Last Updated:
Spider Man- Brand new day: ಸ್ಪೈಡರ್ ಮ್ಯಾನ್ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಇತ್ತೀಚಿಗೆ ಸಿನಿಮಾ ಪ್ರದರ್ಶನ ವೇಳೆ ವ್ಯಕ್ತಿಗೆ ಪ್ರೇಕ್ಷಕರು ಥಳಿಸಿದ್ದಾರೆ. ಕಾರಣ ಗೊತ್ತಾದ್ರೆ ಇನ್ನೆರಡು ಬೀಳ್ಬೇಕಿತ್ತು ಅಂತೀರಿ.
ಸ್ಪೈಡರ್ ಮ್ಯಾನ್ ಬ್ರ್ಯಾಂಡ್ ನ್ಯೂ ಡೇ (Spider Man brand new day) ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾ ಭಾರತದಲ್ಲಿ 300 ಕೋಟಿ ಬಾಚಿದೆ. ಸಿನಿಮಾಗೆ ಸಿಕ್ಕಾಪಟ್ಟೆ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಹೀಗಿರುವಾಗ ಥಿಯೇಟರ್ ಒಂದರಲ್ಲಿ ಸಿನಿಮಾ ನಡೆಯುವಾಗಲೇ ವ್ಯಕ್ತಿಯೊಬ್ಬರಿಗೆ ಪ್ರೇಕ್ಷಕರು ಥಳಿಸಿದ ಘಟನೆ ನಡೆದಿದೆ. ಯಾಕೆ ಗೊತ್ತಾ?
ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ ಸಿನಿಮಾ ನೋಡಲು ಸಿನಿಮಾ ಮಂದಿರಕ್ಕೆ ಹೋದಾಗ ನಡೆದ ಸಂಭಾಷಣೆಯೊಂದು ಜಗಳದಲ್ಲಿ ಕೊನೆಗೊಂಡಿದಎ. ಸ್ಕ್ರೀನಿಂಗ್ನ ವೀಡಿಯೊ ಈಗ X ನಲ್ಲಿ ವೈರಲ್ ಆಗಿದ್ದು, ಈ ವಿಲಕ್ಷಣ ಘಟನೆಗೆ ಜನ ಪ್ರತಿಕ್ರಿಯಿಸುತ್ತಿದ್ದಾರೆ.
ವೈರಲ್ ಪೋಸ್ಟ್ ಪ್ರಕಾರ, ನಾಲ್ವರು ಸ್ನೇಹಿತರು ಹೊಸದಾಗಿ ಬಿಡುಗಡೆಯಾದ ಸ್ಪೈಡರ್ ಮ್ಯಾನ್ ಚಿತ್ರವನ್ನು ನೋಡಲು ಪ್ಲಾನ್ ಮಾಡಿದ್ದರು. ಬಹಳ ಉತ್ಸಾಹದಿಂದ ಥಿಯೇಟರ್ಗೆ ತೆರಳಿದ್ದರು. ಅವರು ಒಬ್ಬ ಯುವಕ ಮತ್ತು ಅವನ ಗರ್ಲ್ಫ್ರೆಂಡ್ ಪಕ್ಕದಲ್ಲಿ ಕುಳಿತಿದ್ದರು.
ಆ ವ್ಯಕ್ತಿ ಈಗಾಗಲೇ ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ ಅನ್ನು ಒಮ್ಮೆ ವೀಕ್ಷಿಸಿದ್ದು, ಎರಡನೇ ಬಾರಿ ಸಿನಿಮಾ ನೋಡೋಕೆ ಬಂದಿದ್ದ ಎನ್ನಲಾಗಿದೆ. ಸ್ಕ್ರೀನಿಂಗ್ ಸಮಯದಲ್ಲಿ, ಅವನು ತನ್ನ ಫ್ರೆಂಡ್ಗೆ ಸಿನಿಮಾದ ಸ್ಟೋರಿ ಹೇಳುತ್ತಾ, ಸೀನ್ ರಿವೀಲ್ ಮಾಡುತ್ತಿದ್ದ.
“ಅವನು ಈಗಾಗಲೇ ಒಮ್ಮೆ ಸಿನಿಮಾ ನೋಡಿದ್ದ. ಅವಳೊಂದಿಗೆ ಮತ್ತೊಮ್ಮೆ ನೋಡಲು ಬಂದಿದ್ದ. ಸಿನಿಮಾ ನೋಡುತ್ತಿರುವಾಗ, ಅವನು ಅವಳಿಗೆ ಕಥೆಯನ್ನು ಹೇಳುತ್ತಲೇ ಇದ್ದ. ಮುಂದಿನ ದೃಶ್ಯಗಳಲ್ಲಿ ಏನಾಗುತ್ತದೆ ಎಂಬುದರ ಕುರಿತು ಸ್ಪಾಯ್ಲರ್ಗಳನ್ನು ನೀಡುತ್ತಲೇ ಇದ್ದನು” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಈ ಜೋಡಿ ಪಕ್ಕದಲ್ಲಿ ಕುಳಿತಿದ್ದ ನಾಲ್ವರು ಸ್ನೇಹಿತರು ಸಿಟ್ಟಾಗಿದ್ದಾರೆ. ಪೋಸ್ಟ್ನಲ್ಲಿ ಹೇಳಿದಂತೆ, “ಆತ ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಸ್ಪಾಯ್ಲರ್ಗಳನ್ನು ನೀಡುತ್ತಲೇ ಇದ್ದುದರಿಂದ ಅವರ ಪಕ್ಕದಲ್ಲಿ ಕುಳಿತಿದ್ದ ನಾಲ್ವರು ಸ್ನೇಹಿತರ ಉತ್ಸಾಹ ಹಾಳಾಗುತ್ತಿದೆ ಎಂದು ಬರೆಯಲಾಗಿದೆ.
ಕೇಳುವಷ್ಟು ಕೇಳಿ ನಂತರ ಸುಸ್ತಾಗಿ, ಎಲ್ಲಾ ದೃಶ್ಯಗಳ ಎಕ್ಸೈಟ್ಮೆಂಟ್ ಹಾಳುಮಾಡುತ್ತಿದ್ದ ಯುವಕನ ವರ್ತನೆಗೆ ಸುತ್ತ ಕೂತಿದ್ದವರು ಸುಸ್ತಾಗಿದ್ದಾರೆ. ಸ್ನೇಹಿತರ ಗುಂಪು ಸಿನಿಮಾ ಹಾಲ್ ಒಳಗೆ ಆ ವ್ಯಕ್ತಿಗೆ ಥಳಿಸಿದ್ದಾರೆ. ಮಾತಿನ ಚಕಮಕಿಯಾಗಿ ಪ್ರಾರಂಭವಾದ ಜಗಳ ನಂತರ ಹಲ್ಲೆಗೆ ಬದಲಾಗಿದೆ.
“ಕೊನೆಗೆ, ನಾಲ್ವರು ಸ್ನೇಹಿತರು ಸಿನಿಮಾ ಹಾಲ್ ಒಳಗೆ ಯುವಕನೊಂದಿಗೆ ವಾಗ್ವಾದ ನಡೆಸಿದರು. ಜಗಳ ಹೆಚ್ಚಾಯಿತು, ಮತ್ತು ಅವರು ಪರಸ್ಪರ ಹೊಡೆದಾಡಿಕೊಳ್ಳಲು ಪ್ರಾರಂಭಿಸಿದರು, ಥಿಯೇಟರ್ನಾದ್ಯಂತ ಸಂಪೂರ್ಣ ಅವ್ಯವಸ್ಥೆಯನ್ನು ಸೃಷ್ಟಿಸಿದರು” ಎಂದು ವೈರಲ್ ಪೋಸ್ಟ್ ಒಂದರಲ್ಲಿ ಹೇಳಲಾಗಿದೆ.
ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ, ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ ಚಿತ್ರದಲ್ಲಿ ಟಾಮ್ ಹಾಲೆಂಡ್, ಝೆಂಡಾಯಾ, ಜಾಕೋಬ್ ಬಟಾಲನ್, ಮಾರ್ಕ್ ರುಫಲೋ, ಜಾನ್ ಬರ್ನ್ತಾಲ್, ಸ್ಯಾಡಿ ಸಿಂಕ್ ಮತ್ತು ಟ್ರಾಮೆಲ್ ಟಿಲ್ಮನ್ ನಟಿಸಿದ್ದಾರೆ. ಈ ಚಿತ್ರವು ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್ನಲ್ಲಿ ಟಾಮ್ ಹಾಲೆಂಡ್ ನಟಿಸಿದ ನಾಲ್ಕನೇ ಸ್ವತಂತ್ರ ಸ್ಪೈಡರ್ ಮ್ಯಾನ್ ಚಲನಚಿತ್ರವಾಗಿದೆ.
Bangalore [Bangalore],Bangalore,Karnataka
Spider Man: ನಿಮ್ಗೂ ಇದ್ದಾರಾ ಇಂಥ ಫ್ರೆಂಡ್ಸ್? ಸ್ಪೈಡರ್ ಮ್ಯಾನ್ ಮೂವಿ ಶೋ ವೇಳೆ ವ್ಯಕ್ತಿಗೆ ಥಳಿತ! ಕಾರಣ ಕೇಳಿದ್ರೆ ಇನ್ನೆರಡು ಬೀಳ್ಬೇಕಿತ್ತು ಅಂತೀರಿ














