Last Updated:
ಬೆಂಗಳೂರು ಎಸ್‌ಎಂವಿಟಿ ನಿಂದ ಮುಂಬೈ LTT ಗೆ ಹೊಸ ಬೈ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮೇ 19 ರಿಂದ, ಸ್ಲೀಪರ್ ದರ ಸುಮಾರು 550 ರೂಪಾಯಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ನಿಲ್ದಾಣಗಳಲ್ಲಿ ನಿಲುಗಡೆ
ಬೆಂಗಳೂರು: ಬೆಂಗಳೂರಿನಿಂದ ಮುಂಬೈಗೆ (Mumbai) ಆಗಾಗ ಪ್ರಯಾಣ ಬೆಳೆಸುವವರಿಗೆ ನೈರುತ್ಯ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ! ನೀವು ಕಡಿಮೆ ವೆಚ್ಚದಲ್ಲಿ, ಸುರಕ್ಷಿತವಾಗಿ (Safe) ಹಾಗೂ ಆರಾಮದಾಯಕವಾಗಿ ಮುಂಬೈ ತಲುಪಲು ಯೋಚಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸೂಪರ್ ಆಫರ್. ವಿಮಾನದ (Plane) ದುಬಾರಿ ಟಿಕೆಟ್ ಹಾಗೂ ಬಸ್ಸಿನ ಆಯಾಸದ ಪ್ರಯಾಣಕ್ಕೆ (Travel) ಗುಡ್ ಬೈ ಹೇಳಲು ಸಮಯ ಬಂದಿದೆ.
ಇದೇ ಮೇ 19, 2026 ರಿಂದ ಸಂಚಾರ ಆರಂಭಿಸಲಿರುವ ನೂತನ ಬೈ-ವೀಕ್ಲಿ (ವಾರಕ್ಕೆ ಎರಡು ದಿನ) ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರ ಪಾಲಿಗೆ ಸಹಕಾರಿಯಾಗಿದೆ. ಕೇವಲ 550 ರೂಪಾಯಿಗಳಿಂದ ಆರಂಭವಾಗುವ ಟಿಕೆಟ್ ದರದಲ್ಲಿ ನೀವು ಸುಲಭವಾಗಿ ಮುಂಬೈ ತಲುಪಬಹುದು. 17 ಬೋಗಿಗಳನ್ನು (ಕೋಚ್) ಹೊಂದಿರುವ ಈ ನೂತನ ರೈಲಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ಹೊರಡುವ ಈ ನೂತನ ರೈಲು (ಸಂಖ್ಯೆ: 16553), ಮೇ 19 ರಿಂದ ತನ್ನ ಸೇವೆ ಆರಂಭಿಸಲಿದೆ. ವಾರಕ್ಕೆ ಎರಡು ದಿನ ಅಂದರೆ ಪ್ರತಿ ಮಂಗಳವಾರ ಮತ್ತು ಶನಿವಾರದಂದು ರಾತ್ರಿ ಸರಿಯಾಗಿ 8.35 ಕ್ಕೆ ಹೊರಟು, ಮರುದಿನ ರಾತ್ರಿ 8.40ರ ಸುಮಾರಿಗೆ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (LTT) ತಲುಪುತ್ತದೆ. ಅದೇ ರೀತಿ, ಮರಳಿ ಬರುವಾಗ ಮುಂಬೈನಿಂದ ಮೇ 20 ರಿಂದ ರೈಲು (ಸಂಖ್ಯೆ: 16554) ಸೇವೆ ಶುರುವಾಗಲಿದೆ. ಪ್ರತಿ ಭಾನುವಾರ ಮತ್ತು ಬುಧವಾರ ರಾತ್ರಿ 11.15 ಕ್ಕೆ ಹೊರಡುವ ಈ ರೈಲು, ಮರುದಿನ ರಾತ್ರಿ 10.30 ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
ಈ ಪ್ರಯಾಣದಲ್ಲಿ, ಪ್ರಯಾಣಿಕರಿಗೆ 1A, 2A, 3A ಹಾಗೂ ಸ್ಲೀಪರ್ ಕೋಚ್‌ಗಳ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ. ಟಿಕೆಟ್ ದರಗಳು ಸ್ಲೀಪರ್ ಕ್ಲಾಸ್‌ಗೆ ಅಂದಾಜು ₹550 ರಿಂದ ₹650 ರೂಪಾಯಿಗಳಾಗಿದ್ದರೆ, 3A ಗೆ ₹1430-₹1600, 2A ಗೆ ₹2100-₹2300 ಹಾಗೂ ಫಸ್ಟ್ ಕ್ಲಾಸ್ 1A ಗೆ ಅಂದಾಜು ₹3580 ರೂಪಾಯಿಗಳಾಗಿವೆ.
ನಮ್ಮ ಕರ್ನಾಟಕದ ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲ್ಲುತ್ತೆ ಗೊತ್ತಾ?
ರಸ್ತೆ ಪ್ರಯಾಣಕ್ಕಿಂತ ಉಪಯುಕ್ತ
Bangalore [Bangalore],Bangalore,Karnataka













