Swiss Airlines: ಬೆಂಗಳೂರಿಂದ ಸ್ವಿಡ್ಜರ್ಲೆಂಡ್​ಗೆ ಡೈರೆಕ್ಟ್ ಫ್ಲೈಟ್ ಶುರು! ಯಾವ್ಯಾವ ದಿನ, ಎಷ್ಟು ಗಂಟೆ ಪ್ರಯಾಣ? ಫುಲ್ ಡೀಟೆಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ನೇರ ವಿಮಾನ


Last Updated:

ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ ಈ ಐಷಾರಾಮಿ ಸೇವೆ ಲಭ್ಯವಿರಲಿದೆ.

ನೇರ ವಿಮಾನ
ನೇರ ವಿಮಾನ

ಬೆಂಗಳೂರು: ವಿದೇಶ (Abroad) ಪ್ರಯಾಣ ಮಾಡುವ ಹಂಬಲದಲ್ಲಿರುವ ದಕ್ಷಿಣ ಭಾರತದ ಜನರಿಗೆ, ಅದರಲ್ಲೂ ವಿಶೇಷವಾಗಿ ಸಿಲಿಕಾನ್ ಸಿಟಿಯ ಐಟಿ ವೃತ್ತಿಪರರು ಮತ್ತು ಪ್ರವಾಸಿಗರಿಗೆ ಅತ್ಯಂತ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೀವು ಇನ್ಮುಂದೆ ಕನೆಕ್ಟಿಂಗ್ ಫ್ಲೈಟ್‍ಗಳಿಗಾಗಿ (Flight) ಗಂಟೆಗಟ್ಟಲೇ ಕಾಯುವ ಕಿರಿಕಿರಿ ಇಲ್ಲದೆ, ಬೆಂಗಳೂರಿನಿಂದಲೇ (Bengaluru) ನೇರವಾಗಿ ಜ್ಯೂರಿಕ್‍ಗೆ (Zurich) ಹಾರಬಹುದು. ಹೌದು, ಪ್ರಖ್ಯಾತ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (SWISS) ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಭರ್ಜರಿ ನೇರ ವಿಮಾನ ಸೇವೆಯನ್ನು ಘೋಷಿಸಿದೆ.

ಐಷಾರಾಮಿ ಸೇವೆ ಲಭ್ಯ

ಬರುವ 2026ರ ಅಕ್ಟೋಬರ್ ನಿಂದ ವಾರಕ್ಕೆ ಬರೋಬ್ಬರಿ ಐದು ದಿನ, 11.5 ರಿಂದ 15 ಗಂಟೆಗಳ ಕಾಲ ಈ ಐಷಾರಾಮಿ ಸೇವೆ ಲಭ್ಯವಿರಲಿದೆ.  ಇದರಿಂದಾಗಿ ನೀವು ಜ್ಯೂರಿಕ್ ತಲುಪುವುದು ಮಾತ್ರವಲ್ಲದೇ, ಲುಫ್ತಾನ್ಸಾ ಸಮೂಹದ ಬೃಹತ್ ನೆಟ್‍ವರ್ಕ್ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಪ್ರಮುಖ ನಗರಗಳಿಗೆ ಅತ್ಯಂತ ಸುಲಭವಾಗಿ ಪ್ರಯಾಣಿಸಬಹುದು.

ಒಂದೇ ಟಿಕೆಟ್, ಇಡೀ ವಿಶ್ವವೇ ನಿಮ್ಮ ಕೈಯಲ್ಲಿ

ಕೇವಲ ಬೆಂಗಳೂರಿನವರಿಗೆ ಮಾತ್ರವಲ್ಲ, ಕರ್ನಾಟಕದ ಜನರಿಗೂ ಇದು ಲಕ್ಕಿ ಚಾನ್ಸ್. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ಸಂಪರ್ಕ ಜಾಲವನ್ನು ಬಳಸಿಕೊಂಡು, ನೀವು ಒಂದೇ ಒಂದು ಟಿಕೆಟ್ ಬುಕ್ ಮಾಡಿ ನಿಮ್ಮ ಊರಿನಿಂದ ಜ್ಯೂರಿಕ್‍ಗೆ ತಡೆರಹಿತ ಪ್ರಯಾಣ ಬೆಳೆಸಬಹುದು ಎಂದು ಕೆಂಪೇಗೌಡ ವಿಮಾನ ನಿಲ್ದಾಣದ ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ತಿಳಿಸಿದ್ದಾರೆ.

ಏನೆಲ್ಲಾ ವಿಶೇಷತೆ ಇರಲಿದೆ?

ಲುಫ್ತಾನ್ಸಾ ಗ್ರೂಪ್‍ನ ಈ ಹೊಸ ಸೇವೆಯಲ್ಲಿ ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಎಂಬ ಮೂರು ವಿಭಾಗಗಳಿರುತ್ತವೆ. ಪ್ರೀಮಿಯಂ ಲೌಂಜ್‍ಗಳು ಮತ್ತು ಜಗತ್ಪ್ರಸಿದ್ಧ ಸ್ವಿಸ್ ಆಹಾರ ಪದ್ಧತಿಯ ರುಚಿಯನ್ನು ಸವಿಯುತ್ತಾ ನೀವು ನಿರಾಳವಾಗಿ ಪ್ರಯಾಣಿಸಬಹುದು. 2026ರ ಚಳಿಗಾಲದ ವೇಳೆಗೆ ಭಾರತದಿಂದ ವಾರಕ್ಕೆ 70ಕ್ಕೂ ಹೆಚ್ಚು ವಿಮಾನಗಳನ್ನು ಮುನ್ನಡೆಸಲು ಲುಫ್ತಾನ್ಸಾ ಪ್ಲಾನ್ ಮಾಡಿದೆ.

ಬುಕ್ಕಿಂಗ್ ಈಗಲೇ ಓಪನ್ ಆಗಿದೆ

ನೀವೇನಾದರೂ ಯುರೋಪ್ ಪ್ರವಾಸದ ಪ್ಲಾನ್‍ನಲ್ಲಿದ್ದರೆ ತಡ ಮಾಡಬೇಡಿ. ಈ ಅದ್ಭುತ ಮಾರ್ಗದ ವಿಮಾನ ಟಿಕೆಟ್‍ಗಳು ಇಂದಿನಿಂದಲೇ swiss.com ವೆಬ್‍ಸೈಟ್ ಹಾಗೂ ನಿಮ್ಮ ಹತ್ತಿರದ ಟ್ರಾವೆಲ್ ಏಜೆನ್ಸಿಗಳಲ್ಲಿ ಬುಕ್ಕಿಂಗ್‍ಗೆ ಮುಕ್ತವಾಗಿವೆ. ಇನ್ನೇಕೆ ತಡ? ಈಗಲೇ ನಿಮ್ಮ ಸೀಟ್ ಕನ್ಫರ್ಮ್ ಮಾಡಿಕೊಳ್ಳಿ.

ಲುಫ್ತಾನ್ಸಾ ಗ್ರೂಪ್

ಲುಫ್ತಾನ್ಸಾ ಗ್ರೂಪ್ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ವಿಮಾನಯಾನ ಸಮೂಹವಾಗಿದೆ. ವಿಶ್ವದ 164 ದೇಶಗಳ 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿರುವ ಈ ಸಂಸ್ಥೆ, 2025ರಲ್ಲಿ 13.5 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ ಹಾಗೂ 39.6 ಬಿಲಿಯನ್ ಯುರೋ ಆದಾಯ ದಾಖಲಿಸಿದೆ. ಪ್ರಯಾಣಿಕರ ವಿಮಾನ ಸೇವೆಯು ಸಂಸ್ಥೆಯ ಪ್ರಮುಖ ವ್ಯವಹಾರ ವಿಭಾಗವಾಗಿದ್ದು, ಲಾಜಿಸ್ಟಿಕ್ಸ್ ಹಾಗೂ ವಿಮಾನ ನಿರ್ವಹಣೆ, ದುರಸ್ತಿ ಮತ್ತು ಮರುಪರಿಶೀಲನೆ (ಎಂಆರ್‌ಒ) ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಸ್ಥೆ ಪ್ರಮುಖ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಲುಫ್ತಾನ್ಸಾ ಏವಿಯೇಷನ್ ಟ್ರೈನಿಂಗ್ ಸೇರಿದಂತೆ ಇತರ ಘಟಕಗಳು ಸಂಸ್ಥೆಯ ಪ್ರಮುಖ ಅಂಗಗಳಾಗಿವೆ. ಸಂಸ್ಥೆಯ ಎಲ್ಲಾ ಏರ್‌ಲೈನ್‌ಗಳು ಮತ್ತು ವ್ಯವಹಾರ ವಿಭಾಗಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports