Sudeep Movie: ಕಿಚ್ಚನ ಫ್ಯಾನ್ಸ್​ಗೆ ಗುಡ್​​ನ್ಯೂಸ್, ಬಿಲ್ಲ ರಂಗ ಬಾಷಾ ಶೂಟಿಂಗ್ ಶುರು | | ACTPnews

ಕಾಯುವಿಕೆ ಮುಗೀತು, ಯುದ್ಧ ಆರಂಭವಾಯ್ತು!


Last Updated:

ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಶೂಟಿಂಗ್ ನಡೀತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕಾಯುವಿಕೆ ಮುಗೀತು, ಯುದ್ಧ ಆರಂಭವಾಯ್ತು!
ಕಾಯುವಿಕೆ ಮುಗೀತು, ಯುದ್ಧ ಆರಂಭವಾಯ್ತು!

ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರ (Billa Ranga Baasha Movie) ನಿಂತೆ ಹೋಯಿತು ಅಂದವರೇ ಹೆಚ್ಚು. ಬಹು ಕೋಟಿ ವೆಚ್ಚದ ಈ ಸಿನಿಮಾ ಅಷ್ಟು ಸುಲಭಕ್ಕೆ ಮತ್ತು ಅಷ್ಟು ಬೇಗ ಮುಗಿಯೋದಿಲ್ಲ ಅನ್ನೋರು ಇದ್ದಾರೆ. ಅದರ ನಡುವೆ ಈ ಸಿನಿಮಾದ ಶೂಟಿಂಗ್ (Movie Shooting) ಬ್ರೇಕ್ ಆಗಿದೆ. ಆದರೆ, ಹೊಸ ವಿಷಯವನ್ನ ಸ್ವತಃ ಸುದೀಪ್ ಕೊಟ್ಟಿದ್ದಾರೆ. ಆದಷ್ಟು ಬೇಗ ಬಿಲ್ಲ ರಂಗ ಬಾಷಾ ಚಿತ್ರ ಶೂಟಿಂಗ್ ಶುರು (Billa Ranga Baasha Shooting Begins) ಆಗುತ್ತದೆ ಅಂತ ಹೇಳಿದ್ದರು. ಆ ಟೈಮ್ ಬಂದಿದೆ. ಕಾಯುವಿಕೆ ಮುಗೀತು, ಯುದ್ಧ ಆರಂಭವಾಯಿತು ಅಂತ ಡೈರೆಕ್ಟರ್ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ. ಈ ಸಿನಿಮಾದ ಈಗೀನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕಾಯಿವಿಕೆ ಮುಗೀತು

ಈ ಒಂದು ಮಾತನ್ನ ಡೈರೆಕ್ಟರ್ ಅನೂಪ್ ಭಂಡಾರಿ ಬರೆದುಕೊಂಡಿದ್ದಾರೆ. ಜೂನ್-26 ರಿಂದ ಚಿತ್ರದ ಶೂಟಿಂಗ್ ಶುರು ಆಗುತ್ತದೆ. ಇಲ್ಲಿವರೆಗೂ ನೀವು ಸಾಕಷ್ಟು ವೇಟ್ ಮಾಡಿದ್ದೀರಾ. ಆದರೆ, ಇದೀಗ ಆ ಕಾಯುವಿಕೆ ಮುಗಿದಿದೆ. ಯುದ್ಧ ಶುರು ಆಗಿದೆ ಅಂತಲೇ ಬರೆದುಕೊಂಡಿದ್ದಾರೆ.

Kichcha Sudeepa Anup Bhandari Billa Ranga Baasha Shooting Latest Updates

ಯುದ್ಧ ಶುರು…

(ಚಿತ್ರ ಕೃಪೆ: ಅನೂಪ್ ಭಂಡಾರಿ ಇನ್‌ಸ್ಟಾಗ್ರಾಮ್)

ಇದನ್ನ ಅವರ ಮಾತಿನಲ್ಲಿಯೇ ಹೇಳೋದಾದರೆ, ಅದು ಈ ರೀತಿ ಇದೆ ಓದಿ; “The wait ends…The war begins! ನಿಮ್ಮ ಪ್ರೀತಿ ಕಡಿಮೆಯಾಗಲಿಲ್ಲ, ನಮ್ಮ ನಂಬಿಕೆ ಕುಗ್ಗಲಿಲ್ಲ. ಧನ್ಯವಾದಗಳು!”

ಎಲ್ಲಿ ಸಿನಿಮಾ ಶೂಟಿಂಗ್

ಈ ಚಿತ್ರದ ಶೂಟಿಂಗ್ ಎಲ್ಲಿ ನಡೀತಿದೆ ಅನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಪೂರ್ತಿ ಆಗಿ ಸಿಗೋದಿಲ್ಲ, ಬೆಂಗಳೂರಿನ ಕನಕಪುರ ರೋಡ್ ಅನ್ನುವ ಮಾಹಿತಿ ಮಾತ್ರ ಸಿಗುತ್ತದೆ.

ಈ ಹಂತದಲ್ಲಿ ಏನು ಚಿತ್ರೀಕರಣ ಮಾಡ್ತಿದ್ದಾರೆ ಅನ್ನುವ ಪ್ರಶ್ನೆಗೂ ಉತ್ತರ ಸಿಗೋದಿಲ್ಲ. ಆದರೆ, ಅನೂಪ್ ಭಂಡಾರಿ ಅವರ ಪೋಸ್ಟ್‌ ಅನ್ನ ಗಮನಿಸಿದ್ರೆ ಒಂದು ವಿಷಯ ತಿಳಿಯುತ್ತದೆ.

ಯುದ್ಧ ಶುರು…

ಈ ಒಂದು ಮಾತು ಎರಡು ಅರ್ಥ ಕೊಡುತ್ತದೆ. ಒಂದು ದೊಡ್ಡ ಪ್ರಾಜೆಕ್ಟ್‌ ಅನ್ನೋದು ಅಷ್ಟು ಸುಲಭವಲ್ಲ. ಅದು ಒಂದು ರೀತಿ ಯುದ್ಧ ಗೆದ್ದ ಹಾಗೇನೆ ಬಿಡಿ ಅನ್ನುವ ಅರ್ಥನೂ ಬರುತ್ತದೆ.

Kichcha Sudeepa Anup Bhandari Billa Ranga Baasha Shooting Latest Updates

ಅನೂಪ್ ಕನಸಿನ ಪ್ರಾಜೆಕ್ಟ್

ಇನ್ನೂ ಒಂದು ಅರ್ಥ ಏನು ಗೊತ್ತಾ? ಬಹುಶಃ ಈ ಹಂತದಲ್ಲಿ ಯುದ್ಧದ ದೃಶ್ಯಗಳನ್ನ ತೆಗೆಯುತ್ತಿದ್ದಾರೆ ಅಂತಲೂ ಗೆಸ್ ಮಾಡಬಹುದು. ಆದರೆ, ಈ ಬಗ್ಗೆ ಯಾರು ಇನ್ನು ಏನೂ ಹೇಳಿಕೊಂಡಿಲ್ಲ ನೋಡಿ.

ತ್ರಿ ಪಾತ್ರದಲ್ಲಿ ಕಿಚ್ಚ

ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಮೂರು ಪಾತ್ರ ಮಾಡಿರಬಹುದು ಅನ್ನುವ ಅಂದಾಜಿದೆ. ಬಿಲ್ಲ ರಂಗ ಬಾಷಾ ಅಂತ ಮೂರು ಮೂರು ಹೆಸರಿವೆ. ಈ ಮೂರು ಹೆಸರಿನ ಪಾತ್ರವನ್ನ ಸುದೀಪ್ ಮಾಡ್ತಿದ್ದಾರಾ ಅನ್ನುವ ಪ್ರಶ್ನೆನೂ ಇದೆ.
ಅನೂಪ್ ಕನಸಿನ ಪ್ರಾಜೆಕ್ಟ್

ಅನೂಪ್ ಭಂಡಾರಿ ಈ ಚಿತ್ರಕ್ಕಾಗಿಯೇ ಸಾಕಷ್ಟು ವರ್ಕ್ ಮಾಡಿದ್ದಾರೆ. ಸ್ಕ್ರಿಪ್ಟ್ ಮೇಲೆ ಐದಾರು ವರ್ಷವೇ ಕೆಲಸ ಮಾಡಿದ್ದಾರೆ. ಸುದೀಪ್ ಅವರ ಮಾರ್ಕ್ ಮತ್ತು ಮ್ಯಾಕ್ಸ್ ಬರುವ ಮುಂಚೇನೆ ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದಾರೆ.

ವಿಕ್ರಾಂತ್ ರೋಣ ಚಿತ್ರದಲ್ಲಿ ಒಂದಷ್ಟು ಪ್ರಯೋಗಳನ್ನ ಮಾಡಿದ್ದರು. ಕಾರಣ, ಈ ಒಂದು ಬಿಲ್ಲ ರಂಗ ಬಾಷಾ ಚಿತ್ರಕ್ಕಾಗಿಯೇ ವಿಕ್ರಾಂತ್ ರೋಣ ಶುರು ಮಾಡಿದ್ದರು ಅನ್ನುವ ಮಾತು ಇದೆ. ವಿಕ್ರಾಂತ್ ರೋಣ ಸಕ್ಸಸ್ ಆದ್ಮೇಲೇನೆ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಕೈಹಾಕಿದರು ಅನ್ನುವ ಮಾತುಗಳೂ ಇವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed