Last Updated:
ಬಿಲ್ಲ ರಂಗ ಬಾಷಾ ಚಿತ್ರದ ಶೂಟಿಂಗ್ ಶುರು ಆಗಿದೆ. ಬೆಂಗಳೂರಿನಲ್ಲಿಯೇ ಈ ಚಿತ್ರದ ಶೂಟಿಂಗ್ ನಡೀತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರ (Billa Ranga Baasha Movie) ನಿಂತೆ ಹೋಯಿತು ಅಂದವರೇ ಹೆಚ್ಚು. ಬಹು ಕೋಟಿ ವೆಚ್ಚದ ಈ ಸಿನಿಮಾ ಅಷ್ಟು ಸುಲಭಕ್ಕೆ ಮತ್ತು ಅಷ್ಟು ಬೇಗ ಮುಗಿಯೋದಿಲ್ಲ ಅನ್ನೋರು ಇದ್ದಾರೆ. ಅದರ ನಡುವೆ ಈ ಸಿನಿಮಾದ ಶೂಟಿಂಗ್ (Movie Shooting) ಬ್ರೇಕ್ ಆಗಿದೆ. ಆದರೆ, ಹೊಸ ವಿಷಯವನ್ನ ಸ್ವತಃ ಸುದೀಪ್ ಕೊಟ್ಟಿದ್ದಾರೆ. ಆದಷ್ಟು ಬೇಗ ಬಿಲ್ಲ ರಂಗ ಬಾಷಾ ಚಿತ್ರ ಶೂಟಿಂಗ್ ಶುರು (Billa Ranga Baasha Shooting Begins) ಆಗುತ್ತದೆ ಅಂತ ಹೇಳಿದ್ದರು. ಆ ಟೈಮ್ ಬಂದಿದೆ. ಕಾಯುವಿಕೆ ಮುಗೀತು, ಯುದ್ಧ ಆರಂಭವಾಯಿತು ಅಂತ ಡೈರೆಕ್ಟರ್ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ. ಈ ಸಿನಿಮಾದ ಈಗೀನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಈ ಒಂದು ಮಾತನ್ನ ಡೈರೆಕ್ಟರ್ ಅನೂಪ್ ಭಂಡಾರಿ ಬರೆದುಕೊಂಡಿದ್ದಾರೆ. ಜೂನ್-26 ರಿಂದ ಚಿತ್ರದ ಶೂಟಿಂಗ್ ಶುರು ಆಗುತ್ತದೆ. ಇಲ್ಲಿವರೆಗೂ ನೀವು ಸಾಕಷ್ಟು ವೇಟ್ ಮಾಡಿದ್ದೀರಾ. ಆದರೆ, ಇದೀಗ ಆ ಕಾಯುವಿಕೆ ಮುಗಿದಿದೆ. ಯುದ್ಧ ಶುರು ಆಗಿದೆ ಅಂತಲೇ ಬರೆದುಕೊಂಡಿದ್ದಾರೆ.
ಯುದ್ಧ ಶುರು…
(ಚಿತ್ರ ಕೃಪೆ: ಅನೂಪ್ ಭಂಡಾರಿ ಇನ್ಸ್ಟಾಗ್ರಾಮ್)
ಇದನ್ನ ಅವರ ಮಾತಿನಲ್ಲಿಯೇ ಹೇಳೋದಾದರೆ, ಅದು ಈ ರೀತಿ ಇದೆ ಓದಿ; “The wait ends…The war begins! ನಿಮ್ಮ ಪ್ರೀತಿ ಕಡಿಮೆಯಾಗಲಿಲ್ಲ, ನಮ್ಮ ನಂಬಿಕೆ ಕುಗ್ಗಲಿಲ್ಲ. ಧನ್ಯವಾದಗಳು!”
ಈ ಚಿತ್ರದ ಶೂಟಿಂಗ್ ಎಲ್ಲಿ ನಡೀತಿದೆ ಅನ್ನುವ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಪೂರ್ತಿ ಆಗಿ ಸಿಗೋದಿಲ್ಲ, ಬೆಂಗಳೂರಿನ ಕನಕಪುರ ರೋಡ್ ಅನ್ನುವ ಮಾಹಿತಿ ಮಾತ್ರ ಸಿಗುತ್ತದೆ.
ಈ ಹಂತದಲ್ಲಿ ಏನು ಚಿತ್ರೀಕರಣ ಮಾಡ್ತಿದ್ದಾರೆ ಅನ್ನುವ ಪ್ರಶ್ನೆಗೂ ಉತ್ತರ ಸಿಗೋದಿಲ್ಲ. ಆದರೆ, ಅನೂಪ್ ಭಂಡಾರಿ ಅವರ ಪೋಸ್ಟ್ ಅನ್ನ ಗಮನಿಸಿದ್ರೆ ಒಂದು ವಿಷಯ ತಿಳಿಯುತ್ತದೆ.
ಈ ಒಂದು ಮಾತು ಎರಡು ಅರ್ಥ ಕೊಡುತ್ತದೆ. ಒಂದು ದೊಡ್ಡ ಪ್ರಾಜೆಕ್ಟ್ ಅನ್ನೋದು ಅಷ್ಟು ಸುಲಭವಲ್ಲ. ಅದು ಒಂದು ರೀತಿ ಯುದ್ಧ ಗೆದ್ದ ಹಾಗೇನೆ ಬಿಡಿ ಅನ್ನುವ ಅರ್ಥನೂ ಬರುತ್ತದೆ.
ಅನೂಪ್ ಕನಸಿನ ಪ್ರಾಜೆಕ್ಟ್
ಇನ್ನೂ ಒಂದು ಅರ್ಥ ಏನು ಗೊತ್ತಾ? ಬಹುಶಃ ಈ ಹಂತದಲ್ಲಿ ಯುದ್ಧದ ದೃಶ್ಯಗಳನ್ನ ತೆಗೆಯುತ್ತಿದ್ದಾರೆ ಅಂತಲೂ ಗೆಸ್ ಮಾಡಬಹುದು. ಆದರೆ, ಈ ಬಗ್ಗೆ ಯಾರು ಇನ್ನು ಏನೂ ಹೇಳಿಕೊಂಡಿಲ್ಲ ನೋಡಿ.
ಅನೂಪ್ ಭಂಡಾರಿ ಈ ಚಿತ್ರಕ್ಕಾಗಿಯೇ ಸಾಕಷ್ಟು ವರ್ಕ್ ಮಾಡಿದ್ದಾರೆ. ಸ್ಕ್ರಿಪ್ಟ್ ಮೇಲೆ ಐದಾರು ವರ್ಷವೇ ಕೆಲಸ ಮಾಡಿದ್ದಾರೆ. ಸುದೀಪ್ ಅವರ ಮಾರ್ಕ್ ಮತ್ತು ಮ್ಯಾಕ್ಸ್ ಬರುವ ಮುಂಚೇನೆ ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದಾರೆ.
ವಿಕ್ರಾಂತ್ ರೋಣ ಚಿತ್ರದಲ್ಲಿ ಒಂದಷ್ಟು ಪ್ರಯೋಗಳನ್ನ ಮಾಡಿದ್ದರು. ಕಾರಣ, ಈ ಒಂದು ಬಿಲ್ಲ ರಂಗ ಬಾಷಾ ಚಿತ್ರಕ್ಕಾಗಿಯೇ ವಿಕ್ರಾಂತ್ ರೋಣ ಶುರು ಮಾಡಿದ್ದರು ಅನ್ನುವ ಮಾತು ಇದೆ. ವಿಕ್ರಾಂತ್ ರೋಣ ಸಕ್ಸಸ್ ಆದ್ಮೇಲೇನೆ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಕೈಹಾಕಿದರು ಅನ್ನುವ ಮಾತುಗಳೂ ಇವೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 26, 2026 12:21 PM IST













