Team India: ಸೂರ್ಯಕುಮಾರ್​​​​​ರನ್ನ ಭಾರತ ತಂಡದಿಂದ ಕೈಬಿಟ್ಟಿದ್ದೇಕೆ? ಕೊನೆಗೂ ಕಾರಣ ಬಹಿರಂಗಪಡಿಸಿದ ಅಜಿತ್ ಅಗರ್ಕರ್​ | ಕ್ರೀಡಾ ಸುದ್ದಿ | ACTPnews

ಸೂರ್ಯಕುಮಾರ್ ಯಾದವ್


Last Updated:


ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರನ್ನು ಹೊಸ ಟಿ20 ನಾಯಕನನ್ನಾಗಿ ನೇಮಿಸಿತು. ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಿತು. ಮುಂಬರುವ ಟಿ20 ವಿಶ್ವಕಪ್‌ನ ಯೋಜನೆಯ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೂರ್ಯಕುಮಾರ್​ ಮಾತ್ರವಲ್ಲ, ಫಿಟ್​ನೆಸ್​ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯರನ್ನೂ ಕೂಡ ಆಯ್ಕೆದಾರರು ಈ ಎರಡೂ ಪ್ರವಾಸಗಳಿಂದ ಕಡೆಗಣಿಸಿದ್ದಾರೆ.

ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಇಂಗ್ಲೆಂಡ್ ಹಾಗೂ ಐರ್ಲೆಂಡ್ (England and Ireland) ಪ್ರವಾಸಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಬಹುತೇಕ ನಿರೀಕ್ಷೆಯಂತೆ, ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವದಿಂದ ಮಾತ್ರವಲ್ಲ ತಂಡದಿಂದಲೂ ಬಿಡಲಾಗಿದೆ. ಅವರ ಕಳಪೆ ಫಾರ್ಮ್ ಕಾರಣ ಭಾರತೀಯ ಆಯ್ಕೆ ಸಮಿತಿ ಅವರನ್ನು ಟಿ20 ನಾಯಕತ್ವದ (T20 Captaincy) ಕರ್ತವ್ಯದಿಂದ ತೆಗೆದುಹಾಕಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2026 ರಲ್ಲಿ ಅವರು ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರೂ, ಅವರಿಗೆ ಮತ್ತೊಂದು ಅವಕಾಶ ನೀಡುವ ಕರುಣೆ ತೋರಿಲ್ಲ. ಶನಿವಾರ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಜೊತೆಗೆ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ಟಿ20 ತಂಡಗಳನ್ನು ಘೋಷಿಸಿದೆ. ಈ ತಂಡದಲ್ಲಿ ಹಲವು ಬದಲಾವಣೆಗಳು ಸಂಭವಿಸಿವೆ.

ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರನ್ನು ಹೊಸ ಟಿ20 ನಾಯಕನನ್ನಾಗಿ ನೇಮಿಸಿತು. ಯುವ ಆಟಗಾರ ತಿಲಕ್ ವರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಿತು. ಮುಂಬರುವ ಟಿ20 ವಿಶ್ವಕಪ್‌ನ ಯೋಜನೆಯ ಭಾಗವಾಗಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಸೂರ್ಯಕುಮಾರ್​ ಮಾತ್ರವಲ್ಲ, ಫಿಟ್​ನೆಸ್​ ಸಮಸ್ಯೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯರನ್ನೂ ಕೂಡ ಆಯ್ಕೆದಾರರು ಈ ಎರಡೂ ಪ್ರವಾಸಗಳಿಂದ ಕಡೆಗಣಿಸಿದ್ದಾರೆ.

ಫಾರ್ಮ್ ಸಮಸ್ಯೆಯೇ ಕಾರಣ

ಸೂರ್ಯಕುಮಾರ್ ಯಾದವ್ ಅವರನ್ನು ಕೈಬಿಡಲು ಕಾರಣವನ್ನು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ. ಯಾದವ್ ಉತ್ತಮ ಫಾರ್ಮ್‌ನಲ್ಲಿಲ್ಲ ಮತ್ತು ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ತಂಡದ ಭವಿಷ್ಯಕ್ಕಾಗಿ ಇಂತಹ ಕಠಿಣ ನಿರ್ಧಾರಗಳು ಅನಿವಾರ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಟಿ20 ನಾಯಕತ್ವಕ್ಕೆ ಸಂಪೂರ್ಣವಾಗಿ ಅರ್ಹರು ಎಂದು ಅಗರ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾದರು, ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಕೇವಲ 242 ರನ್ ಗಳಿಸಿದರು. ಐಪಿಎಲ್ 2026 ರ ಋತುವಿನಲ್ಲಿಯೂ ಸೂರ್ಯಕುಮಾರ್​ ನಿರಾಶೆಯನ್ನುಂಟುಮಾಡಿದ್ದರು. ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಅವರು 13 ಪಂದ್ಯಗಳಲ್ಲಿ 20.76 ರ ಸರಾಸರಿಯಲ್ಲಿ ಕೇವಲ 270 ರನ್ ಗಳಿಸಿದರು. ಅವರ ಫಾರ್ಮ್ ಕೊರತೆಯು ಮುಂಬೈ ತಂಡ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಲು ಪ್ರಮುಖ ಕಾರಣವಾಯಿತು.

ಅಯ್ಯರ್ ಮೇಲೆ ಅಗಾಧ ವಿಶ್ವಾಸ

ಇದರ ಜೊತೆಗೆ, ಶ್ರೇಯಸ್ ಅಯ್ಯರ್ ಒಬ್ಬ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಐಪಿಎಲ್ 2025 ರಲ್ಲಿ ಪಂಜಾಬ್ ಪರ 604 ರನ್ ಗಳಿಸಿದ್ದ ಅಯ್ಯರ್ 2026ರ ಋತುವಿನಲ್ಲಿ 498 ರನ್ ಗಳಿಸಿದ್ದರು. ಅವರು ಐಪಿಎಲ್ 2024ರ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರಶಸ್ತಿಗೆ ಮುನ್ನಡೆಸಿದ್ದರು. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ಯುವಲ್ಲಿ ಅಯ್ಯರ್​ ಪ್ರಮುಖ ಪಾತ್ರ ವಹಿಸಿದ್ದರು.

ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಸಾಮರ್ಥ್ಯದ ಮೇಲೆ ಆಯ್ಕೆದಾರರು ನಂಬಿಕೆ ಇಟ್ಟಿದ್ದಾರೆ ಎಂದು ಅಗರ್ಕರ್ ಹೇಳಿದ್ದಾರೆ. ನಾಯಕನಾಗಿ ಅಯ್ಯರ್ ಅವರನ್ನು ನೇಮಿಸುವ ನಿರ್ಧಾರವನ್ನು ಅತ್ಯುತ್ತಮವಾದದ್ದು ಎಂದು ಅವರು ವಿವರಿಸಿದ್ದಾರೆ. ನಾಯಕತ್ವ ಪಾತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಸೂರ್ಯನ ಬದಲಿಗೆ ಶ್ರೇಯಸ್ ಅಯ್ಯರ್ ಆಗಮನವು ಭಾರತೀಯ ಟಿ 20 ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ವಿಪರ್ಯಾಸವೆಂದರೆ, ಸೂರ್ಯಕುಮಾರ್ ಯಾದವ್ ಅವರ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಅವರನ್ನು ಕಳೆದ ಎರಡು ವರ್ಷಗಳಿಂದ ಟಿ 20 ಕ್ರಿಕೆಟ್‌ನಿಂದ ಹೊರಗಿಡಲಾಗಿತ್ತು. ಇದೀಗ ಅಯ್ಯರ್ ಸೂರ್ಯಕುಮಾರ್​ ಸ್ಥಾನಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ.

ಆಯ್ಕೆ ಸಮಿತಿ ನಿರ್ಧಾರದ ವಿರುದ್ಧ ಪರ-ವಿರುದ್ಧ ಟೀಕೆ

ಆಯ್ಕೆ ಸಮಿತಿಯ ಈ ದಿಢೀರ್ ನಿರ್ಧಾರದ ವಿರುದ್ಧ ಪರ ವಿರೋಧ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು ಈ ನಡೆಯನ್ನು ಸ್ವಾಗತಿಸಿದರೆ, ಕೆಲವರು ಇದನ್ನು ಟೀಕಿಸುತ್ತಾರೆ. ಸೂರ್ಯಕುಮಾರ್ ಯಾದವ್ ಅವರಿಗೆ ಹೆಚ್ಚಿನ ಸಮಯ ನೀಡಬೇಕಿತ್ತು ಮತ್ತು ಅವರನ್ನು ಕೈಬಿಡುವುದು ತಪ್ಪು ಸಂಕೇತವನ್ನು ಕಳುಹಿಸುತ್ತದೆ ಎಂದು ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ವಿಶ್ವಕಪ್ ವಿಜೇತ ಆಟಗಾರನನ್ನು ಕೈಬಿಡುವುದು ಅನ್ಯಾಯ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ, ಕನಿಷ್ಠ ಪಕ್ಷ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಿತ್ತು ಎಂದು ತಿಳಿಸಿದ್ದಾರೆ. ಏತನ್ಮಧ್ಯೆ, ಸೂರ್ಯ ಬ್ಯಾಟಿಂಗ್‌ನಲ್ಲಿ ವಿಫಲವಾದರೂ, ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಫಾರ್ಮ್‌ನಲ್ಲಿಲ್ಲದಿದ್ದರೂ ಇಬ್ಬರಿಗೂ ಅವಕಾಶಗಳನ್ನು ನೀಡಲಾಗಿತ್ತು ಎಂದು ಆಯ್ಕೆ ಸಮಿತಿ ವಿರುದ್ಧ ಕಿಡಿಕಾರುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed