Last Updated:
ನಟನಿಗೆ ಚಳ್ಳೆ ಹಣ್ಣು ತಿನ್ನಿಸಿದಳಾ ಎರಡು ಮಕ್ಕಳ ತಾಯಿ? ಅವಳನ್ನು ನಂಬಿ ಹೆಂಡತಿಗೆ ಡಿವೋರ್ಸ್ ಕೊಟ್ಟನಾ? ನಾಳೆ ನಾಡಿದ್ದು ಅಂತ ಡ್ರಾಮಾ ಮಾಡ್ತಿದ್ದೋಳು ಸಿಕ್ಕಿ ಬಿದ್ದಿದ್ದು ಹೇಗೆ?
ಬೆಂಗಳೂರು(ಸೆ. 17): ಆಂಟಿ ಹಿಂದೆ ಬಿದ್ದು ಪೇಚಿಗೆ ಸಿಲುಕಿದ ಟ್ಯಾಟೂ ಆರ್ಟಿಸ್ಟ್ ಕಮ್ ನಟ ಈಗ ಸುದ್ದಿಯಾಗಿರುವ ಘಟನೆ ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ ಟ್ಯಾಟೂ ಆರ್ಟಿಸ್ಟ್ಗೆ ಮಹಿಳೆ ದೋಖಾ ಮಾಡಿರುವುದು ರಿವೀಲ್ ಆಗಿದೆ.
ಲಕ್ಷಾಂತರ ರೂಪಾಯಿ ಹಣ ಪಡೆದು ಅದನ್ನು ವಾಪಸ್ ನೀಡದೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಸದ್ಯ ನಟ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ದಾನೆ.
ಪರಪುರುಷನ ಜೊತೆ ವಿಡಿಯೋ ಕಾಲ್ ನಲ್ಲಿದ್ದಾಗ ರೆಡ್ ಹ್ಯಾಂಡಾಗಿ ಲಾಕ್ ಆಗಿದ್ದು ಆ ನಂತರ ಜಗಳ ನಡೆದಿದೆ. ಮಹಿಳೆಯನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿದ ಟ್ಯಾಟೂ ಆರ್ಟಿಸ್ಟ್ ಮೇಲೆ ರಾಡಿನಿಂದ ಹಲ್ಲೆ ಆರೋಪವೂ ಕೇಳಿ ಬಂದಿದೆ.
ಘೋಸ್ಟ್ ಟ್ಯಾಟೂ ಆರ್ಟಿಸ್ಟ್ ಖ್ಯಾತಿಯ ಅರ್ಜುನ್ ದೂರು ನೀಡಿದ ವ್ಯಕ್ತಿ. ಕಳೆದ ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋ ದಲ್ಲಿ ಮಹಿಳೆ ಪರಿಚಯವಾಗಿದ್ದಳು. ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ಗಂಡ ಕಾರಣಾಂತರಗಳಿಂದ ಮೃತಪಟ್ಟಿದ್ದಾಗಿ ಪರಿಚಯ ಮಾಡಿಕೊಂಡಿದ್ದಳು.
ಪರಿಚಯ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಅರ್ಜುನ್ ಗೆ ಸಹ ಪತ್ನಿಯೊಂದಿಗೆ ವಿಚ್ಛೇದನ ಆಗಿತ್ತು. ಈ ವೇಳೆ ಅರ್ಜುನ್ಗೆ ಮದುವೆಯಾಗುವುದಾಗಿ ಹೇಳಿದ್ದ ಮಹಿಳೆಗೆ ನಂಬಿ ಹಲವು ಬಾರಿ ಅರ್ಜುನ್ ಹಣ ಕೊಟ್ಟಿದ್ದ.
ಆದರೆ ನಾಳೆ, ನಾಡಿದ್ದು ಅಂತ ಮಹಿಳೆ ಕಳೆದ ಒಂದು ವರ್ಷದಿಂದ ಮದುವೆ ಮುಂದೂಡಿದ್ದಳು. ಇದೇ ತಿಂಗಳು 2 ನೇ ತಾರೀಕು ಅರ್ಜುನ್ ಮಹಿಳೆಗೆ ಕರೆ ಮಾಡಿದ್ದ. ಕರೆ ಸ್ವೀಕರಿಸದ ಹಿನ್ನಲೆ ಮನೆ ಬಳಿ ತೆರಳಿದ್ದ ಅರ್ಜುನ್ ಶಾಕ್ ಆಗಿದ್ದಾನೆ. ಈ ವೇಳೆ ಪರಪುರುಷನ ಜೊತೆ ಅಶ್ಲೀಲವಾಗಿ ಮಾತನಾಡುತ್ತಿದ್ದನ್ನು ಕಂಡಿದ್ದ.
ಪ್ರಶ್ನೆ ಮಾಡಿದಾಗ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಈ ವೇಳೆ ಕಬ್ಬಿಣದ ರಾಡಿನಿಂದ ಅರ್ಜುನ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಾದೇಶ್ .ಸಿ ಕ್ರೈಂ ಬ್ಯೂರೋ ನ್ಯೂಸ್ 18 ಕನ್ನಡ ಬೆಂಗಳೂರು














