Street Dogs: ಬೀದಿನಾಯಿಗಳ ತಂಟೆಗೆ ಹೋದರೆ ಕಂಬಿ ಎಣಿಸೋದು ಗ್ಯಾರಂಟಿ, GBA ಜಾರಿಗೆ ತಂತು 4 ಕಠಿಣ ನಿಯಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

GBA ನಿಯಮ


Last Updated:

ಸುಪ್ರೀಂ ಕೋರ್ಟ್ ಆದೇಶದ ನಂತರ GBA ಹೊಸ ರೂಲ್ಸ್ ಜಾರಿ, ಬೀದಿ ನಾಯಿಗಳಿಗೆ ನಿಗದಿತ ಫೀಡಿಂಗ್ ಸ್ಪಾಟ್ ಮಾತ್ರ, ನಾಗರಿಕರು ನಾಯಿಗಳನ್ನು ಶಿಫ್ಟ್ ಮಾಡೋದಕ್ಕೆ ನಿಷೇಧ, ಕಿರುಕುಳಕ್ಕೆ ಕೇಸ್, 1533 ಸಹಾಯವಾಣಿ.

GBA ನಿಯಮ
GBA ನಿಯಮ

ಬೆಂಗಳೂರು: ನೀವೇನಾದರೂ ನಿಮ್ಮ ಏರಿಯಾದಲ್ಲಿರುವ ಬೀದಿ ನಾಯಿಗಳ (Stray Dogs) ಕಾಟ ತಾಳಲಾರದೆ, ಅವುಗಳನ್ನು ಹಿಡಿದು ಬೇರೆ ಕಡೆ ಬಿಡಲು ಪ್ಲಾನ್ (Plan) ಮಾಡಿದ್ದೀರಾ? ಇಲ್ಲವೇ, ನಾಯಿಗಳಿಗೆ ಊಟ ಹಾಕುವವರ ಜೊತೆ ಜಗಳಕ್ಕೆ ಇಳಿದಿದ್ದೀರಾ? ಹಾಗಾದರೆ ಈ ಸ್ಟೋರಿ ನೀವು ಓದಲೇಬೇಕು! ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ‘ಬೃಹತ್‌ ಬೆಂಗಳೂರು ಪ್ರಾಧಿಕಾರ’ (GBA) ಹೊಸ ರೂಲ್ಸ್ ಜಾರಿ ಮಾಡಿದ್ದು, ನಿಯಮ (Rules) ಮೀರಿದರೆ ಕಂಬಿ ಎಣಿಸುವುದು ಗ್ಯಾರಂಟಿ!

ನಿನ್ನೆಯಿಂದಲೇ ಆದೇಶ ಜಾರಿ

ದಿನಾಂಕ 11.06.2026 ರಂದು GBA ಬಿಡುಗಡೆ ಮಾಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಹಲವು ನಿರ್ಣಾಯಕ ವಿಷಯಗಳನ್ನು ಪ್ರಾಧಿಕಾರ ಹೊರಡಿಸಿದೆ. ಮುಖ್ಯವಾಗಿ ಈ 4 ಪಾಯಿಂಟ್‌ಗಳನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು! ಹಾಗಾದರೆ ಏನದು ಅತೀ ಮುಖ್ಯವಾದ 4 ಪಾಯಿಂಟ್?‌ ಇಲ್ಲಿದೆ ವಿವರ.

ಬೀದಿ ನಾಯಿ ಪ್ರಿಯರಿಗೆ & ವಿರೋಧಿಗಳಿಗೆ GBA ಕೊಟ್ಟ ಖಡಕ್ ವಾರ್ನಿಂಗ್‌ಗಳು!

ಎಲ್ಲೆಂದರಲ್ಲಿ ಬಿಸ್ಕೆಟ್ ಹಾಕುವಂತಿಲ್ಲ!: ಬೀದಿ ನಾಯಿಗಳಿಗೆ ಊಟ ಹಾಕುವುದು ನಿಷೇಧವಿಲ್ಲ. ಆದರೆ, ಇನ್ಮುಂದೆ ಎಲ್ಲೆಂದರಲ್ಲಿ ಊಟ, ಬಿಸ್ಕೆಟ್ ಹಾಕುವಂತಿಲ್ಲ! GBA ಗುರುತಿಸಿದ ನಿಗದಿತ ಜಾಗದಲ್ಲಿ (Feeding spot) ಮಾತ್ರ ಆಹಾರ ನೀಡಬೇಕು. ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಫೀಡಿಂಗ್ ಸ್ಪಾಟ್‌ಗಳನ್ನು ಮಾಡಲಾಗುತ್ತಿದೆ.

ನಾಯಿಗಳನ್ನು ಓಡಿಸಿದರೆ ಬೀಳುತ್ತೆ ಕೇಸ್!:  ಯಾವುದೇ ವ್ಯಕ್ತಿಗಳು ಅಥವಾ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳು (RWA) ತಾವೇ ಖುದ್ದಾಗಿ ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ ಸಾಗಿಸುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಅದು ಕಾನೂನು ಪ್ರಕಾರ ದೊಡ್ಡ ಅಪರಾಧ!

ಹಾಗಾದರೆ ನಾಯಿಗಳನ್ನು ಶಿಫ್ಟ್ ಮಾಡೋದು ಯಾರು?: ಸುಪ್ರೀಂ ಕೋರ್ಟ್ ಆದೇಶದಂತೆ, ಕೇವಲ ೫ ಮುನ್ಸಿಪಲ್ ಕಾರ್ಪೊರೇಶನ್‌ಗಳ ‘ನಿಯೋಜಿತ ಅಧಿಕಾರಿಗಳು’ ಮಾತ್ರ ಸ್ಥಳಾಂತರಕ್ಕೆ ಗುರಿಯಾದ ಪ್ರದೇಶಗಳಿಂದ ನಾಯಿಗಳನ್ನು ಹಿಡಿದು ಅಧಿಕೃತ ಶೆಲ್ಟರ್‌ಗಳಿಗೆ ಶಿಫ್ಟ್ ಮಾಡಲಿದ್ದಾರೆ.
ನಾಯಿಗಳಿಗೆ ಕಲ್ಲೆಸೆದರೆ ಹುಷಾರ್!:  ಬೀದಿ ನಾಯಿಗಳಿಗೆ ಕಿರುಕುಳ ನೀಡುವುದು, ಹಲ್ಲೆ ಮಾಡುವುದು ಅಥವಾ ಹಿಂಸಿಸುವುದು ಕಾನೂನುಬಾಹಿರ. ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಏರಿಯಾದಲ್ಲಿ ಫೀಡಿಂಗ್ ಸ್ಪಾಟ್ ಬೇಕಾ? ಇಲ್ಲಿದೆ ಪರಿಹಾರ!

ನಿಮ್ಮ ಬಡಾವಣೆಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಲು ಅಧಿಕೃತ ಜಾಗವನ್ನು ಗುರುತಿಸಬೇಕೆ? ಹಾಗಾದರೆ ತಕ್ಷಣವೇ ಗ್ರೇಟರ್ ಬೆಂಗಳೂರು ಅಥಾರಿಟಿಯ ಸಹಾಯವಾಣಿ 1533 ಗೆ ಕರೆ ಮಾಡಿ ಮನವಿ ಸಲ್ಲಿಸಬಹುದು. ಬೀದಿ ನಾಯಿಗಳ ವಿಚಾರದಲ್ಲಿ ಪ್ರಾಣಿ ದಯಾ ಸಂಘಟನೆಗಳು, ನಾಗರಿಕರು ಹಾಗೂ RWA ಗಳ ನಡುವೆ ಜಗಳ ಬೇಡ. ಸಮುದಾಯದ ಸಾಮರಸ್ಯ ಮತ್ತು ಪ್ರಾಣಿಗಳ ಕಲ್ಯಾಣಕ್ಕಾಗಿ ಪರಸ್ಪರ ಗೌರವ ಮತ್ತು ಸಹಕಾರದಿಂದ ವರ್ತಿಸಿ ಎಂದು ‘ಗ್ರೇಟರ್ ಬೆಂಗಳೂರು ಅಥಾರಿಟಿ’ಯ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ  1533 ಅಥವಾ ಪಶುಪಾಲನಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಮೋಹಕತಾರೆಯ ಧನ್ಯವಾದ

ಇದನ್ನೂ ಓದಿ: Rice Price: ಶೀಘ್ರದಲ್ಲೇ ಅಕ್ಕಿ ಸಿಗಲ್ವಾ? ಬರೋಬ್ಬರಿ 150 ರೂಪಾಯಿಯಷ್ಟು ಬೆಲೆ ಏರಿಕೆ!

ಇನ್ನೂ ಈ ವಿಷಯದ ಮಾಹಿತಿಯನ್ನು ರಮ್ಯಾ ತಮ್ಮ X ಖಾತೆಯ ಮೂಲಕ ಹಂಚಿಕೊಂಡು ಬೆಂಗಳೂರು ಪ್ರಾಧಿಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ರಮ್ಯಾ ಬೀದಿನಾಯಿಗಳ ಬಗ್ಗೆ ಅನೇಕ ಪ್ರತಿಭಟನೆಗಳನ್ನು, ಅಭಿಯಾನವನ್ನೂ ಕೈಗೊಂಡಿದ್ದರು. ಒಂದು ಹೋರಾಟದಲ್ಲಿ ತೀರಾ ಭಾವುಕರಾಗಿ ವೈರಲ್‌ ಕೂಡ ಆಗಿದ್ದರು ಅನ್ನೋದನ್ನ ಸ್ಮರಿಸಬಹುದು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports