Last Updated:
ಸ್ಯಾಕ್‌ನಿಲ್ಕ್ ಮಾಹಿತಿಯ ಪ್ರಕಾರ, ವಿಶ್ವನಾಥ್ ಅಂಡ್ ಸನ್ಸ್ ಭಾರತದಲ್ಲಿ ಮೊದಲ ದಿನ ಸುಮಾರು 15.15 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಚಿತ್ರದ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ ಸುಮಾರು 17.51 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಕಾಲಿವುಡ್ ಸ್ಟಾರ್ ಸೂರ್ಯ (Suriya) ಅಭಿನಯದ ವಿಶ್ವನಾಥ್ ಅಂಡ್ ಸನ್ಸ್ (Vishwanath & Sons) ಸಿನಿಮಾ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಆರಂಭ ಪಡೆದುಕೊಂಡಿದೆ. ಆರ್.ಜೆ. ಬಾಲಾಜಿ (R.J. Balaji) ನಿರ್ದೇಶನದ ಕರುಪ್ಪು ಸಿನಿಮಾದ ಯಶಸ್ಸಿನ ಬಳಿಕ ಸೂರ್ಯ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದ್ದರೂ, ಸೂರ್ಯ ನಟನೆಯ ಕರುಪ್ಪು ಸಿನಿಮಾದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಮಾತ್ರ ವಿಶ್ವನಾಥ್ ಅಂಡ್ ಸನ್ಸ್ ಮುರಿಯಲು ಸಾಧ್ಯವಾಗಿಲ್ಲ.














