎಂದು ಹೇಳಿದ್ದಾರೆ.

 ಭಾರತ ತಂಡ (ANI Photo)
ಭಾರತ ತಂಡ (ANI Photo)

ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ (India vs Pakistan) ತಂಡವನ್ನ ಮಣಿಸಿ ಚಿನ್ನದ ಪದಕ ಗೆದ್ದ ಸಂಭ್ರಮದಲ್ಲಿರುವ ಟೀಮ್ ಇಂಡಿಯಾದ ಟಿ20 ತಂಡವು ಈಗ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ತವರಿನ ಟಿ20 ಸರಣಿಯತ್ತ ಗಮನಹರಿಸಿದೆ. ಸರಣಿಗೂ ಮುನ್ನ, ಟೀಮ್ ಇಂಡಿಯಾ ಟಿ20 ನಾಯಕ ಶ್ರೇಯಸ್ ಅಯ್ಯರ್ ತಂಡದ ಬ್ಯಾಟಿಂಗ್ ಶೈಲಿ ಮತ್ತು ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಬಗ್ಗೆ ಪ್ರಮುಖ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮೈದಾನಕ್ಕೆ ಕಾಲಿಡುತ್ತಿದ್ದಂತೆ ಬದಲಾಗುವ ವೈಭವ್

ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ ಶ್ರೇಯಸ್ ಅಯ್ಯರ್, ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೈದಾನದ ಹೊರಗೆ ವೈಭವ್ ತುಂಬಾ ಶಾಂತ ಮತ್ತು ನಾಚಿಕೆ ಸ್ವಭಾವದವರಾಗಿದ್ದರೂ, ಕ್ರೀಸ್‌ಗೆ ಕಾಲಿಟ್ಟ ತಕ್ಷಣವೇ ಅವರು ಎದುರಾಳಿ ಬೌಲರ್‌ಗಳ ಮೇಲೆ ಅಬ್ಬರಿಸುವ ಬಿರುಗಾಳಿಯಂತೆ ಬದಲಾಗುತ್ತಾರೆ ಎಂದು ಅವರು ಗಮನಸೆಳೆದಿದ್ದಾರೆ. “ಮೈದಾನದ ಹೊರಗೆ ನಾವು ವೈಭವ್ ಸೂರ್ಯವಂಶಿ ಅವರೊಂದಿಗೆ ಕ್ರಿಕೆಟ್‌ಗಿಂತ ಹೆಚ್ಚಾಗಿ ಅವರ ಲೈಫ್​ಸ್ಟೈಲ್ ಮತ್ತು ಕುಟುಂಬದ ಬಗ್ಗೆ ಮಾತನಾಡುತ್ತೇವೆ. ಇದು ಅವರು ತಂಡದೊಂದಿಗೆ ಸುಲಭವಾಗಿ ಬೆರೆಯಲು ಸಹಾಯ ಮಾಡುತ್ತದೆ ” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ರೂಲ್ ಮಾಡಲಿದ್ದಾರೆ

ಪ್ರಸ್ತುತ ಭಾರತೀಯ ತಂಡದಲ್ಲಿ ಅನುಭವಿ ಮತ್ತು ವಿಶ್ವಕಪ್ ಗೆದ್ದ ಆರಂಭಿಕ ಆಟಗಾರರಿದ್ದಾರೆ. ಆದರೆ ಸೂಕ್ತ ಸಮಯ ಬಂದಾಗ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸುತ್ತಾರೆ ಮತ್ತು ದೀರ್ಘಕಾಲದವರೆಗೆ ಆ ಪ್ರಾಬಲ್ಯವನ್ನು ಕಾಯ್ದುಕೊಳ್ಳುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಆಟಗಾರರು ಭಯವಿಲ್ಲದೆ ಮುಕ್ತವಾಗಿ ಆಡಬೇಕೆಂದು ಆಶಿಸಿದ ಶ್ರೇಯಸ್, ತಮ್ಮ ಸಂಕೋಚ ಅಥವಾ ಆತಂಕಗಳನ್ನು ತೊರೆದಾಗ ಮಾತ್ರ ಅವರ ನಿಜವಾದ ಸಾಮರ್ಥ್ಯ ಹೊರಹೊಮ್ಮುತ್ತದೆ ಎಂದು ಹೇಳಿದರು. ಸಂಕೋಚ ತೊರೆದರೆ ತಂಡದಲ್ಲಿ ಪ್ರತಿಯೊಬ್ಬರೂ ಪರಸ್ಪರ ಬೆಂಬಲವಾಗಿ ನಿಲ್ಲಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.

ನಾಯಕತ್ವ, ಬ್ಯಾಟಿಂಗ್ ಬಗ್ಗೆ ಅಯ್ಯರ್ ಮುಕ್ತ ಮಾತು

ತಮ್ಮ ನಾಯಕತ್ವದ ಶೈಲಿಯ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್, ಮೈದಾನಕ್ಕೆ ಇಳಿದ ತಕ್ಷಣ ಸರಣಿಯನ್ನು ಗೆಲ್ಲುವುದೇ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಹೇಳಿದರು. ಆರಂಭಿಕ ಪಂದ್ಯಗಳಿಂದಲೇ ಆಡುವ ಹನ್ನೊಂದರ ಬಳಗದಲ್ಲಿ ನಿರಂತರವಾಗಿ ಪ್ರಯೋಗಗಳನ್ನು ಮಾಡುವುದು ಆಟಗಾರರಲ್ಲಿ ಅಸುರಕ್ಷತೆಯ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ಅಂತಹ ವಾತಾವರಣವನ್ನು ತಾನು ಬಯಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡುತ್ತಾ, ಅಯ್ಯರ್ ಪರಿಸ್ಥಿತಿಗೆ ಅನುಗುಣವಾಗಿ ಆಡಲು ಆದ್ಯತೆ ನೀಡುವುದಾಗಿ ಹೇಳಿದರು. ಆರಂಭಿಕ ವಿಕೆಟ್‌ಗಳು ಬಿದ್ದಾಗ ಇನಿಂಗ್ಸ್ ಅನ್ನು ಹೇಗೆ ಸ್ಥಿರಗೊಳಿಸಬೇಕು ಮತ್ತು ನಂತರ ಬೌಲರ್‌ಗಳ ಮೇಲೆ ಹೇಗೆ ಒತ್ತಡ ಹೇರಬೇಕು ಎಂಬುದು ತಮಗೆ ತಿಳಿದಿದೆ ಎಂದಿದ್ದಾರೆ.

ಪಂದ್ಯದ ಹೈಲೈಟ್ಸ್

ಫೈನಲ್ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 211 ರನ್​ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದು ಪಾಕಿಸ್ತಾನ ವಿರುದ್ಧ ಭಾರತ ಸಿಡಿಸಿದ ಅತ್ಯದಿಕ ಮೊತ್ತವಾಗಿತ್ತು. ಅಭಿಷೇಕ್ ಶರ್ಮಾ (61) ಹಾಗೂ ತಿಲಕ್ ವರ್ಮಾ ಅಜೇಯ (51) ಅರ್ಧಶತಕ ಸಿಡಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾಗಿದ್ದರು. ಪಾಕಿಸ್ತಾನ ಹಸನ್ ನವಾಜ್​​ರ 96 ರನ್​ಗಳ ಹೊರತಾಗಿಯೂ 19 ರನ್​ಗಳ ಸೋಲು ಕಂಡಿತು. ಈ ಗೆಲವಿನೊಂದಿಗೆ ಭಾರತ ಸತತ 2ನೇ ಬಾರಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed