Last Updated:
ಬೀದಿ ನಾಯಿಗಳ ಹಾವಳಿ ಬಗ್ಗೆ ಜನರು ಅಧಿಕಾರಿಗಳಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಕೆಲವರು ತಮ್ಮ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿರುವುದರಿಂದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಇಲ್ಲಿದೆ ನೋಡಿ.
ಬೀದಿ ನಾಯಿಗಳ (Stray Dogs) ಹಾವಳಿ ಬಗ್ಗೆ ಜನರು ಅಧಿಕಾರಿಗಳಿಗೆ ದೂರು (Complaint) ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಕೆಲವರು ತಮ್ಮ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿರುವುದರಿಂದ ಈ ಘಟನೆ ಸೋಶಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹೌದು, ಮಹಾರಾಷ್ಟ್ರ(Maharashtra)ದ ನಾಸಿಕ್ (Nashik) ಜಿಲ್ಲೆಯ ನಿಫಾಡ್ನಲ್ಲಿ ಈ ವಿಶೇಷ ಘಟನೆ ನಡೆದಿದೆ.
ಬೀದಿ ನಾಯಿಗಳಿಂದ ತೊಂದರೆ ಆಗುತ್ತಿದೆ ಎಂದು ಜನರು ತಿಂಗಳುಗಳಿಂದ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಆಗ ಯುವ ಸೇನಾ ಕಾರ್ಯಕರ್ತರು ನಾಯಿ ಮರಿಗಳನ್ನು ಅಧಿಕಾರಿಯ ಟೇಬಲ್ ಮೇಲೆ ಬಿಟ್ಟು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ. ಇದು ಕೇವಲ ವಿನೂತನ ಪ್ರತಿಭಟನೆ ಅಲ್ಲ, ಸರ್ಕಾರದ ನಿರ್ಲಕ್ಷ್ಯಕ್ಕೆ ಜನರು ತೋರಿಸಿದ ಕೋಪದ ಸಂಕೇತ.
ನಿಫಾಡ್ ನಗರ ಪಂಚಾಯಿತಿ ಮುಖ್ಯ ಅಧಿಕಾರಿ ಧೀರಜ್ ಭಾಮ್ರೆ ಅವರ ಕಚೇರಿಗೆ ಯುವ ಸೇನಾ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧಾವೆ ಮತ್ತು ಅವರ ಸಹಚರರು ಒಳಗೆ ನುಗ್ಗಿದರು. ಅವರು ಚೀಲದಲ್ಲಿ ತಂದ ನಾಯಿ ಮರಿಗಳನ್ನು ಅಧಿಕಾರಿಯ ಟೇಬಲ್ ಮೇಲೆ ಬಿಟ್ಟು “ನಾವು ಆರು ತಿಂಗಳಿಂದ ದೂರು ಕೊಡುತ್ತಿದ್ದೇವೆ. ನೀವು ನೋಡಲಿಲ್ಲ. ಇನ್ನು ಕ್ರಮ ತೆಗೆದುಕೊಳ್ಳದಿದ್ದರೆ ಮತ್ತೆ ನಾಯಿಗಳನ್ನು ತರುತ್ತೇವೆ. ನಾಯಿ ಕಚ್ಚಿದ ಮಕ್ಕಳನ್ನೂ ತರುತ್ತೇವೆ” ಎಂದು ಎಂದು ಆಕ್ರೋಶ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದರು.
ದೇಶದ ಹಲವು ಭಾಗಗಳಲ್ಲಿ ಬೀದಿ ನಾಯಿಗಳ ಹಾವಳಿ ಬಹಳ ಹೆಚ್ಚಾಗಿದೆ. ನಾಯಿಗಳು ಮಕ್ಕಳು, ವಯಸ್ಸಾದವರು ಮತ್ತು ಮಹಿಳೆಯರನ್ನು ಕಚ್ಚುತ್ತವೆ, ಹಿಂದೆ ಬರುತ್ತವೆ. ನಾಯಿಗಳ ಸಂಖ್ಯೆ ಕಡಿಮೆ ಮಾಡುವುದು, ವಂಧ್ಯೀಕರಣ ಮಾಡುವುದು ಮತ್ತು ಆಶ್ರಯ ಕೇಂದ್ರಗಳು ಇಲ್ಲದೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತಿದೆ. ಅಧಿಕಾರಿಗಳು ಟೆಂಡರ್ ಹಾಕಿದ್ದೇವೆ, ಯೋಜನೆ ಇದೆ ಎನ್ನುತ್ತಾರೆ. ಆದರೆ ನಿಜವಾಗಿ ಏನೂ ಬದಲಾಗಿಲ್ಲ. ಜನರ ದೂರುಗಳಿಗೆ ಬೆಲೆ ಇಲ್ಲದಂತಾಗಿದೆ.
Yuva Sena district chief Vikram Randhave reportedly released 4–5 stray dogs inside the Niphad Nagar Panchayat chief officer’s office to protest the growing stray dog menace and alleged inaction by the civic body. 💀😭 pic.twitter.com/0wgQpHP00l
— Ghar Ke Kalesh (@gharkekalesh) September 16, 2026
ನಿಫಾಡ್ ನಗರ ಪಂಚಾಯತ್ ಕಚೇರಿಗೆ ಜನರು ಚೀಲದಲ್ಲಿ ನಾಯಿ ಮರಿಗಳನ್ನು ತಂದು ಅಧಿಕಾರಿ ಟೇಬಲ್ ಮೇಲೆ ಬಿಟ್ಟು ಹೊಸ ರೀತಿಯಲ್ಲಿ ನಡೆಸಿದ ಪ್ರತಿಭಟನೆಗೆ ವಿರೋಧ ವ್ಯಕ್ತವಾಗುತ್ತಿದೆ. ಪ್ರಾಣಿಗಳನ್ನು ಹೀಗೆ ಬಳಸುವುದು ಸರಿಯಲ್ಲ. ಆದರೆ ನಿಜವಾದ ಸಮಸ್ಯೆಯನ್ನು ನೋಡದೆ ಬಿಡುವುದು ಅದಕ್ಕಿಂತ ದೊಡ್ಡ ತಪ್ಪು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಅಧಿಕಾರಿಗಳು ಜನರ ದೂರುಗಳನ್ನು ಗಂಭೀರವಾಗಿ ತೆಗೆದುಕೊಂಡು ಸಮಯಕ್ಕೆ ಕ್ರಮ ತೆಗೆದುಕೊಂಡರೆ, ಇಂಥ ದೃಶ್ಯಗಳು ಬೇಕಾಗುವುದೇ ಇಲ್ಲ. ನಿಫಾಡ್ನಲ್ಲಿ ನಡೆದ ಈ ಘಟನೆ ಒಂದು ಪಾಠ, ಅಧಿಕಾರಿಗಳು ಜನರ ಮಾತು ಕೇಳದಿದ್ದರೆ, ಅವರು ಸಮಸ್ಯೆಯನ್ನೇ ಹೀಗೆ ತಂದು ತೋರಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾಗಳು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.














